Health Tips : Chewing Clove | ಲವಂಗವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ? ವೈದ್ಯರ ಉತ್ತಮ ಸಲಹೆ ನಿಮಗಾಗಿ

ಅಡಿಗೆ ಮನೆಯಲ್ಲಿ ಬಳಸುವ, ವಿಶ್ವದ ಅತ್ಯಂತ ಜನಪ್ರಿಯ ಮಸಾಲೆ ಪದಾರ್ಥಗಳಲ್ಲಿ ಒಂದಾದ ಲವಂಗ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನಿಸುವಂಥಹ ಹಲವಾರು ಪ್ರಯೋಜನ ಗಳನ್ನು ಒಳಗೊಂಡಿವೆ. ಇದರ ಚೆಕ್ಕೆ, ಒಣ ಎಲೆ, ಮೊಗ್ಗು, ಹೂವು, ಬೇರು, ಎಣ್ಣೆ, ಎಲ್ಲವೂ ಸುಗಂಧಕರವಾಗಿದ್ದು, ಇದನ್ನು ಉಸಿರಾಟಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಆಯುರ್ವೇದ ಔಷಧಿ ತಯಾರಿಕೆಯಲ್ಲೂ ಔಷಧಿಗಳಲ್ಲಿ ಕೂಡ ಬಳಸಲಾಗುತ್ತದೆ.ಲವಂಗದಲ್ಲಿ ರಂಜಕ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್, ಕಬ್ಬಿಣ ಅಂಶ ಸೇರಿದಂತೆ ಅನೇಕ ಪೋಷಕಾಂಶಗಳಿದ್ದು, ರೋಗನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿದೆ. ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ನೈಸರ್ಗಿಕ ವಸ್ತುವಾಗಿ ಲವಂಗವನ್ನು ಬಳಸಲಾಗುತ್ತಿದ್ದು , ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಅಗಿಯುವುದರಿಂದ ವಿವಿಧ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.ಲವಂಗದಲ್ಲಿರುವ ಪೋಷಕಾಂಶಗಳು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಗೆ ಉತ್ತೇಜನ ನೀಡುವ ಕಾರಣದಿಂದಲೇ ಆಯುರ್ವೇದ ಲವಂಗವನ್ನು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಬಹುದು. ಇದರಲ್ಲಿ ಕರಗುವ ನಾರು ಉತ್ತಮ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆ ಸುಲಭವಾಗಲು ಮತ್ತು ಮಲಬದ್ದತೆಯಿಂದ ತಡೆಯಲು ನೆರವಾಗುತ್ತದೆ. ಲವಂಗ ಸೇವನೆಯಿಂದ ವಾಕರಿಕೆ ಕಡಿಮೆ ಆಗುತ್ತದೆ. ಇದರೊಂದಿಗೆ ಹಲ್ಲಿನ ಆರೋಗ್ಯ ಉತ್ತಮವಾಗುವುದು.ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಪ್ರಯೋಜನೆಗಳು ಇಲ್ಲಿವೆ. ಒಣಗಿದ ಲವಂಗ ಮೊಗ್ಗುಗಳು ಯಕೃತ್ತಿನ ಮೇಲೆ ಹೆಪಟೊ-ರಕ್ಷಣಾತ್ಮಕ ಪರಿಣಾಮವನ್ನು ಬೀರುವುದರೊಂದಿಗೆ , ಹೊಸ ಕೋಶಗಳ ಬೆಳವಣಿಗೆ, ಯಕೃತ್ತಿನ ನಿರ್ವಿಶೀಕರಣವನ್ನು ಉತ್ತೇಜಿಸುವ ಮೂಲಕ ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಥೈಮೋಲ್ ಮತ್ತು ಯುಜೆನಾಲ್‌ನಂತಹ ಸಕ್ರಿಯ ಸಂಯುಕ್ತಗಳ ವ್ಯಾಪ್ತಿಯಿಂದ ರಕ್ಷಣಾತ್ಮಕ ಪರಿಣಾಮವನ್ನು ಬೀರುತ್ತದೆ. ಲವಂಗದಲ್ಲಿರುವ ಯುಜೆನಾಲ್ ನೋವು ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ವಿಶೇಷವಾಗಿ ತಲೆನೋವನ್ನು ಗುಣಪಡಿಸಲು ಇದು ಹೆಚ್ಚು ಬಳಕೆಯಾಗುತ್ತದೆ. ಲವಂಗವನ್ನು ಹಲ್ಲಿನ ನೋವು ನಿವಾರಕವಾಗಿ ಹಿಂದಿನಿಂದಲೂ ಬಳಸಲಾಗುತ್ತದೆ.ಒಂದು ಚಿಟಿಕೆ ಲವಂಗದ ಪುಡಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ರೋಗಿಗಳ ರಕ್ತದ ಸಕ್ಕರೆಯ ನಿರ್ವಹಣೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಲವಂಗದಲ್ಲಿ ಮೂಳೆ ಮತ್ತು ಮೂಳೆಸಂಧುಗಳ ಆರೋಗ್ಯವನ್ನು ಉತ್ತೇಜಿಸುವ ಫ್ಲೇವನಾಯ್ಡುಗಳು, ಮ್ಯಾಂಗನೀಸ್ ಮತ್ತು ಯುಜೆನಾಲ್ ನಂತಹ ಹಲವಾರು ಪೋಷಕಾಂಶಗಳನ್ನು ಹೊಂದಿದೆ.ಬೆಳಗಿನ ಬೇನೆಯಿಂದ ಬಳಲುತ್ತಿರುವವರು ಲವಂಗವನ್ನು ಖಾಲಿ ಹೊಟ್ಟೆಯಲ್ಲಿ ಅಗಿಯುವುದರಿಂದ ಅವರ ಅರಿವಳಿಕೆ ಮತ್ತು ನಂಜುನಿರೋಧಕ ಗುಣಲಕ್ಷಣಗಳಿಂದ ಪ್ರಯೋಜನ ಪಡೆಯಬಹುದು. ಇದು ಲಾಲಾರಸದೊಂದಿಗೆ ಬೆರೆತಾಗ, ಕೆಲವು ಕಿಣ್ವಗಳು ಉತ್ಪತ್ತಿಯಾಗಿ, ವಾಕರಿಕೆ ಸಂಬಂಧಿತ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಲವಂಗಗಳ ಹೆಚ್ಚಿನ ಸೇವನೆಯು ನಿಧಾನವಾದ ರಕ್ತ ಹೆಪ್ಪುಗಟ್ಟುವಿಕೆ, ಅತಿಸಾರ, ವಾಂತಿ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಂಡು ಹೀರುವುದರಿಂದ ಅಸ್ತಮಾ ಮತ್ತು ಉಸಿರಾಟದ ತೊಂದರೆಗಳು ಗುಣವಾಗುತ್ತವೆ.

Leave A Reply

Your email address will not be published.