ಪಾಲಕರ ಕಣ್ತಪ್ಪಿಸಿ ಅಪ್ರಾಪ್ತೆಯನ್ನು ಮದುವೆಯಾದ ಯುವಕ | ಪೋಕ್ಸೋ ಕಾಯ್ದೆಯಡಿ ಯುವಕ ಅಂದರ್

ಅಪ್ರಾಪ್ತೆಯನ್ನು ಪ್ರೀತಿಸಿ, ಪಾಲಕರ ಕಣ್ತಪ್ಪಿಸಿ ಕರೆದೊಯ್ದು ದೇವಸ್ಥಾನದಲ್ಲಿ ತಾಳಿ ಕಟ್ಟಿ ಮದುವೆಯಾಗಿ ಸಂಸಾರ ಶುರು ಹಚ್ಚಿಕೊಂಡಿದ್ದ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

ಕುಷ್ಟಗಿ ಶಿರಹಟ್ಟಿ ತಾಲೂಕಿನ ರಣತ್ತೂರಿನ ರೇಣುಕಾಚಾರ್ಯ ಅಲಿಯಾಸ್ ಸಿದ್ದಾರ್ಥ ಜಡಿಸ್ವಾಮಿ ಮಠದ ಈತ ಗೋವಾದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸಕ್ಕೆ ಇದ್ದ. ಕಳೆದ 6 ತಿಂಗಳ ಹಿಂದೆ ತಂದೆ, ತಾಯಿಯೊಂದಿಗೆ ವಲಸೆ ಬಂದಿದ್ದ ಕ್ಯಾದಿಗುಪ್ಪ ಮೂಲದ ಅಪ್ರಾಪ್ತೆ ಬಾಲಕಿ ಕೆಲಸಕ್ಕೆ ಹೋದಾಗ ಸದರಿ ಯುವಕನ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದ್ದು ಸದರಿ ಯುವಕನಿಗೆ 20 ವರ್ಷ, ಅಪ್ರಾಪ್ತೆಗೆ 17 ವರ್ಷ 4 ತಿಂಗಳು.

ಅನ್ಯ ಜಾತಿ, ಅಪ್ರಾಪ್ತೆ ಎಂದು ಗೊತ್ತಿದ್ದರೂ ನೀನು ಬಹಳ ಚಂದ ಇದ್ದೀಯಾ.. ನಿನ್ನನ್ನೆ ಪ್ರೀತಿ ಮಾಡ್ತೇನೆ ಮದುವೆಯೂ ಆಗ್ತೇನೆ ಎಂದು ಯಾಮಾರಿಸಿದ್ದ.

ಕಳೆದ ಆಗಸ್ಟ್ 8 ರಂದು ಮೊಹರಂ ಹಬ್ಬಕ್ಕೆ ಅಪ್ರಾಪ್ತೆ ಬಾಲಕಿಯ ಕುಟುಂಬ ಕ್ಯಾದಿಗುಪ್ಪಕ್ಕೆ ಬಂದಿದ್ದ ವೇಳೆ, ಯುವಕ ಬಾಲಕಿಯನ್ನು ಚೊಳಚಗುಡ್ಡಕ್ಕೆ ಕರೆದೊಯ್ದು ಬಲತ್ಕರಿಸಿದ್ದ ಅಲ್ಲದೆ ಆಕೆಯನ್ನು ದೇವಸ್ಥಾನವೊಂದರಲ್ಲಿ ತಾಳಿಕಟ್ಟಿ ಮದುವೆಯೂ ಆಗಿದ್ದ ಎನ್ನಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ಸೆ.19ರಂದು ಪಾಲಕರು ಸ್ಥಳೀಯ ಪೋಲೀಸ್ ಠಾಣೆಗೆ ಮಗಳು ಅಪಹರಣ ಬಗ್ಗೆ ದ ದೂರು ನೀಡಿ ರೇಣುಕಾಚಾರ್ಯ ಮಠದ್ ಎಂಬಾತನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಕುಷ್ಟಗಿ ಪೊಲೀಸರು ಆರೋಪಿ ರೇಣುಕಾಚಾರ್ಯ ಮಠದ್‌ನನ್ನು ವಶಕ್ಕೆ ತೆಗೆದುಕೊಂಡು ಅಪ್ರಾಪ್ತೆ ಬಾಲಕಿಯನ್ನು ಪಾಲಕರ ವಶಕ್ಕೆ ಒಪ್ಪಿಸಿದ್ದಾರೆ.

Leave A Reply