ಪ್ರೇಮ-ಕಾಮದ ದಾಹಕ್ಕೆ ಬಿದ್ದ ಹೆಂಡತಿ | 13 ವರ್ಷ ಸಂಸಾರ ಮಾಡಿದ ಗಂಡನನ್ನೇ ಕೊಂದು, ನಾಟಕವಾಡಿದಳು!!!

ಪ್ರೀತಿ ಮಾಡಬಾರದು!! ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಪ್ರೇಮಲೋಕದ ಡೈಲಾಗ್ ಅನ್ನು ರಿಯಲ್ ಲೈಫ್ ಸ್ಟೋರಿಗೆ ಅಪ್ಲೈ ಮಾಡಿ, ಗಂಡನನ್ನೇ ಕೊಂದು ಪೊಲೀಸರ ಅತಿಥಿಯಾದ ಘಟನೆಯೊಂದು ಸಿನಿಮೀಯ ಮಾದರಿಯಲ್ಲಿ ಜರುಗಿದೆ.

ಪ್ರೀತಿಯ ನಶೆಯಲ್ಲಿ ಬಿದ್ದು, ಪ್ರೀತಿಸಿ ಮದುವೆಯಾಗಿ 13 ವರ್ಷ ಸುಖಿ ಸಂಸಾರ ನಡೆಸಿ, ಪ್ರೀತಿಗೆ ಸಾಕ್ಷಿಯಂಬಂತೆ ಈ ಜೋಡಿ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದರು. ಆದರೆ 13 ವರ್ಷದ ದಾಂಪತ್ಯ ಜೀವನಕ್ಕೆ ದೊಡ್ಡ ಬ್ರೇಕ್ ಸಿಕ್ಕಿದ್ದು, ಹುಡುಗಿಯ ಹೊಸ ಪ್ರೇಮ ಪುರಾಣದಿಂದ ಗಂಡನನ್ನು ಕೊಲೆಗೈದು, ಪೊಲೀಸ್ ಠಾಣೆಯಲ್ಲಿ ಗಂಡ ಕಣ್ಣೆದುರಿಗೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಎಂದು ದೂರು ನೀಡಿರುವ ಪ್ರಸಂಗ ನಡೆದಿದೆ.

ಟಿವಿಯಲ್ಲಿ ಪ್ರಸಾರವಾಗುವ ಧಾರವಾಹಿಯನ್ನು ಪ್ರೇರಣೆ ಯಾಗಿಸಿಕೊಂಡು ಅದರಲ್ಲಿ ನಡೆದ ಮಾದರಿಯಲ್ಲೆ ವಿಲನ್ ಕೇಸ್ ದಿಕ್ಕು ಬದಲಿಸುವ ತಂತ್ರವನ್ನು ಅನುಸರಿಸಿ, ಪ್ರೀತಿಸಿ ಮದುವೆಯಾದ ಗಂಡನನ್ನು ಪ್ರಿಯಕರನ ನೆರವಿನಿಂದ ಕೊಲೆ ಮಾಡಿ ಪೊಲೀಸರೆದುರು ನವರಂಗಿ ನಾಟಕವಾಡಿ, ಗಂಡ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ದಾಖಲಿಸಿದ್ದಾಳೆ.

ಹೆಂಡತಿ ಕೊಟ್ಟ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಫುಲ್ ಶಾಕ್ ಆಗಿದ್ದು, ಗಂಡ ಸತ್ತು ಬಿದ್ದಿದ್ದ ದೃಶ್ಯ ನೋಡಿ ಪೊಲೀಸರಿಗೆ ಹೆಂಡತಿ ನಾಗಮ್ಮನ ಮೇಲೆ ಅನುಮಾನ ವ್ಯಕ್ತವಾಗಿದೆ. ಶಶಿಕುಮಾರನ ಸಾವಿನ ಬಗ್ಗೆ ತನಿಖೆ ನಡೆಸಿದ ಖಾಕಿ ಪಡೆ, ಕುಟುಂಬದ ಹಿನ್ನೆಲೆ ಗಮನಿಸಿದಾಗ ಲವ್ ಮ್ಯಾರೇಜ್ ಆಗಿ 13ವರ್ಷ ಸುಖವಾಗಿ ಸಂಸಾರ ಮಾಡಿದ್ದ ಜೋಡಿಗೆ ಎರಡು ಮುದ್ದಾದ ಮಕ್ಕಳು ಕೂಡ ಇದ್ದರೂ ಕೂಡ ನಾಗಮ್ಮ ನ ಬಾಳಲ್ಲಿ ಮತ್ತೊಂದು ಪ್ರೇಮ ಪುರಾಣ ಶುರುವಾಗಿ, ಕುಟುಂಬದಲ್ಲಿ ವಿರಸ ಮೂಡಿದೆ. ಹೀಗಾಗಿ ಸೀರಿಯಲ್ ನ ವಿಲನ್ ಮಾದರಿಯಲ್ಲಿ ಕೊಲೆ ಮಾಡಿದ್ದಾಳೆ. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಸಾಬೀತಾಗಿದೆ.

Leave A Reply

Your email address will not be published.