ವರ್ಷದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿದ್ದ ಪಿಟಿ ಶಿಕ್ಷಕಿಯೊಬ್ಬಳು 17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಬಾಸ್ಕೆಟ್ ಬಾಲ್ ಆಡಲು ಹೋಗಿ ಸಿಕ್ಕಿ ಬಿದ್ದಿದ್ದಾಳೆ.
ಅಮೆರಿಕದ ಜೆಂಟ್ರಿ ಇಂಟರ್ ಮೀಡಿಯೇಟ್ ಶಾಲೆಯ ಶಿಕ್ಷಕಿಯಾಗಿರುವ ಲಿಯಾ ಕ್ವೀನ್ ಎಂಬ 43 ರ ಹರೆಯದ ಮಹಿಳೆ 17ರ ವಿದ್ಯಾರ್ಥಿಯೊಂದಿಗೆ ತಮ್ಮ ಕಚೇರಿಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಳು. ಈಗ ಇದೇ ಸೆಪ್ಟೆಂಬರ್ 15ರಂದು ಆಕೆಯನ್ನು ಬಂಧಿಸಿದ್ದಾರೆ. ಡ್ರಗ್ಸ್ ಸೇವಿಸಿದ ಆರೋಪವೂ ಅವಳ ಮೇಲಿದೆ. ಇದೀಗ ತಡವಾಗಿ, ಬರೊಬ್ಬರಿ 12 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. 40 ಲಕ್ಷ ರೂ.ಗಳನ್ನು ಪಾವತಿಸಿದ ನಂತರ, ಲಿಯಾಳನ್ನು ಸೆಪ್ಟೆಂಬರ್ 17 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಜೆಂಟ್ರಿ ಪೆÇಲೀಸರು ಹೇಳುವಂತೆ, 2010ರ ಘಟನೆಯ ಮೇಲೆ ಲಿಯಾಳನ್ನು ಬಂಧಿಸಲಾಯಿತು. ಆಗ ಈಕೆ 17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ, ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದರು ಎನ್ನಲಾಗಿದ್ದು, ಇದೀಗ ಈ ವಿಷಯ ಬಹಿರಂಗವಾಗಿದೆ.
ಲಿಯಾ ಕ್ವೀನ್ ಕಳೆದ 20 ವರ್ಷಗಳಿಂದಲೂ ಜೆಂಟ್ರಿ ಶಾಲೆಯಲ್ಲಿ ಕೆಲಸ ಮಾಡಿದ್ದ ಲಿಯಾ ಟೀಚರ್ ಆಫ್ ದಿ ಇಯರ್ ಪ್ರಶಸ್ತಿಯನ್ನೂ ಪಡೆದಿದ್ದಳು. ಸದ್ಯ ಆಕೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಪಿಟಿ ಟೀಚರ್ ಆಡಿದ್ಲು ಕಾಮದ ಆಟ?
ಬಾಸ್ಕೆಟ್ ಬಾಲ್ ಆಟದ ಮೂಲಕ ವಿದ್ಯಾರ್ಥಿಯೊಂದಿಗೆ ಲಿಯಾ ಸ್ನೇಹ ಬೆಳೆಸಿದ್ದಳು. ಆ ಸಮಯದಲ್ಲಿ ಹುಡುಗನಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಆಕೆ ಹುಡುಗನ ಜತೆ ಲೈಂಗಿಕ ಬಾಸ್ಕೆಟ್ ಬಾಲ್ ಆಟ ಆಡಲು ಶುರು ಮಾಡಿದ್ದಳು. ಹುಡುಗ ಶಾಲೆ ಬಿಟ್ಟ ನಂತರ ಕೂಡಾ ಹೊರಗಡೆಯೂ ಅವರು ಕಾಣಿಸಿಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಕೂಡಾ ಸೆಕ್ಸ್ ಸಂವಹನ ನಿರಂತರವಾಗಿ ನಡೆಸಿದ್ದರು. 2010ರ ಬೇಸಿಗೆ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಅವರು ಬಳಸಿಕೊಂಡಿದ್ದಳು. 17 ವರ್ಷದ ವಿದ್ಯಾರ್ಥಿಯನ್ನು ಲಿಯಾ ತಮ್ಮ ಶಾಲಾ ಕಚೇರಿಯ ಬಾತ್‍ರೂಮ್‍ನಲ್ಲಿ ಲೈಂಗಿಕ ಚಟುವಟಿಕೆಗಾಗಿ ಬಳಸಿಕೊಂಡಿದ್ದಳು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.