ವ್ಯಕ್ತಿಯೊಬ್ಬನನ್ನು 100 ಮೀಟರ್​ ದೂರ ಎಳೆದುಕೊಂಡು ಹೋದ ಕಾರು!

ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವಾಹನ ಸವಾರರ ನಿರ್ಲಕ್ಷವೇ ಕಾರಣವಾಗಿದೆ. ಚಿತ್ರ ವಿಚಿತ್ರ ರೀತಿಯಲ್ಲಿ ಅಪಘಾತ ಸಂಭವಿಸುತ್ತಿದ್ದು, ಭಯಾನಕವಾಗಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ರಸ್ತೆ ಪಕ್ಕ ಪಾರ್ಕ್​ ಮಾಡಿದ್ದ ವಾಹನಗಳಿಗೆ ಸರಣಿ ಅಪಘಾತ ಮಾಡಿದ್ದಲ್ಲದೆ, ವ್ಯಕ್ತಿಯೊಬ್ಬನನ್ನು ಕಾರೊಂದು ಎಳೆದುಕೊಂಡು ಹೋದ ಘಟನೆ ನಡೆದಿದೆ.

ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿ ಕರೊಲ್​ ಬಾಘ್​ ಏರಿಯಾದಲ್ಲಿ ಸೋಮವಾರ (ಸೆ.19) ರಾತ್ರಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟಕ್ಕೂ ಅದರಲ್ಲಿರುವ ದೃಶ್ಯ ಏನೂ ಎಂಬುದು ಇಲ್ಲಿದೆ ನೋಡಿ..

ಮಹಿಳೆಯೊಬ್ಬಳು ರಸ್ತೆ ಒಂದು ಬದಿಯಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಎಸ್​ಯುವಿ ಕಾರು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಪಾರ್ಕ್​ ಮಾಡಿರುವ ವಾಹನಗಳನ್ನು ಡಿಕ್ಕಿ ಹೊಡೆದುಕೊಂಡು ಮುಂದೆ ಸಾಗುತ್ತದೆ. ಅಲ್ಲದೆ, ಕಾರಿನ ಅಡಿಗೆ ಸಿಲುಕುವ ವ್ಯಕ್ತಿಯೊಬ್ಬನ್ನನು 100 ಮೀಟರ್​ ದೂರ ಎಳೆದುಕೊಂಡು ಬರುತ್ತದೆ.

ಹಾನಿಗೊಳಗಾದ ಕಾರುಗಳು ಮತ್ತು ದ್ವಿಚಕ್ರ ವಾಹನದ ಅವಶೇಷಗಳನ್ನು ಸಹ ವಿಡಿಯೋದಲ್ಲಿ ಕಾಣಬಹುದು. ಎಸ್‌ಯುವಿ ಕಾರು ಸದ್ಯ ಪೊಲೀಸರ ವಶದಲ್ಲಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಯನ್ನು ಕಣ್ಣಾರೆ ನೋಡಿದ ಅಲ್ಲಿನ ಜನರು ಶಾಕ್ ಆಗಿಯೇ ನಿಂತಿದ್ದಾರೆ…

Leave A Reply

Your email address will not be published.