ಏರ್‌ಲೈನ್‌ ಕಂಪನಿಯಿಂದ ಬಿಗ್ ಆಫರ್‌ | ಉಚಿತ ಟಿಕೆಟ್ ಪಡೆದು ಏರ್ ಏಷ್ಯಾದಲ್ಲಿ ಪ್ರಯಾಣಿಸಿ

ಏರ್‌ಲೈನ್ ಕಂಪನಿ ಪ್ರಯಾಣಿಕರಿಗೆ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಬಂದಿದೆ. ಅದರಂತೆ ಇದೀಗ ಏರ್‌ಲೈನ್‌ವೊಂದು ಬಿಗ್ ಆಫರ್‌ ನೀಡಿದ್ದು, ಈ ಫ್ಲೈಟ್‌ನಲ್ಲಿ ಪ್ರಯಾಣಿಕರು ಯಾವುದೇ ಟಿಕೆಟ್ ದರವನ್ನು ಪಾವತಿಸದೇ ಪ್ರಯಾಣ ಮಾಡಬಹುದು.


Ad Widget

ಹೌದು. ದುಬಾರಿ ದುನಿಯಾದಲ್ಲಿ ಪ್ರಯಾಣಿಕರನ್ನು ಆಕರ್ಷಿಸಲು ದೊಡ್ಡ ವಿಮಾನಯಾನ ಕಂಪನಿ ಏರ್‌ಲೈನ್ ವಿಮಾನ ಟಿಕೆಟ್‌ಗಳನ್ನು ಉಚಿತವಾಗಿ ನೀಡುತ್ತಿದೆ. ಆದ್ರೆ, ಈ ಅವಕಾಶ ನಾಲ್ಕು ದಿನಗಳವರೆಗೆ ಮಾತ್ರ ಇರುತ್ತದೆ.

ಏರ್ ಲೈನ್‌ ಕ್ಷೇತ್ರದ ಪ್ರಮುಖ ಕಂಪನಿ ಏರ್ ಏಷ್ಯಾ ಮತ್ತೊಮ್ಮೆ ವಿಮಾನಯಾನ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಏರ್ ಏಷ್ಯಾ ತನ್ನ ವಾಪಸಾತಿಗೆ ದೊಡ್ಡ ಕೊಡುಗೆ ನೀಡಿದೆ. ಈ ಕೊಡುಗೆಯ ಅಡಿಯಲ್ಲಿ, ಕಂಪನಿಯು 50 ಲಕ್ಷ ಉಚಿತ ವಿಮಾನ ಟಿಕೆಟ್‌ಗಳನ್ನು ನೀಡುತ್ತಿದೆ. ಆಫರ್ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 25 ರವರೆಗೆ ಇರುತ್ತದೆ. ಅಂದರೆ, ಈ ಆಫರ್‌ನ ಲಾಭ ಪಡೆಯಲು ನಿಮಗೆ ಇನ್ನೂ 4 ದಿನಗಳು ಇವೆ. AirAsia ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುವ ಮೂಲಕ ನೀವು ಈ ಕೊಡುಗೆಯನ್ನು ಪಡೆಯಬಹುದು. ಆಫರ್ ಅನ್ನು ಪಡೆಯಲು ನೀವು ಫ್ಲೈಟ್‌ಗಳ ಐಕಾನ್ ಅನ್ನು ಕ್ಲಿಕ್ ಮಾಡಬೇಕು. ಏಷ್ಯಾದ ಬಹುತೇಕ ದೇಶಗಳ ಮಾರ್ಗಗಳಲ್ಲಿ ಈ ಕೊಡುಗೆಯನ್ನು ಇರಿಸಲಾಗಿದೆ.


Ad Widget

50 ಲಕ್ಷ ಉಚಿತ ವಿಮಾನ ಟಿಕೆಟ್ ಮತ್ತು ಕೊಡುಗೆಗಳನ್ನು ನೀಡಲಿದೆ. ಏರ್‌ಲೈನ್‌ಗಳ ಈ ಆಫರ್‌ನೊಂದಿಗೆ ಕೆಲವು ಷರತ್ತುಗಳನ್ನು ಸಹ ಸೇರಿಸಲಾಗಿದೆ. ಅದನ್ನು ಪೂರೈಸಿದ ನಂತರವೇ ನೀವು ಈ ಉಚಿತ ಕೊಡುಗೆಯ ಲಾಭವನ್ನು ಪಡೆಯಬಹುದು. ಈ ಕೊಡುಗೆಯ ಅಡಿಯಲ್ಲಿ ನೀವು ಜನವರಿ 1 ರಿಂದ ಅಕ್ಟೋಬರ್ 28, 2023 ರವರೆಗೆ ಏರ್ ಏಷ್ಯಾದಲ್ಲೇ ಪ್ರಯಾಣಿಸಲು ಅವಕಾಶವನ್ನು ಪಡೆಯುತ್ತೀರಿ.


Ad Widget
error: Content is protected !!
Scroll to Top
%d bloggers like this: