ಜಾರಿ ಹೋಯಿತು ಗೋಲ್ಡನ್ ಗರ್ಲ್ “ಬ್ಲೌಸ್” | ಮುಜುಗರ ಪಟ್ಟುಕೊಂಡ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೌತ್ ಮತ್ತು ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸ್ಯಾಂಡಲ್ ವುಡ್ ನಿಂದ ಸಿನಿ ಪಯಣ ಪ್ರಾರಂಭ ಮಾಡಿದ ಈ ಬ್ಯೂಟಿ ಈಗ ಗ್ಲಾಮರ್ ಚೆಲುವೆ ಎಂದೆನಿಸಿಕೊಂಡಿದ್ದಾರೆ.

ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ತನ್ನ ಮೊದಲ ಹಿಂದಿ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಗುಡ್‌ಬೈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಸಿನಿಮಾತಂಡ ಪ್ರಮೋಷನ್ ನಲ್ಲಿ ನಿರತವಾಗಿದೆ. ರಶ್ಮಿಕಾ ಕೂಡಾ ಈ ಸಿನಿಮಾದ ಪ್ರಮೋಷನ್ ಮುಂಬೈನಲ್ಲಿ ಮಾಡುತ್ತಿದ್ದಾರೆ.

ಅಮಿತಾಭ್ ಬಚ್ಚನ್ ಜೊತೆ ಗುಡ್ ಬೈ ಎನ್ನುವ ಬಾಲಿವುಡ್ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಈಗ ಚಿತ್ರದ ಪ್ರಮೋಷನ್ ವೇಳೆ ಡ್ರೆಸ್ ನಿಂದಾಗಿ ಮುಜುಗರಕ್ಕೀಡಾದ ಘಟನೆ ನಡೆದಿದೆ.

ಗುಡ್ ಬೈ ಸಿನಿಮಾ ಪ್ರಚಾರಕ್ಕಾಗಿ ಗ್ಲಾಮರಸ್ ಡ್ರೆಸ್ ನಲ್ಲಿ ಬಂದಿದ್ದ ರಶ್ಮಿಕಾ ನಡೆದು ಬರುತ್ತಿದ್ದಾಗ ಅವರ ಬ್ಲೌಸ್ ಕೊಂಚ ಜಾರಿದ್ದು, ಅತ್ತ ವೇಲ್ ಕೂಡಾ ಹಾರಿದೆ. ಇದರಿಂದ ಮುಜುಗರಕ್ಕೀಡಾದ ರಶ್ಮಿಕಾ ಬ್ಲೌಸ್ ಸರಿಮಾಡುವಷ್ಟರಲ್ಲಿ ಪಕ್ಕದಲ್ಲಿದ್ದ ಅವರ ಸಹಾಯಕಿ ಶಾಲು ಸರಿ ಮಾಡಿ ಸಹಾಯ ಮಾಡಿದರು.

ಇದಕ್ಕೂ ಮೊದಲು ಇತ್ತೀಚೆಗೆ ಈ ಪ್ರಚಾರಕ್ಕೆ ಧರಿಸಿರುವ ಡ್ರೆಸ್ ಫೋಟೋ ಹಂಚಿಕೊಂಡು ‘ಇಂದು ನಾನು ಗೋಲ್ಡನ್ ಗರ್ಲ್. ಎಷ್ಟು ಕೂಲ್ ಆಗಿದೆ. ನಿಮಗಿದು ಲುಕ್ ಇಷ್ಟವಾಯ್ತಾ? ಗುಡ್‌ಬೈ ಪ್ರಚಾರ’ ಎಂದು ಬರೆದುಕೊಂಡಿದ್ದಾರೆ.

‘ನೀವು ಎಂದಿಗೂ ಗೋಲ್ಡನ್ ಯಾವುದಕ್ಕೂ ಕಡಿಮೆ ಇಲ್ಲ’ ಎಂದು ಅಭಿಮಾನಿಗಳು ಪಾಸಿಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ‘ನೀವು ಗೋಲ್ಡನ್ ಗರ್ಲ್ ಆಗಿರುವುದು ಬಾಲಿವುಡ್ ಪ್ರವೇಶಿಸಿದ ನಂತರವೇ’ ಮತ್ತು ‘ಇಷ್ಟೊಂದು ಹಣ ಮಾಡುತ್ತಿರುವಾಗ ನೀವು ಗೋಲ್ಡನ್ ಗರ್ಲ್ ಆಗಿರಲೇ ಬೇಕು’ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

Leave A Reply