Alaram : ಅಲರಾಂ ಆಫ್ ಮಾಡಿ ಮಲಗುವ ಅಭ್ಯಾಸ ಇದೆಯಾ ? ಹಾಗಾದರೆ ಹೀಗೆ ಮಾಡಿ

ರಾತ್ರಿ ಮಲಗುವಾಗ ನಾಳೆ ಬೆಳಿಗ್ಗೆ ಬೇಗ ಏಳಬೇಕು ಎನ್ನುವ ಯೋಜನೆ ಹಾಕಿ ಮಲಗಿದರೆ, ಬೆಳಿಗ್ಗೆ ಅಲಾರಾಂ ಪದೇ ಪದೇ ಹೊಡೆದುಕೊಂಡರೂ ಆಫ್ ಮಾಡಿ ಐದು ನಿಮಿಷ ಬಿಟ್ಟು ಏಳುವ ಎಂದು ಪುನಃ ನಿದ್ರೆಗೆ ಶರಣಾದರೆ ಮತ್ತೆ ಎಚ್ಚರವಾದಾಗ ತಡವಾಗಿ ಅಂದುಕೊಂಡಿರುವ ಕೆಲಸಗಳು ಪೂರ್ಣವಾಗದೆ, ಗಡಿಬಿಡಿಯಲ್ಲಿ ಕೆಲಸ ಮಾಡುವ ಅಭ್ಯಾಸ ಸಾಕಷ್ಟು ಮಂದಿಗಿರಬಹುದು. ಬೆಳಗ್ಗೆ ಬೇಗ ಏಳುವ ಅಭ್ಯಾಸ ರೂಢಿಸಿಕೊಂಡರೆ ಒತ್ತಡ ಕಡಿಮೆಯಾಗಿ, ತಾಜಾ ಅನುಭವ ಮನವರಿಕೆಯಾಗಿ ದಿನವಿಡೀ ಲವಲವಿಕೆಯಿಂದ ಕೆಲಸದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ.

ಬೇಗ ಏಳುವುದು ಮೊದಲಿಗೆ ಕಠಿಣವಾಗಬಹುದು. ಹೀಗಾಗಿ ಮೊದಲಿಗೆ ಈ ಅಡಚಣೆಯಿಂದ ಹೊರಬರುವುದು ಮುಖ್ಯ. ಬೆಳಗ್ಗೆ ತಡವಾಗಿ ಏಳುವ ಮನಸ್ಥಿತಿಯನ್ನು ಬದಲಾಯಿಸಿಕೊಂಡು ರಾತ್ರಿ ಬೇಗ ಮಲಗುವ ಅಭ್ಯಾಸನ್ನು ರೂಢಿಸಿಕೊಂಡರೆ ಸಹಜವಾಗಿಯೇ ಬೆಳಗ್ಗೆ ಬೇಗ ಏಳಲು ಸಾಧ್ಯವಾಗುತ್ತದೆ.

ಅಲಾರ್ಮ್​ ಅನ್ನು ಹಾಸಿಗೆಯಿಂದ ದೂರವಿಡಬೇಕು. ಆಗ ಅಲಾರ್ಮ್ ಆಫ್ ಮಾಡಲು ಎದ್ದು ಓಡಾಡಲೆಬೇಕು. ಹೀಗೆ ಅಲಾರ್ಮ್​ ಆಫ್ ಮಾಡಿದ ನಂತರ, ತಕ್ಷಣ ಲೈಟ್ ಆನ್ ಮಾಡಿ, ಬ್ರಷ್ ಮಾಡುವುದರಿಂದ ನಿದ್ರೆ ದೂರವಾಗುತ್ತದೆ. ರಾತ್ರಿಯ ದಿನಚರಿ ಒತ್ತಡಯುತವಾಗಿದ್ದು, ತುಂಬಾ ಹೊತ್ತು ಮೊಬೈಲ್ , ಲ್ಯಾಪ್ ಟಾಪ್ನಲ್ಲಿ ಆಟ ಇಲ್ಲವೇ ಫಿಲ್ಮ್ ನೋಡುವುದರಿಂದ ಕಣ್ಣಿಗೆ ಒತ್ತಡ ಹೆಚ್ಚಾಗಿ ರಾತ್ರಿ ನಿದ್ದೆ ಕೂಡ ಹಾಳಾಗಿ ಬೆಳಗ್ಗೆ ಬೇಗ ಏಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ರಾತ್ರಿ ಬೇಗ ಮಲಗುವುದರ ಜೊತೆಗೆ ಮಲಗುವಾಗ ಮೊಬೈಲ್ ಬಳಕೆ ಕಡಿಮೆ ಮಾಡಬೇಕು.

ರಾತ್ರಿ ತಡವಾಗಿ ಮಲಗಿದಷ್ಟು, ಬೆಳಗ್ಗೆ ಏಳಲು ಆಲಸ್ಯ ಆವರಿಸಿ, ಏಳುವಾಗ ತಡವಾಗುತ್ತದೆ. ಆದರೆ ಬೆಳಗ್ಗೆ ಎದ್ದು ಮಾಡಬೇಕಾಗಿರುವ ಕೆಲಸಗಳ ಪಟ್ಟಿ ತಯಾರಿಸಿ, ಯೋಜಿಸಿರುವ ಕೆಲಸದ ಬಗ್ಗೆ ಮಲಗಿದ್ದಲ್ಲೇ ಗಮನಹರಿಸಿದರೆ ಬೆಳಗ್ಗೆ ಬೇಗ ಏಳಲು ಸಾಧ್ಯವಾಗುತ್ತದೆ.

ಬೆಳಗ್ಗೆದ್ದು ವ್ಯಾಯಾಮ, ಯೋಗ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಅನಿವಾರ್ಯವಾಗಿ ಬೆಳಗ್ಗೆ ಬೇಗ ಎದ್ದು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಾಗುತ್ತದೆ.

Leave A Reply

Your email address will not be published.