ನಾಗರ ಹಾವಿಗೆ ಮುತ್ತೇ? ಮುತ್ತು ನೀಡಲು ಬಂದ ಉರಗ ತಜ್ಞನಿಗೇ ಕಚ್ಚಿದ ನಾಗರಾಜ | ವ್ಯಕ್ತಿ ಆಸ್ಪತ್ರೆಗೆ ದಾಖಲು

ನಾಯಿ, ಬೆಕ್ಕು, ಹೀಗೆ ಸಾಕು ಪ್ರಾಣಿಗಳಿಗೆ ಮುತ್ತಿಕ್ಕಿ ಮುದ್ದು ಮಾಡುವುದನ್ನು ನೋಡಿರುತ್ತಿರಾ!! ಆದರೆ ಹಾವಿಗೆ ಮುತ್ತಿಕುವ ವ್ಯಕ್ತಿಯನ್ನು ನೋಡಿದ್ದೀರಾ? ಹಲವು ಮಂದಿ ಈ ಸಾಹಸಕ್ಕೆ ಮುಂದಾಗುತ್ತಾರೆ. ಕೆಲವರ ಅದೃಷ್ಟ ಚೆನ್ನಾಗಿದ್ದರೆ ಏನೂ ಅನಾಹುತ ನಡೆಯಲ್ಲ. ಆದರೂ ಕೆಲವೊಮ್ಮೆ ಗ್ರಹಚಾರ ಕೆಟ್ಟರೆ ನಡೆಯಬಾರದ್ದು ನಡೆಯುತ್ತದೆ. ಇದಕ್ಕೆ ಪೂರಕವಾಗಿಯೇ ಇಲ್ಲೊಂದು ಘಟನೆ ನಡೆದಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಇಲ್ಲೊಬ್ಬ ಉರಗ ಪ್ರೇಮಿ, ಹಾವು ಹಿಡಿದ ಹುಮ್ಮಸ್ಸಿನಲ್ಲಿ ಮುತ್ತಿಕ್ಕಲು ಹೋಗಿ ಅವಾಂತರ ಸೃಷ್ಟಿಸಿಕೊಂಡಿದ್ದಾರೆ. ಹೌದು,
ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ನಗರದ ಉರಗ ತಜ್ಞ ಅಲೆಕ್ಸ್ ಚಿಕ್ಕ ಮಕ್ಕಳೊಂದಿಗೆ ಆಟ ವಾಡುವಂತೆ ಹಾವಿಗೆ ಮುತ್ತಿಕ್ಕಲು ಹೋಗಿದ್ದಾರೆ. ಆದರೆ ನಂತರ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಆದರೆ, ಹಾವು ಕಚ್ಚಿದ ತಕ್ಷಣವೇ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದರಿಂದ ಆಗುವ ಅನಾಹುತ ತಪ್ಪಿದೆ.


Ad Widget

ಹಾವು ಹಿಡಿಯುವುದರಲ್ಲಿ ನುರಿತರಾದ ಅಲೆಕ್ಸ್​ ಹಾವು ಹಿಡಿದ ಸಂತೋಷದಲ್ಲಿ ಮತ್ತಿಕ್ಕಲು ಹೋಗಿ ಕಚ್ಚಿಸಿಕೊಂಡು ಕೂಡಲೇ ಆಸ್ಪತ್ರೆಗೆ ತೆರಳಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಸಾಕು ಪ್ರಾಣಿಗಳೇ ಆಗಲಿ , ಬೇರೆ ಪ್ರಾಣಿಗಳೊಂದಿಗೆ ಹುಡುಗಾಟ ವಾಡುವಾಗ ಎಚ್ಚರದಿಂದ ಇರಬೇಕು.ಇಲ್ಲದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಸಂಶಯವಿಲ್ಲ.

error: Content is protected !!
Scroll to Top
%d bloggers like this: