Men Fertility Health : ನಪುಂಸಕತೆ ಹೋಗಲಾಡಿಸಲು ಕೊಬ್ಬು ಕರಗಿಸುವುದು ಉತ್ತಮ!!!

ಒತ್ತಡಯುತ ಜೀವನ ಶೈಲಿಯಲ್ಲಿ ನಿದ್ರಾಹೀನತೆ, ಆಹಾರ ಕ್ರಮದಲ್ಲಿ ಬದಲಾವಣೆಗಳಾಗಿ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚೆಗೆ ಪುರುಷರಲ್ಲಿ ನಪುಂಸಕತೆ ಹೆಚ್ಚಾಗುತ್ತಿದೆ ಎಂಬ ವರದಿಗಳನ್ನು ನೀವು ಕೇಳಿರಬಹುದು. ನಪುಂಸಕತೆಯೂ ಆಧುನಿಕ ಜೀವನಶೈಲಿಯ ಕೊಡುಗೆಯಾಗಿದೆ ಎಂದರೂ ತಪ್ಪಾಗದು.
ಹಲವಾರು ಅನುವಂಶಿಕ ಹಾಗೂ ದೈಹಿಕ ಕಾರಣಗಳಿರಬಹುದಾದರೂ ಕೂಡ ಆಧುನಿಕ ಜೀವನಶೈಲಿ ಕೂಡ ಮೂಲ ಕಾರಣವಾಗಿದೆ. ಏಕೆಂದರೆ, ದೇಹದಲ್ಲಿ ಹೆಚ್ಚಾಗುವ ಕೊಬ್ಬು ಕೂಡ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು. ಕೊಬ್ಬು ಹೆಚ್ಚಾಗುವುದು ನೇರವಾಗಿ ಜೀವನಶೈಲಿಗೆ ಸಂಬಂಧಿಸಿದೆ. ಕೊಲೆಸ್ಟ್ರಾಲ್‌ ಅಥವಾ ಕೊಬ್ಬಿನಲ್ಲಿ ಎರಡು ವಿಧಗಳಿದ್ದು, ಕೆಟ್ಟ ಕೊಲೆಸ್ಟ್ರಾಲ್‌ ಹಾಗೂ ಉತ್ತಮ ಕೊಲೆಸ್ಟ್ರಾಲ್ .

ಉತ್ತಮ ಕೊಬ್ಬು ದೇಹಕ್ಕೆ ಅಗತ್ಯವಾಗಿ ಬೇಕಾಗಿದ್ದು, ದೇಹದ ಅನೇಕ ಕಾರ್ಯಗಳಿಗಿದು ಅನಿವಾರ್ಯವಾಗಿದೆ. ಆದರೆ, ಕೆಟ್ಟ ಕೊಬ್ಬು ನಿಷ್ಪ್ರಯೋಜಕವಾಗಿದೆ.ಕೆಟ್ಟ ಲೈಫ್ ಸ್ಟೈಲ್ನಿಂದ ದೇಹದಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಬೆಳವಣಿಗೆಯಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಹಾಗಾಗಿ, ಆರೋಗ್ಯವಾಗಿರಲು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ರಕ್ತನಾಳಗಳ ಅಡೆತಡೆಗೆ ಕಾರಣವಾಗಬಹುದು, ಅಷ್ಟೇ ಅಲ್ಲ ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.

ಇಂದಿನ ಜೀವನಶೈಲಿಯಿಂದ ಕೊಬ್ಬು ಹೆಚ್ಚು ಸಂಗ್ರಹವಾಗಿ, ಕೊಬ್ಬು ಲಿವರ್‌ ನಲ್ಲಿ ಸೃಷ್ಟಿಯಾಗುತ್ತದೆ. ಅಲ್ಲಿ ಹೆಚ್ಚು ಸಂಗ್ರಹವಾಗುವ ಕೊಬ್ಬನ್ನೇ ಫ್ಯಾಟಿ ಲಿವರ್‌ ಎನ್ನಲಾಗುತ್ತದೆ. ಜೀವಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ಇದು ಅವಶ್ಯಕವಾಗಿದ್ದು, ಆದರೆ ಕೆಟ್ಟ ಕೊಬ್ಬು ಹೆಚ್ಚುವುದರಿಂದ ರಕ್ತದ ಧಮನಿಗಳಲ್ಲಿ ಒತ್ತಡ ಹೆಚ್ಚಾಗುತ್ತದೆ. ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ. ಇಷ್ಟೇ ಅಲ್ಲ, ಪುರುಷರಲ್ಲಿ ಕೆಟ್ಟ ಕೊಬ್ಬಿನಿಂದ ನಿಮಿರುವಿಕೆಯ ಸಮಸ್ಯೆ ಅಥವಾ ಬಂಜೆತನವೂ ಉಂಟಾಗಬಹುದು. ಇದನ್ನು ತಡೆಗಟ್ಟಲು ಕೆಲವು ಮಾರ್ಗೋಪಾಯಗಳನ್ನು ಅನುಸರಿಸುವುದು ಅನಿವಾರ್ಯ.

ಸಿಗರೇಟ್‌ ನಲ್ಲಿ ಹೃದಯದ (Heart) ಸಮಸ್ಯೆಗೆ ಕಾರಣವಾಗುವ ಅನೇಕ ರಾಸಾಯನಿಕಗಳಿರುತ್ತವೆ. ಶ್ವಾಸಕೋಶಗಳಿಗೆ (Lungs) ಕಾರ್ಬನ್‌ ಮೋನೊಆಕ್ಸೈಡ್‌ ಪ್ರವೇಶವಾಗುತ್ತದೆ. ಅವುಗಳ ಮೂಲಕ ಈ ಅಂಶ ರಕ್ತಕ್ಕೆ (Blood) ಸೇರ್ಪಡೆಗೊಳ್ಳುತ್ತದೆ. ರಕ್ತದಲ್ಲಿ ಮೋನೊಆಕ್ಸೈಡ್‌ ಪ್ರವೇಶವಾದಾಗ ಕೆಂಪುರಕ್ತಕಣಗಳಿಗೆ ಆಮ್ಲಜನಕ (Oxygen) ಕಡಿಮೆ ಪ್ರಮಾಣದಲ್ಲಿ ಲಭ್ಯವಾಗಲು ಆರಂಭವಾಗುತ್ತದೆ. ಅಲ್ಲದೆ, ರಕ್ತನಾಳಗಳ ಗೋಡೆಗಳು ಬಿರುಸಾಗಲು ಆರಂಭವಾಗುತ್ತವೆ. ಇದರಿಂದ ಹೃದಯಾಘಾತದ (Heart Attack) ಸಂಭವ ಹೆಚ್ಚುತ್ತದೆ. ರಕ್ತನಾಳಗಳಲ್ಲಿ ಕಟ್ಟಿರುವ ಕೊಬ್ಬು (Fat) ಕರಗುವುದಿಲ್ಲ. ಹಾಗಾಗಿ ಧೂಮಪಾನ ತ್ಯಜಿಸಿದರೆ ಒಳ್ಳೆಯದು.

ಸ್ಯಾಚುರೇಟೆಡ್‌ ಕೊಬ್ಬು ಎಂದರೆ ಕೆಟ್ಟ ಕೊಬ್ಬಿನ ಮೂಲವೇ ಆಗಿದೆ. ಇದನ್ನು ಅನೇಕ ಆಹಾರ ಪದಾರ್ಥಗಳು ಹೆಚ್ಚಿಸುತ್ತವೆ. ಅನ್‌ ಸ್ಯಾಚುರೇಟೆಡ್‌ ಕೊಬ್ಬು ಹೆಚ್ಚಾದರೆ ದೇಹಾರೋಗ್ಯಕ್ಕೆ ಅನುಕೂಲ. ಹೀಗಾಗಿ, ಸಸ್ಯಮೂಲದ ತೈಲ, ನಟ್ಸ್‌ (Nuts), ಮೀನು (Fish)ಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಸ್ಯಾಚುರೇಟೆಡ್‌ ಕೊಬ್ಬನ್ನೇ ಹೆಚ್ಚು ಸೇವನೆ ಮಾಡುವುದರಿಂದ ಲಿವರ್‌ (Liver) ಕಾರ್ಯಕ್ಷಮತೆಯ ವಿಧಾನ ಬದಲಾಗುತ್ತದೆ.

ಕೊಬ್ಬನ್ನು ಕರಗಿಸಲು ಮದ್ಯಪಾನ ಸೇವನೆಯ ಅಭ್ಯಾಸವನ್ನು ಬಿಡುವುದು ಉತ್ತಮ. ಮದ್ಯಪಾನ ಮಾಡುವುದರಿಂದ ಉತ್ತಮ ಹಾಗೂ ಕೆಟ್ಟ ಕೊಬ್ಬು (Bad Cholesterol) ಎರಡೂ ಪ್ರಮಾಣ ಹೆಚ್ಚಾಗುತ್ತದೆ. ಜತೆಗೆ, ಟ್ರೈಗ್ಲಿಸರೈಡ್‌ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ.

ಕೊಬ್ಬನ್ನು ಕರಗಿಸಲು ವ್ಯಾಯಾಮ ಅತ್ಯುತ್ತಮ ಮಾರ್ಗ. ಬೊಜ್ಜು (Obesity) ದೇಹ ಹೊಂದಿರುವವರು ಕಡಿಮೆ ಕೊಬ್ಬಯುಕ್ತ ಆಹಾರ ಸೇವನೆ ಮಾಡುವ ಜತೆಗೆ ದಿನವೂ ವ್ಯಾಯಾಮ ಮಾಡಬೇಕು, ವಾಕಿಂಗ್‌ (Walking), ಜಾಗಿಂಗ್‌, ಹೊಟ್ಟೆ ಕರಗಿಸುವ ವ್ಯಾಯಾಮ ಮಾಡುವುದು ಅಗತ್ಯ.

ಕೊಬ್ಬು ಕರಗಿಸಲು ತೂಕ ಇಳಿಸಿಕೊಳ್ಳಬೇಕಾಗುತ್ತದೆ. ತೂಕ ಇಳಿಸಿಕೊಂಡರೆ ಕೊಬ್ಬಿನ ಸಮಸ್ಯೆ ಅತಿ ಕಡಿಮೆ ಆಗುತ್ತದೆ. ಇದಕ್ಕೆ ಕಟ್ಟುನಿಟ್ಟಿನ ಜೀವನಶೈಲಿ (Lifestyle) ಅಗತ್ಯ. ಬಾಹ್ಯ ತಿಂಡಿತಿನಿಸುಗಳನ್ನು ವರ್ಜಿಸುವುದು, ದೈಹಿಕ ಶ್ರಮದ ಕೆಲಸ ಮಾಡುವುದು, ಆಹಾರ ಸೇವನೆ ಮೇಲೆ ನಿಗಾ ಇಡುವುದನ್ನು ಮಾಡುವ ಮೂಲಕ ಕೊಬ್ಬು ಕರಗುತ್ತದೆ.
ಮೇಲೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸಿದರೆ ಕೊಬ್ಬು ಕರಗಿಸಿ ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗಿ ಅನೇಕ ರೋಗ ರುಜಿನಗಳಿಂದ ಪಾರಾಗಬಹುದು.

Leave A Reply

Your email address will not be published.