KPTCL :ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ವರಾಹಿ ಜಲವಿದ್ಯುತ್‌ ಯೋಜನಾ ಪ್ರದೇಶದ ವಿದ್ಯುದಾಗಾರ/ಕಛೇರಿಗಳಲ್ಲಿ ಅಪ್ರೆಂಟಿಸ್ ಕಾಯ್ದೆ 1961 ರ ಪ್ರಾವಧಾನಗಳಡಿ 2022-2023 ನೇ ಸಾಲಿಗೆ ಈ ಕೆಳಕಂಡ ವೃತ್ತಿಗಳಲ್ಲಿ ಶಿಶಿಕ್ಷುಗಳನ್ನು ತರಬೇತಿಗೆ ನಿಯೋಜಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಬಿಇ/ಡಿಪ್ಲೋಮಾ ಶಿಶಿಕ್ಷು ಹುದ್ದೆಗಳು : ಬಿಇ(ಇಲೆಕ್ಟಿಕಲ್ & ಇಲೆಕ್ಟ್ರಾನಿಕ್ಸ್)/ ಬಿಇ(ಮೆಕ್ಯಾನಿಕಲ್) – 01 ಹುದ್ದೆ
ಡಿಪ್ಲೋಮಾ(ಇಲೆಕ್ಟಿಕಲ್ & ಇಲೆಕ್ಟ್ರಾನಿಕ್ಸ್)/ ಡಿಪ್ಲೋಮಾ (ಮೆಕ್ಯಾನಿಕಲ್) – 1 ಹುದ್ದೆ

ತರಬೇತಿ ಅವಧಿ : 1 ವರ್ಷ,

ಇಲೆಕ್ಟ್ರಿಷಿಯನ್ – ವಿದ್ಯಾರ್ಹತೆ -ಐಟಿಐ ಎಲೆಕ್ಟ್ರಿಷಿಯನ್ – ಹುದ್ದೆ ಸಂಖ್ಯೆ – 01
ಫಿಲ್ಟರ್ – ವಿದ್ಯಾರ್ಹತೆ – ಐಟಿಐ ( ಫಿಟ್ಟರ್)
ಹುದ್ದೆ ಸಂಖ್ಯೆ – 01
ಹೌಸ್ ಕೀಪರ್ -ವಿದ್ಯಾರ್ಹತೆ – ಎಸ್ ಎಸ್ ಎಲ್ ಸಿ – ಹುದ್ದೆ ಸಂಖ್ಯೆ – 08

ತರಬೇತಿ ಅವಧಿ : 1 ವರ್ಷ

ಅರ್ಜಿ ಸಲ್ಲಿಸುವ ಬಿ.ಇ ಪದವೀಧರ/ಡಿಪ್ಲೋಮಾ ಅಭ್ಯರ್ಥಿಗಳು ಶೈಕ್ಷಣಿಕ ವರ್ಷ 2020 ಮತ್ತು ನಂತರದಲ್ಲಿ ಪಾಸಾಗಿರಬೇಕು. ಶಿಶಿಕ್ಷು ತರಬೇತಿ ಅವಧಿಯಲ್ಲಿ ಬಿ.ಇ ಪದವೀಧರ ಶಿಶಿಕ್ಷುಗಳಿಗೆ, ಡಿಪ್ಲೋಮಾ ಶಿಶಿಕ್ಷುಗಳಿಗೆ, ಐಟಿಐ ಶಿಶಿಕ್ಷುಗಳಿಗೆ ಮತ್ತು ಎಸ್‌ ಎಸ್‌ ಎಲ್ ಸಿ ಶಿಶಿಕ್ಷುಗಳಿಗೆ ಅನುಕ್ರಮವಾಗಿ ರೂ.12,000/-, ರೂ.10,000/-, ರೂ.10,000/ ಮತ್ತು ರೂ.7000/- ಸ್ಟೈಫಂಡ್‌ ನೀಡಲಾಗುವುದು, (ಶಿಶಿಕ್ಷುಗಳು ಇಚ್ಛಿಸಿದಲ್ಲಿ ಜಂಟಿಯಾಗಿ ಮನೆ ವಿತರಿಸಿ ಬಾಡಿಗೆಯನ್ನು ಕಡಿತಗೊಳಿಸಲಾಗುವುದು), ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ಅಭ್ಯರ್ಥಿಗಳು ಮತ್ತೊಮ್ಮೆ ತರಬೇತಿಗೆ ನಿಯೋಜಿಸಿಕೊಳ್ಳಲು ಅವಕಾಶವಿರುವುದಿಲ್ಲ.

ತರಬೇತಿಯ ಅವಧಿ ಪೂರ್ಣಗೊಂಡ ನಂತರ ಶಿಶಿಕ್ಷುಗಳನ್ನು ಬಿಡುಗಡೆಗೊಳಿಸಲಾಗುವುದು ಹಾಗೂ ಯಾವುದೇ ಸಂದರ್ಭದಲ್ಲಿ ನಿಗಮದ ಸೇವೆಯಲ್ಲಿ ಖಾಯಂಗೊಳಿಸಲಾಗುವುದಿಲ್ಲ. ತರಬೇತಿಗೆ ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಠ ವಯೋಮಿತಿ ನಿಗಮದ ನಿಯಮಾವಳಿಯನ್ವಯ ಪರಿಗಣಿಸಲಾಗುವುದು. ನಿಗದಿತ ವಿದ್ಯಾರ್ಹತೆ ಹೊಂದಿರುವ ಬಿಇ/ಡಿಪ್ಲೋಮಾ ಅಭ್ಯರ್ಥಿಗಳು http://www.mhrdnats.gov.inಯಲ್ಲಿ ಹಾಗೂ ಐಟಿಐ, ಎಸ್‌ಎಸ್‌ಎಲ್ಸಿ (SSLC)ಅಭ್ಯರ್ಥಿಗಳು https://apprenticeshipindia.org ಪೋರ್ಟಲ್‌ನಲ್ಲಿ ಶಿಶಿಕ್ಷು ತರಬೇತಿಗಾಗಿ ನೋಂದಣಿ ಮಾಡಿಸಿದ ಹಾರ್ಡ್ ಕಾಪಿ ಪ್ರತಿಯನ್ನು ಕೆಳಕಾಣಿಸಿದ ಸ್ವಯಂ ದೃಢೀಕೃತ ದಾಖಲೆಗಳೊಂದಿಗೆ ಲಕೋಟೆಯ ಮೇಲೆ “ಶಿಶಿಕ್ಷು ವೃತ್ತಿಯಲ್ಲಿ ತರಬೇತಿಗಾಗಿ ಅರ್ಜಿ’ ಎಂದು ನಮೂದಿಸಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಹೆಚ್ ಆರ್ ಡಿ)ಹೆಚ್, ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ, ವರಾಹಿ ಜಲ ವಿದ್ಯುತ್‌ ಯೋಜನೆ ಹೊಸಂಗಡಿ-576282, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಈ ವಿಳಾಸಕ್ಕೆ ದಿನಾಂಕ:18.10.2022 ಸಂಜೆ 5.00 ಗಂಟೆಯೊಳಗೆ ತಲುಪುವಂತೆ ಕಳುಹಿಸುವುದು.

ಶಿಶಿಕ್ಷು ತರಬೇತಿಗಾಗಿ ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಸಲ್ಲಿಸಬೇಕಾದ ವಿವರಗಳು:

  1. ಅಭ್ಯರ್ಥಿಯ ವಿಳಾಸ ಹೊಂದಿರುವ ಗುರುತಿನ ಚೀಟಿ ಮತ್ತು ಭಾವಚಿತ್ರ
  2. (UID) ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿರಬೇಕು[ವಿವರಗಳು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿರುವಂತೆ ನಮೂದಾಗಿರಬೇಕು].
  3. ವಿದ್ಯಾರ್ಹತೆ (ಎಸ್‌ಎಸ್‌ಎಲ್ಸಿ/ಐಟಿಐ/ಪದವೀಧರ ಡಿಪ್ಲೋಮಾ/ಅಂಕಪಟಿಗಳ ಪ್ರತಿ ಪ್ರಮಾಣ ಪತ್ರಗಳನ್ನು ಲಗತ್ತಿಸಿರಬೇಕು)
  4. ಮೊಬೈಲ್ ಸಂಖ್ಯೆ ಮತ್ತು ಇ ಮೇಲ್ ವಿಳಾಸ (e-Mail ID) ಕಡ್ಡಾಯವಾಗಿ ನಮೂದಿಸಿರಬೇಕು.
  5. ಜಾತಿ ಪ್ರಮಾಣ ಪತ್ರ(ಪ್ರಸ್ತುತ ಚಾಲನೆಯಲ್ಲಿರುವ)

ಆಪೂರ್ಣ ಹಾಗೂ ನಿಗದಿತ ದಿನಾಂಕದ ನಂತರ ತಲುಪಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

Leave A Reply

Your email address will not be published.