ಬಾಯಿತೆರೆದು ಕಿರುನಿದ್ದೆಗೆ ಜಾರಿದ ಮಹಿಳೆಯ ಮುಖಕ್ಕೆ ಮಲ ವಿಸರ್ಜಿಸಿದ ನಾಯಿ | ತೀವ್ರ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲು

ವಿಶ್ವಾಸಾರ್ಹ ಪ್ರಾಣಿಗಳಲ್ಲಿ ಅಗ್ರಸ್ಥಾನದಲ್ಲಿರುವ ನಾಯಿಗಳು ಜನರೊಂದಿಗೆ ಬೆರೆತು, ಮನೆಯ ಸದಸ್ಯರಂತೆ ಜೀವಿಸುವುದು ಸಾಮಾನ್ಯ. ಮನುಷ್ಯರ ಭಾವನೆಗಳಿಗೆ ಸ್ಪಂದಿಸುವ ಜೊತೆಗೆ ತನ್ನನ್ನು ಸಾಕಿದವರಿಗೆ ಬೇರೆಯವರಿಂದ ತೊಂದರೆ ಎದುರಾದರೆ ತಾನೇ ಎದುರು ನಿಂತು ನಿಭಾಯಿಸುವ ಮಟ್ಟಿಗೆ ನಾಯಿ ಎಂಬ ಸಾಕು ಪ್ರಾಣಿ ಜನರೊಂದಿಗೆ ಬೆರೆತು ಬಿಡುತ್ತವೆ.

ಸಾಕು ನಾಯಿಗೆ ಸರಿಯಾದ ತರಬೇತಿ ನೀಡುವುದು ಅವಶ್ಯಕವಾಗಿದೆ. ತರಬೇತಿ ಪಡೆಯದಿರುವ ಸಾಕುಪ್ರಾಣಿಗಳು ಅಪಾಯವಾಗಿ ಪರಿಣಮಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿರುವ ಘಟನೆಯೊಂದು ಇಂಗ್ಲೆಂಡ್‌ನಲ್ಲಿ ನಡೆದಿದೆ.

ಇಂಗ್ಲೆಂಡ್‌ನ ಬ್ರಿಸ್ಟಲ್‌ನ 51 ವರ್ಷದ ಅಮಂಡಾ ಗೊಮ್ಮೊ ಎಂಬವರಿಗೆ ಆಕೆಯ ಮುದ್ದಿನ ನಾಯಿಮರಿಯಿಂದ ಜೀವಕ್ಕೆ ಕುತ್ತು ಬಂದಿದ್ದು, ಅಚ್ಚರಿಯ ರೀತಿಯಲ್ಲಿ ನಾಯಿ ಮರಿ ಆಕೆಯ ಮುಖದ ಮೇಲೆ ಮಲ ವಿಸರ್ಜನೆ ಮಾಡಿದೆ. ಇದರಿಂದ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಅಮಂಡಾ ಬಾಯಿ ತೆರೆದು ಮಧ್ಯಾಹ್ನ ಕಿರು ನಿದ್ದೆ ಮಾಡುವಾಗ ಈ ಘಟನೆ ನಡೆದಿದ್ದು, ಅವಳು ನಿದ್ರಿಸುತ್ತಿದ್ದಾಗ ಮುದ್ದಿನ ನಾಯಿ ಚಿಹೋವಾ ಬೆಲ್ಲೆ ಮುಖದಾದ್ಯಂತ ಮಲ ವಿಸರ್ಜಿಸಿ ಬಾಯಿಯೊಳಗೂ ಹೋಗಿದೆ. ತಕ್ಷಣ ಮಲಗಿದ್ದವಳು ಎಚ್ಚರಗೊಂಡು ಮುಖ ತೊಳೆಯಲು ಹೋದಾಗ ಸ್ನಾನದ ಕೋಣೆಯಲ್ಲಿ‌ ಮಗ ಇದ್ದುದರಿಂದ ಕೆಲ ಸಮಯ ಒದ್ದಾಡಿದ್ದಾಳೆ.

ಅಮಂಡಾ ಕೆಲ ಗಂಟೆಗಳ ಕಾಲ ತೀವ್ರವಾಗಿ ಕಷ್ಟಪಟ್ಟು ನಾಯಿಯ ಮಲವನ್ನು ಹೊರಕಕ್ಕಿದ್ದಾಳೆ. ಇದಾದ ಕೆಲದಿನಗಳಲ್ಲಿ ಅನಾರೋಗ್ಯದ ರೋಗಲಕ್ಷಣ ಕಾಣಿಸಿ ಪರಿಸ್ಥಿತಿಯು ಹದಗೆಟ್ಟು ತೀವ್ರವಾದ ಅತಿಸಾರದಿಂದಾಗಿ ಮೂತ್ರಪಿಂಡಗಳು ಕುಗ್ಗಿದ ಅನುಭವವಾಗಿದೆ.

ಹಾಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಜಠರಗರುಳಿನ ಸೋಂಕು ಕಾಣಿಸಿಕೊಂಡಿದೆ. ಅಮಂಡಾ ಮೂರು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಎಲೆಕ್ಟ್ರೋಲೈಟ್‌ಗಳು ಮತ್ತು ಗ್ಲೂಕೋಸ್‌ನೊಂದಿಗೆ ರೀ ಹೈಡ್ರೇಟ್ ಮಾಡಿದ್ದಾರೆ. ಇಷ್ಟಾದರೂ, ಆ ಮಹಿಳೆ ತನ್ನ ಚಿಹೋವಾವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದು ನಾಯಿಯನ್ನು ಕ್ಷಮಿಸಿದ್ದೇನೆ ಎಂದು ಹೇಳಿದ್ದು, ಭವಿಷ್ಯದಲ್ಲಿ ಮಲಗುವ ಸ್ಥಳದ ಬಗ್ಗೆ ಹೆಚ್ಚು ಜಾಗರೂಕಳಾಗಿರಲು ತೀರ್ಮಾನಿಸಿದ್ದಾಳೆ.

Leave A Reply

Your email address will not be published.