Egg Effect : ಈ 5 ವಸ್ತುಗಳನ್ನು ಮೊಟ್ಟೆಯೊಂದಿಗೆ ಖಂಡಿತಾ ಸೇವಿಸಬೇಡಿ |

ಪ್ರೋಟೀನ್ ಯುಕ್ತ ಆಹಾರಗಳ ಪೈಕಿ ಮೊಟ್ಟೆ ಅಗ್ರ ಸ್ಥಾನದಲ್ಲಿದ್ದು, ದಿನ ಚಟುವಟಿಕೆಯಿಂದ ಮತ್ತು ಕ್ರಿಯಾ ಶೀಲವಾಗಿರಲು ದೇಹಕ್ಕೆ ಪ್ರೋಟೀನ್ ಅವಶ್ಯಕವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ ಎ, ಬಿ6, ಬಿ12, ಪ್ರೋಟೀನ್, ಫೋಲೇಟ್, ಕಬ್ಬಿಣ, ಅಮೈನೋ ಆಮ್ಲಗಳು, ರಂಜಕ ಮತ್ತು ಸೆಲೆನಿಯಂ ಅಗತ್ಯ ಅಪರ್ಯಾಪ್ತ ಕೊಬ್ಬಿನಾಮ್ಲಗಳು (ಲಿನೋಲಿಕ್, ಓಲಿಕ್ ಆಮ್ಲ) ಗಳಂತಹ ಅನೇಕ ಪೋಷಕಾಂಶಗಳಿವೆ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಕೆಲ ಪದಾರ್ಥಗಳೊಂದಿಗೆ ಮೊಟ್ಟೆಗಳನ್ನು ಸೇವಿಸಿದರೆ ಅನಾರೋಗ್ಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ.

ಮೊಟ್ಟೆಯೊಂದಿಗೆ ಯಾವ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ ?

ಮೊಟ್ಟೆಗಳೊಂದಿಗೆ ಸಕ್ಕರೆಯನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಮೊಟ್ಟೆಗಳು ಮತ್ತು ಸಕ್ಕರೆಯಿಂದ ಬರುವ ಅಮೈನೋ ಆಮ್ಲಗಳು ದೇಹಕ್ಕೆ ವಿಷಕಾರಿಯಾಗಿ, ಇದರಿಂದ ಮನುಷ್ಯನ ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು. ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವನೆ ಉತ್ತಮ. ಆದರೆ ಮೊಟ್ಟೆಯ ಜೊತೆ ಚಹಾ ಸೇವನೆ ಒಳ್ಳೆಯದಲ್ಲ. ಮೊಟ್ಟೆ ಮತ್ತು ಚಹಾವನ್ನು ಜೊತೆಯಲ್ಲಿ ಸೇವಿಸಿದರೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಿ, ಜೀರ್ಣಕ್ರಿಯೆಗೆ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿದೆ.

ಸೋಯಾ ಹಾಲಿನಲ್ಲಿ ತರಕಾರಿ ಪ್ರೋಟೀನ್ ಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಜೊತೆಗೆ ಮೊಟ್ಟೆ ಪ್ರೋಟೀನ್ ಹೊಂದಿರುವುದರಿಂದ, ಅವುಗಳನ್ನು ಒಟ್ಟಿಗೆ ಸೇವಿಸುವುದರೆ ದೇಹವು ಪ್ರೋಟೀನ್ಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಮೊಟ್ಟೆಗಳು ಮತ್ತು ಬಾಳೆಹಣ್ಣುಗಳು, ಇವೆರಡನ್ನು ಒಟ್ಟಿಗೆ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಕೆಟ್ಟದೆಂದು ಪರಿಗಣಿಸಲಾಗುತ್ತದೆ. ಇದನ್ನು ಒಟ್ಟಿಗೆ ಸೇವಿಸಿದರೆ, ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆ ಕಾಡಬಹುದು. ಬೇಯಿಸಿದ ಮೊಟ್ಟೆ ಮತ್ತು ಮೀನುಗಳನ್ನು ಒಟ್ಟಿಗೆ ತಿನ್ನಬಾರದು. ಇದು ಚರ್ಮದ ಅಲರ್ಜಿಗೆ ಕಾರಣವಾಗಬಹುದು.

ಮೊಟ್ಟೆ ಹಾಗೂ ಪನೀರ್ ಸೇವನೆ ದೇಹಕ್ಕೆ ಹೆಚ್ಚು ಪ್ರೋಟೀನ್ ಗಳನ್ನು ನೀಡುತ್ತದೆ. ಆದರೆ ಮೊಟ್ಟೆ ಹಾಗೂ ಪನ್ನೀರು ಎರಡನ್ನೂ ಒಟ್ಟಿಗೆ ಸೇವನೆ ಮಾಡುವುದರಿಂದ, ಎರಡರಲ್ಲಿ ಇರುವ ಪ್ರೋಟೀನ್ ಅಂಶಗಳು ಅಧಿಕವಾಗಿ ದೇಹಕ್ಕೆ ಸೇರಿ ಜೀರ್ಣಕ್ರಿಯೆಗೆ ತೊಂದರೆ ಮಾಡುತ್ತದೆ.

ಮೊಟ್ಟೆಗಳನ್ನು ತಿಂದ ನಂತರ ಹುಳಿ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಹೃದಯಾಘಾತ ಮತ್ತು ಅನೇಕ ಗಂಭೀರ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಮೊಟ್ಟೆ ಆರೋಗ್ಯಕ್ಕೆ ಉತ್ತಮ ಪೋಷಕಾಂಶ ನೀಡಿದರೂ ಕೂಡ ಕೆಲ ಆಹಾರ ಪದಾರ್ಥದೊಂದಿಗೆ ಸೇವಿಸಿದರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

Leave A Reply

Your email address will not be published.