ಈಗಿನ ವಾತಾವರಣಕ್ಕೆ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ. ಅದರಲ್ಲೂ ಕೂದಲಿನ ಸಮಸ್ಯೆಗಳು ನೂರಾರು. ಉದುರುವುದು, ಸೀಲುವುದು ಜೊತೆಗೆ ಹೊಟ್ಟು. ಈ ರೀತಿಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೀರ? ಯಾವ್ ಯಾವುದೋ ಶ್ಯಾಂಪೂ ಬಳಸಿ ಸಮಸ್ಯೆಯನ್ನೂ ಇನ್ನೂ ದೊಡ್ಡ ಮಾಡಿಕೊಳ್ತಾ ಇದ್ದೀರಾ? ಇಲ್ಲಿದೆ ಸಲ್ಯೋಷನ್
ಹೌದು. ಹೊಟ್ಟು ನಿವಾರಣೆಗೆ ಜಾಹೀರಾತುಗಳನ್ನು ನೋಡಿ ಅದರ ಮೊರೆ ಹೋಗ್ಬೇಡಿ. ಯಾಕೆಂದ್ರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಎಲ್ಲಾ ಶ್ಯಾಂಪೂ ಎಲ್ಲರಿಗೂ ಆಗುವುದಿಲ್ಲ.
ಹಾಗಾದರೆ ಈ ಕೆಳಗೆ ನೀಡಿರುವ ಅತಿ ಸುಲಭ ಮನೆಯಲ್ಲೇ ತಯಾರಿಸಬಹುದಾದಂತಹ ಮದ್ದನ್ನು ಟ್ರೈ ಮಾಡಿ.
- ದಾಸವಾಳದ ಎಲೆಗಳನ್ನು ನೆನೆಸಿ ನಂತರ ಚೆನ್ನಾಗಿ ನುಣ್ಣಗೆ ಮಾಡಿ ಇದಕ್ಕೆ ಬಿಳಿ ದಾಸವಾಳ 2 ಅಥವಾ 4 ಹಾಕಿ. ಒಟ್ಟು ಮಿಶ್ರಣ ಮಾಡಿ ಹಚ್ಚಿ. 1 ಗಂಟೆಗಳ ಕಾಲ ಬಿಟ್ಟು ತಲೆ ಸ್ನಾನ ಮಾಡಿ. ಹೀಗೆ ತಿಂಗಳಿಗೆ 3 ಬಾರಿ ಮಾಡುವುದರಿಂದ ಹೊಟ್ಟು ನಿವಾರಣೆ ಆಗುತ್ತದೆ.
- ತಲೆಗೆ ಕೊಬ್ಬರಿ ಎಣ್ಣೆ ಹಚ್ಚಬೇಕು. ಕೋಕೋ ನಟ್ ಎಣ್ಣೆ ತುಂಬ ಬರುತ್ತವೆ. ಹೀಗಾಗಿ ಶುದ್ಧ ಎಣ್ಣೆ ತೆಗೆದು ಅದನ್ನು ನಿಮ್ಮ ಕೂದಲಿಗೆ ಹಚ್ಚುವ ಮೊದಲು ಉಗುರು ಬೆಚ್ಚಗೆ ಬಿಸಿ ಮಾಡಿ ಹಚ್ಚಬೇಕು. ಇದು ತುಂಬಾ ಉತ್ತಮ ವಿಧ.
- ಲಿಂಬೆ ರಸ : ಬಿಳಿ ಕೂದಲು ಇರುವವರು ಲಿಂಬೆ ರಸ ಹಚ್ಚಬೇಡಿ. ಯಾಕೆಂದ್ರೆ ಇದರಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಹುಳಿ ಪ್ರಮಾಣವು ಹೆಚ್ಚಿರುತ್ತದೆ. ಇದರಿಂದ ಬಿಳಿ ಕೂಡಲು ಇನ್ನಷ್ಟು ಬೆಳೆಯುತ್ತದೆ. ಹಾಗಾಗಿ ಹೊಟ್ಟು ಇರುವವರು ಈ ರಸವನ್ನು ಕೂದಲಿಗೆ ಹಚ್ಚಿ.
ಈ ರೀತಿಯ ಸಣ್ಣ ಪುಟ್ಟ ಮನೆಮದ್ದುಗಳಿಂದ ಹೊಟ್ಟು / ಡ್ಯಾಂಡ್ರಫ್ ನಿವಾರಣೆ ಆಗಲು ಸಾಧ್ಯ.