ಟಾಲಿವುಡ್ ಬೆಡಗಿಯಾದ ಸಮಂತ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹೀರೋಯಿನ್ ಗಳಲ್ಲಿ ಒಬ್ಬಳು. ಇತ್ತೀಚೆಗೆ ಅಷ್ಟೇ ಹೂ ಆಂಟ ವಾ ಮಾಮ ಸಾಂಗ್ ಗೆ ಮೈ ಬಳುಕಿಸಿ ಸಖತ್ ಫೇಮಸ್ ಆಗಿದ್ಲು. ಇದರಿಂದ ಆಕೆಯ ಫ್ಯಾನ್ಸ್ ಇನ್ನು ಹೆಚ್ಚಾಗಿದ್ದು ಇದೀಗ ಮತ್ತೊಂದು ನ್ಯೂಸ್ ಕೊಟ್ಟಿದ್ದಾರೆ.
ಗುಣಶೇಖರ್ ನಿರ್ದೇಶನದ ‘ಶಾಕುಂತಲಂ’ ಸಿನಿಮಾದಲ್ಲಿ ಸಮಂತಾ ಟೈಟಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ನವೆಂಬರ್ 4 ರಂದು ತೆರೆಯ ಮೇಲೆ ಕಾಣಬಹುದು ಎಂದು ಚಿತ್ರದ ನಿರ್ದೇಶಕರು ಹೇಳಿದ್ದರು.
ಆದರೆ ಆ ದಿನಾಂಕಕ್ಕೆ ಈ ಸಿನಿಮಾ ಬರುತ್ತಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರೆ. ಇದರಿಂದ ಸಮಂತಾ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ. ನವೆಂಬರ್ 4ಕ್ಕೆ ಈ ಸಿನಿಮಾಗೆ ಸಂಬಂಧಿಸಿದ ಗ್ರಾಫಿಕ್ಸ್ ಕೆಲಸಗಳು ಇನ್ನು ಮುಗಿಯುವುದಿಲ್ಲ ಎಂಬ ಅಪ್ಡೇಟ್ ಬಂದಿದೆ.

ಈ ಸಿನಿಮಾ 3D ರೀತಿಯಲ್ಲಿ ತರಬೇಕು ಎಂದು ಸಿನಿಮಾ ತಂಡ ಯೋಚಿಸಿದ್ದು, ಅದರ ಕೆಲಸ ಇನ್ನು ಮುಗಿದಿಲ್ಲ ಎಂಬುದು ಚಿತ್ರದ ತಂಡ ಹೇಳಿದೆ. ಈ ವಿಷಯಗಳು ಸಮಂತಾ ಅಭಿಮಾನಿಗಳಿಗೆ ಬೇಸರವನ್ನು ತಂದಿದೆ.