ತೊಂಡೆಕಾಯಿ ತಿಂದರೆ ಪುರುಷರ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ !!! ಹೇಗೆ?

ನಾವು ದಿನನಿತ್ಯ ಸೇವಿಸುವ ಅನೇಕ ತರಕಾರಿಗಳು ಆರೋಗ್ಯವನ್ನು ಉತ್ತಮವಾಗಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತಿನಂತೆ ಆರೋಗ್ಯಯುತ ಪೋಷಕಾಂಶ ಉಳ್ಳ ಆಹಾರ ಕ್ರಮ, ಜೀವನ ಶೈಲಿ ರೂಡಿಸಿಕೊಂಡರೆ ಅನೇಕ ರೋಗ ರುಜಿನಗಳಿಂದ ಪಾರಾಗಬಹುದು.

ಎಲ್ಲರೂ ಸೇವಿಸುವ ತರಕಾರಿಗಳಲ್ಲಿ ತೊಂಡೆಕಾಯಿಯಲ್ಲಿ ಪುಟ್ಟದಾಗಿದ್ದರೂ ಬೆಟ್ಟದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪರ್ವಾಲ್ ಎಂದು ಕರೆಯುವ ತೊಂಡೆಕಾಯಿ ವಿಟಮಿನ್ ಎ, ಬಿ, ಮತ್ತು ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಯುರ್ವೇದವು ತೊಂಡೆಕಾಯಿಯನ್ನು ಪಿತ್ತನಾಶಕ ಎಂದೇ ಕರೆಯುತ್ತದೆ.
ದೇಹದಲ್ಲಿ ಕಬ್ಬಿಣದಾಂಶ ಕಡಿಮೆ ಆದಾಗ ಸುಸ್ತು ಬೇಗ ಆಗುತ್ತದೆ. ತೊಂಡೆಕಾಯಿಯಲ್ಲಿ ಕಬ್ಬಿಣದಾಂಶ ಸಮೃದ್ಧವಾಗಿದ್ದು, ಹೀಗಾಗಿ ಫಿಟ್ನೆಸ್ ಕಾಪಾಡಲು ತೊಂಡೆಕಾಯಿ ನೆರವಾಗುತ್ತದೆ. ತೊಂಡೆಕಾಯಿ ಬಳ್ಳಿಯ ಕಾಂಡದ ಎರಡು ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ಕುಡಿದರೆ ದೇಹದ ಅನಗತ್ಯ ಕೊಬ್ಬು ಕರಗುತ್ತದೆ.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ತೊಂಡೆಕಾಯಿ ಚರ್ಮದ ಮೇಲಿನ ಗೆರೆಗಳು, ಸುಕ್ಕುಗಳು, ಕಲೆಗಳು ಮತ್ತು ಅಕಾಲಿಕ ಚರ್ಮದ ವಯಸ್ಸಾದ ಎಲ್ಲಾ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೂಲಕ ಬೇಗನೆ ವಯಸ್ಸಾಗುವಿಕೆಯನ್ನು ತೊಂಡೆಕಾಯಿ ತಡೆಯುತ್ತದೆ.

ತೊಂಡೆಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು ಮತ್ತು ಆಕ್ಸಿಡೆಂಟ್ ವಿರೋಧಿ ಗುಣಗಳು ನರಗಳ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನೆರವಾಗಿ, ಅಪಸ್ಮಾರ ಮತ್ತು ಆತಂಕದಂತಹ ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವುದಲ್ಲದೆ, ಅಲ್ಝೈಮರ್ ಎಂಬ ನೆನಪಿಗೆ ಸಂಬಂಧ ಪಟ್ಟ ಕಾಯಿಲೆಯನ್ನು ತಡೆಗಟ್ಟುತ್ತದೆ.

ತೊಂಡೆಕಾಯಿ ಬೀಜಗಳನ್ನು ಒಣಗಿಸಿ ಪುಡಿ ಮಾಡಿದಾಗ, ಬೆಚ್ಚಗಿನ ನೀರಿನಲ್ಲಿ ಬೆರೆಸಿ ಪ್ರತಿದಿನ ಸೇವಿಸಿದರೆ, ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ತೊಂಡೆಕಾಯಿ ಬೀಜಗಳು ಉತ್ತಮ ವಿರೇಚಕವಾಗಿಯೂ ಕೆಲಸ ಮಾಡುತ್ತದೆ. ತೊಂಡೆಯ ಎಲೆಯ ರಸವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.ಹಾಗೆಯೇ ಭೇದಿ ಸಮಸ್ಯೆಗೆ ತೊಂಡೆಕಾಯಿ ಎಲೆ ರಸವನ್ನು ಮೊಸರಿನಲ್ಲಿ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಭೇದಿ ಕಡಿಮೆಯಾಗುವುದು.

ತೊಂಡೆಕಾಯಿಯಲ್ಲಿ ಫ್ಲೆವನಾಯ್ಡ್ ಸಿಗುತ್ತದೆ. ಜೊತೆಗೆ ಅಂಟಿ ಆಕ್ಸಿಡೆಂಟ್ ಗುಣಯುಕ್ತವಾಗಿದೆ. ಇದು ಹೃದಯಕ್ಕೆ ಸುರಕ್ಷೆ ಒದಗಿಸುತ್ತದೆ. ಹಾರ್ಟ್ ಸಮಸ್ಯೆ ಹೆಚ್ಚಿಸುವ ಪ್ರಿರಾಡಿಕಲ್ ಗಳನ್ನು ಕಡಿಮೆ ಮಾಡುತ್ತದೆ.​ತೊಂಡೆಕಾಯಿಯ ಸೇವನೆಯು ಲೈಂಗಿಕ ಜೀವನವನ್ನು ಉತ್ತಮವಾಗಿಸುತ್ತದೆ. ಹೀಗಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಮೂಲಕ ದಾಂಪತ್ಯ ಜೀವನವನ್ನು ಉತ್ತಮವಾಗಿಸುತ್ತದೆ.

ತೊಂಡೆಕಾಯಿಯಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದ ಅತ್ಯುತ್ತಮ ಮೂಲವಾಗಿರುವುದರಿಂದ ತೂಕ ಇಳಿಸಲು ಮತ್ತು ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಸಹ ಉತ್ತಮವಾಗಿದೆ. ತೊಂಡೆಕಾಯಿ ಪ್ರತಿ 100 ಗ್ರಾಂಗೆ ಕೇವಲ 24 ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಲು ಮತ್ತು ಪೌಷ್ಟಿಕಾಂಶದ ಬಳಕೆಯನ್ನು ಹೆಚ್ಚಿಸಲು ದಿನನಿತ್ಯ ಬಳಸಬಹುದು.
ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿರುವ ಕಾರಣ, ತೊಂಡೆಕಾಯಿ ಸ್ವತಂತ್ರ ರಾಡಿಕಲ್‌ಗಳನ್ನು ನಾಶಮಾಡಲು ಮತ್ತು ದೇಹದ ಜೀವಕೋಶಗಳ ಬೆಳವಣಿಗೆ ಮತ್ತು ದುರಸ್ತಿಗೆ ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ದಿನನಿತ್ಯದ ದಿನಚರಿಯಲ್ಲಿ ತೊಂಡೆಕಾಯಿ ಬಳಸಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

Leave A Reply

Your email address will not be published.