UPI Limit : ಯುಪಿಐ ಟ್ರಾನ್ಸಾಕ್ಶನ್ ಲಿಮಿಟ್ ಮುಗಿಯಿತೇ? ಟೆಂಶ್ಶನ್ ಬಿಡಿ, ಈ ರೀತಿ ಪೇಮೆಂಟ್ ಮಾಡಿ!!!

ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಡಿಜಿಟಲ್ ಮಯವಾಗಿದೆ.ಎಲ್ಲೆ ಹೋದರೂ ಮುಂಚಿನಂತೆ ಪರ್ಸ್ನಲ್ಲಿ ಹಣ ಹಿಡಿದೇ ಹೋಗಬೇಕಾದ ಅವಶ್ಯಕತೆ ಇಲ್ಲ. ಮೊಬೈಲ್ ಇಲ್ಲವೇ ಕಾರ್ಡ್ ಇದ್ದರೆ ಸಾಕು ಹಾಗೆಂದು ಹಳ್ಳಿಗಳಿಗೆ ಹೀಗೆ ಹೋದರೆ ಖಂಡಿತ ತಾಪತ್ರಯವಾಗಬಹುದು. ಮನೆಯಲ್ಲಿಯೇ ಕುಳಿತು ಹಣ ವರ್ಗಾವಣೆ, ಬಿಲ್ ಪಾವತಿ, ಮೊಬೈಲ್ , ಟಿ.ವಿ. ರೀಚಾರ್ಜ್ ಹೀಗೆ ನಾನಾ ರೀತಿಯ ಪಾವತಿಗೆ ಗೂಗಲ್ ಪೇ, ಫೋನ್ ಪೇ ಪ್ಲಾಟ್ಫಾರ್ಮ್ ನೆರವಾಗುತ್ತಿವೆ.UPI (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ತಂತ್ರಜ್ಞಾನ ಆಧಾರಿತವಾಗಿ ಕಾರ್ಯನಿರ್ವಹಿಸುವ ಗೂಗಲ್‌ಪೇ, ಫೋನ್‌ಪೇ ಮತ್ತು ಪೇಟಿಎಂ ನಂತಹ ಹಲವು ಆನ್‌ಲೈನ್ ಪೇಮೆಂಟ್ ಅಪ್ಲಿಕೇಷನ್‌ಗಳು ಜನರಿಗೆ ಹೆಚ್ಚು ನೆರವಾಗುತ್ತಿದೆ.ಯಾವುದೇ ಪೇಮೆಂಟ್ ಮಾಡಬೇಕಾದರೂ ಕೂಡ ‘ಯುಪಿಐ ಪೇಮೆಂಟ್’ ಮೂಲಕ ಕ್ಷಣ ಮಾತ್ರದಲ್ಲಿ ಪಾವತಿಸಬಹುದು. ‘ಯುಪಿಐ ಪೇಮೆಂಟ್’ ಮಾಡುವಾಗ ಒಂದು ಟ್ರಾನ್ಸಾಕ್ಶನ್ ಲಿಮಿಟ್ ಮುಗಿದುಹೋಗುವ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಭಾರತೀಯ ರಿಸರ್ವ ಬ್ಯಾಂಕ್ UPI Lite ಸೇವೆಯನ್ನು ಬಿಡುಗಡೆಗೊಳಿಸಿದ್ದು, ಇದರಿಂದ ಒಂದು ದಿನದಲ್ಲಿ ಅನಿಯಮಿತ ವಹಿವಾಟುಗಳನ್ನು ಮಾಡಬಹುದು.

ದೇಶದ ಜನತೆಯ ಸುರಕ್ಷತೆ ಹಾಗೂ ಸರಳತೆ ಎರಡನ್ನೂ ಗಮನದಲ್ಲಿರಿಸಿಕೊಂಡು ಈ ಹೊಸ ಸೇವೆಯನ್ನು ತರಲಾಗಿದೆ. ಇಷ್ಟೇ ಅಲ್ಲದೇ, ಇದರಲ್ಲಿ ಇಂಟರ್‌ನೆಟ್ ಇಲ್ಲದಾಗಲೂ ಹಣ ಕಳುಹಿಸಬಹುದಾದ ವ್ಯವಸ್ಥೆ ಇದೆ. ‘ಯುಪಿಐ ಪೇಮೆಂಟ್’ ಮಾಡುವಾಗ ಒಂದು ಟ್ರಾನ್ಸಾಕ್ಶನ್ ಲಿಮಿಟ್ ಮುಗಿದುಹೋಗುವ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಹಾಗೆಂದ ಮಾತ್ರಕ್ಕೆ, ಟ್ರಾನ್ಸಾಕ್ಶನ್ ಲಿಮಿಟ್ ಹೆಚ್ಚಿಸಲಾಗಿದೆ ಎಂದುಕೊಳ್ಳಬೇಡಿ. ಏಕೆಂದರೆ, ಭಾರತೀಯ ರಿಸರ್ವ್ ಬ್ಯಾಂಕ್ UPI Lite ಸೇವೆಯನ್ನು ಬಿಡುಗಡೆಗೊಳಿಸಿದ್ದು, ಇದರಿಂದ ಒಂದು ದಿನದಲ್ಲಿ ಅನಿಯಮಿತ ವಹಿವಾಟುಗಳನ್ನು ಮಾಡಬಹುದು.

UPI Lite’ ಪೇಮೆಂಟ್ಸ್ ವ್ಯವಸ್ಥೆ: UPI ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದ್ದು, ಅದಕ್ಕಿಂತಲೂ ಸರಳವಾಗಿ ಸೇವೆಗಳನ್ನು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ ಪರಿಚಯಿಸಿರುವ ಹೊಸ ಪೇಮೆಂಟ್ ವ್ಯವಸ್ಥೆ ಇದಾಗಿದೆ. ಇದರ ಸಹಾಯದಿಂದ ಇಂಟರ್‌ನೆಟ್‌ ಇಲ್ಲದಿದ್ದರೂ ಕೂಡ ವೇಗವಾಗಿ ಮತ್ತು ಸರಳವಾಗಿ ಹಣ ಪಾವತಿ ಮಾಡಬಹುದು. ಇದರಲ್ಲಿ ಹಣ ಪಾವತಿ ಮಾಡುವಾಗ ಯುಪಿಐ ಪಿನ್‌ ನಮೂದಿಸಬೇಕಾದ ಅವಶ್ಯಕತೆಯಿಲ್ಲ, ಏಕೆಂದರೆ, ಇದು ಬ್ಯಾಂಕ್ ಖಾತೆಯನ್ನು ನೇರವಾಗಿ ಪ್ರವೇಶಿಸುವ ಬದಲಾಗಿ ಹಣವನ್ನು ವಾಲೆಟ್‌ನಲ್ಲಿ ಇಟ್ಟುಕೊಂಡು, ಹಣವನ್ನು ವರ್ಗಾಯಿಸಬಹುದು ಅಥವಾ ಸ್ವೀಕರಿಸಬಹುದು. ಹಾಗಾಗಿ, ಮೊದಲೇ ಇದರಲ್ಲಿ ನಿಶ್ಚಿತ ಹಣವನ್ನು ಹಾಕಿರಬೇಕು.ಒಂದು ರೀತಿಯಲ್ಲಿ ಈ ಅಪ್ಲಿಕೇಶನ್ ಅನ್ನು ಆನ್‌ಲೈನ್ ವ್ಯಾಲೆಟ್ ಎನ್ನಬಹುದು.

UPI Lite ಒಂದು ರೀತಿಯ ವ್ಯಾಲೆಟ್ ಆಗಿರುವುದರಿಂದ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ (ಇಂಟರ್‌ನೆಟ್ ಹೊಂದಿರುವಾಗ) ವಾಲೆಟ್‌ಗೆ ಹಣವನ್ನು ಸೇರಿಸಬೇಕಾಗುತ್ತದೆ ಮತ್ತು ನಂತರ ಇಂಟರ್ನೆಟ್ ಇಲ್ಲದಿದ್ದರೂ ಸಹ, ಬಳಕೆದಾರರು ತಕ್ಷಣ ಯಾರಿಗಾದರೂ ಹಣವನ್ನು ಕಳುಹಿಸಬಹುದು. ಹೀಗೆ ಹಣವನ್ನು ವರ್ಗಾವಣೆ ಮಾಡಲು ಯಾವುದೇ ಮಿತಿಯನ್ನು ಹೇರಲಾಗಿಲ್ಲ. ಅಂದರೆ, ಒಂದು ದಿನದಲ್ಲಿ ಅನಿಯಮಿತ ವಹಿವಾಟುಗಳನ್ನು ಮಾಡಬಹುದು. ಪೇಮೆಂಟ್ಸ್ ಮಾಡುವಾಗ ಇದು ವ್ಯಾಲೆಟ್‌ನಲ್ಲಿರುವ ಹಣವನ್ನು ನೇರವಾಗಿ ಪ್ರವೇಶಿಸುತ್ತದೆ ಮತ್ತು ಆ ಹಣವನ್ನು ಪೇಮೆಂಟ್ ಮಾಡಲು ಬಳಸಿಕೊಳ್ಳುವುದರಿಂದ ಹಣದ ವರ್ಗಾವಣೆಗೆ ಮಿತಿಯನ್ನು ಹೇರಲಾಗಿಲ್ಲ ಎಂಬುದನ್ನು ಗಮನಿಸಬೇಕು.

UPI Lite ನಲ್ಲಿ ನೀವು ದಿನವೊಂದಕ್ಕೆ ಎಷ್ಟು ವಹಿವಾಟುಗಳನ್ನು ಬೇಕಾದರೂ ನಡೆಸುವುದಕ್ಕೆ ಅವಕಾಶವಿದೆ. ಆದರೆ, ವ್ಯಾಲೆಟ್‌ಗೆ 2000 ರೂ.ವರೆಗೆ ಮಾತ್ರ ಸೇರಿಸುವುದಕ್ಕೆ ಅನುಮತಿಸಲಾಗಿದೆ. ಏಕೆಂದರೆ, ಇದು ಇಂಟರ್‌ನೆಟ್‌ ಇಲ್ಲದೆ ಇರುವಾಗ ಕಾರ್ಯನಿರ್ವಹಿಸುವುದರಿಂದ ಕಡಿಮೆ ಮೌಲ್ಯದ ಪಾವತಿಗಳಿಗೆ ಮಾತ್ರ ಅನುಮತಿಸಲಿದೆ. ಅಲ್ಲದೆ, ಪ್ರತಿ ವಹಿವಾಟಿಗೆ ಗರಿಷ್ಠ 200 ರೂ.ಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗಲಿದೆ. ಪ್ರಸ್ತುತ ಯುಪಿಐ ತಂತ್ರಜ್ಞಾನದಿಂದ ಕೇವಲ 10 ಟ್ರಾನ್ಸಾಕ್ಶನ್ ಗಳನ್ನು ಮಾತ್ರ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ, UPI Lite ನಲ್ಲಿ ಚಿಕ್ಕ ಮೊತ್ತವನ್ನು ಎಷ್ಟೇ ಬಾರಿಯಾದರೂ ಕಳುಹಿಸಬಹುದು. ಇದರಿಂದ ಗ್ರಾಹಕರಿಗೆ ಎದುರಾಗುತ್ತಿದ್ದ ಸಮಸ್ಯೆಯೊಂದು ತಪ್ಪಿದಂತಾಗಿದೆ. UPI ಲೈಟ್‌ಗೆ UPI ಪಿನ್ ನಮೂದಿಸುವ ಅಗತ್ಯವಿಲ್ಲ.UPI Lite ಅಪ್ಲಿಕೇಶನ್ ಜಾರಿಗೆ ಬಂದ ನಂತರ ಫೋನ್ ಪೇ, ಗೂಗಲ್ ಪೇ ಯ ಬಳಕೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ .ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಎರಡು ಅಪ್ಲಿಕೇಶನ್ ಬಳಸುತ್ತಿದ್ದು, UPI Lite ಅಪ್ಲಿಕೇಶನ್ ಜಾರಿಗೆ ಬಂದ ಮೇಲಷ್ಟೇ ಜನರ ಒಲವು ಯಾವ ಅಪ್ಲಿಕೇಶನ್ ಮೇಲಿದೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯ.

Leave A Reply

Your email address will not be published.