ಬೃಹತ್ ಭೂಕಂಪಕ್ಕೆ ನಲುಗಿದ ಕಟ್ಟಡ ರಸ್ತೆ | ಸ್ವಿಮ್ಮಿಂಗ್ ಫುಲ್ ನಲ್ಲೂ ಸುನಾಮಿ – ಭಯಾನಕ ವೀಡಿಯೋ ವೈರಲ್

ಮೆಕ್ಸಿಕೋದಲ್ಲಿ ನಿನ್ನೆ ಬೃಹತ್ ಭೂಕಂಪನ ಸಂಭವಿಸಿದ್ದು, ಕಟ್ಟಡಗಳು ಅಲುಗಾಡಿದರೆ, ಸ್ವಿಮ್ಮಿಂಗ್ ಫುಲ್ ನಲ್ಲಿ ಸುನಾಮಿಯೇ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಭಯಾನಕ ದೃಶ್ಯದ ವೀಡಿಯೋ ಇದೀಗ ವೈರಲ್ ಆಗಿದ್ದು, ಮೈ ಜುಮ್ ಅನಿಸುವಂತಿದೆ.

ಈ ಘಟನೆ ಪೆಸಿಫಿಕ್​ ಕರಾವಳಿಯಲ್ಲಿ ಸೋಮವಾರ ಸಂಭವಿಸಿದೆ. ಕಟ್ಟಡವೊಂದರ ಮೇಲಿರುವ ಈಜುಕೊಳದ ದೃಶ್ಯವನ್ನು ನೆಟ್ಟಿಗರೊಬ್ಬ ಹಂಚಿಕೊಂಡಿದ್ದು, ಸ್ವಮ್ಮಿಂಗ್​ಪೂಲ್​ನಲ್ಲಿ ಮಿನಿ ಸುನಾಮಿ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಭೂಕಂಪನಕ್ಕೆ ಕಟ್ಟಡ ಅಲುಗಾಡಿದ ಪರಿಣಾಮ ಕಟ್ಟಡದ ಮೇಲಿಂದ ನೀರು ಕೆಳಗೆ ಚೆಲ್ಲುತ್ತಿರುವ ದೃಶ್ಯವಿದೆ. ಇನ್ನೊಂದು ವಿಡಿಯೋದಲ್ಲಿ ಹೋಟೆಲ್​ ಒಂದರ ಕೊಠಡಿಯೊಳಗೆ ಫ್ಯಾನ್​ ಅಲುಗಾಡುತ್ತಿರುವ ದೃಶ್ಯವಿದೆ. ಮಗದೊಂದು ವಿಡಿಯೋದಲ್ಲಿ ಭೂಂಕಪನಕ್ಕೆ ಪಾರ್ಕ್​ ಮಾಡಿರುವ ಕಾರುಗಳು ಸಹ ಅಲುಗಾಡುತ್ತಿವೆ. ಒಟ್ಟಾರೆ ಈ ವೀಡಿಯೋಗಳು ಜನರನ್ನೇ ಬೆಚ್ಚಿಬೀಳಿಸಿದೆ.

ಯುನೈಟೆಡ್​ ಸ್ಟೇಟ್ಸ್​ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1.05ರ ಸುಮಾರಿಗೆ 7.5 ತೀವ್ರತೆಯ ಪ್ರಬಲ ಭೂಕಂಪನವು ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ. ಭೂಕಂಪವು ಅಕ್ವಿಲಾದಿಂದ ಆಗ್ನೇಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಕೊಲಿಮಾ ಮತ್ತು ಮೈಕೋವಾಕನ್ ರಾಜ್ಯಗಳ ಬಳಿ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ.

Leave A Reply

Your email address will not be published.