Vasthu tips : ಮನೆಯ ಯಾವ ದಿಕ್ಕಿನಲ್ಲಿ ಬುದ್ಧನ ಪ್ರತಿಮೆ ಇಡಬೇಕು? ವಾಸ್ತು ತಜ್ಞರ ಮುಖ್ಯ ಸಲಹೆ ಇಲ್ಲಿದೆ

ಜೀವನ ಪರ್ಯಂತ ಜೀವಿಸುವ ಮನೆಯನ್ನು ಕಟ್ಟುವಾಗ ವಾಸ್ತು , ಶುಭ – ಅಶುಭ ಕಾರ್ಯಕ್ಕೆ ಜ್ಯೋತಿಷ್ಯ ನೋಡುವ ನಂಬಿಕೆ ತಲಾ ತಲಾಂತರಗಳಿಂದ ರೂಡಿಯಲ್ಲಿರುವ ವಿಷಯ ಎಲ್ಲರಿಗೂ ತಿಳಿದಿರುವಂತಹುದೇ.

ಮನೆ ಕಟ್ಟುವ ವಿಚಾರದಲ್ಲಿ ಪ್ರತಿಯೊಬ್ಬರು ನೂರಾರು ಕನಸು ಕಟ್ಟಿಕೊಂಡಿರುತ್ತಾರೆ.ಕಟ್ಟುವ ಮನೆಯಲ್ಲಿ ಸುಖ ನೆಮ್ಮದಿ, ಸಂತೋಷ ಕೂಡಿರಬೇಕೆಂದು ಬಯಸಿ ವಾಸ್ತು ಪ್ರಕಾರ ತಜ್ಞರ ಸಲಹೆಯಂತೆ ಕನಸಿನ ಮನೆ ಕಟ್ಟುವುದು ವಾಡಿಕೆ. ವಾಸ್ತುವಿನಲ್ಲಿ ಲೋಪದೋಷಗಳಾದರೆ, ಮನೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ ಎಂಬ ಭಯ ಹೆಚ್ಚಿನ ಜನರ ಮನದಲ್ಲಿದೆ. ಈ ಭಯದಿಂದ ಪೂಜೆ ಪುನಸ್ಕಾರದ ಮೊರೆ ಹೋಗುವುದು ಕೂಡ ಇದೆ.

ವಾಸ್ತು ಪಾಲಿಸುವುದರಿಂದ ಧನಾತ್ಮಕ ಶಕ್ತಿ ಉಳಿದು ಋಣಾತ್ಮಕ ಶಕ್ತಿ ಸಂಪೂರ್ಣವಾಗಿ ದೂರವಾಗುತ್ತದೆ ಎಂಬ ನಂಬಿಕೆ ಹೆಚ್ಚಿನವರಿಗಿದೆ. ಅಷ್ಟೇ ಅಲ್ಲ ಕೆಲವರು ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಬೇಕೆಂದು ವಾಸ್ತು ಗಿಡ, ಕುದುರೆ ಫೋಟೋ ಮತ್ತು ಮುಖ್ಯವಾಗಿ ಬುದ್ಧನ ಪ್ರತಿಮೆಯನ್ನು ಇಡುತ್ತಾರೆ. ಮನಸ್ಸನ್ನು ತಿಳಿಯಾಗಿ ಶಾಂತಗೊಳಿಸುತ್ತದೆ ಎಂಬ ಕಾರಣಕ್ಕೆ ಬುದ್ಧನ ವಿಗ್ರಹಗಳನ್ನು ಮನೆಯಲ್ಲಿರಿಸುವುದು ವಾಡಿಕೆ.

ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ
ಮನೆಯ ಮುಂಬಾಗಿಲ ಬಳಿ ಬುದ್ಧನ ಪ್ರತಿಮೆ ಇಡುವುದು ಶ್ರೇಯಸ್ಕರವಾಗಿದ್ದು, ಪ್ರತಿಮೆ ನೆಲದಿಂದ 3-4 ಅಡಿ ಎತ್ತರದಲ್ಲಿಡಬೇಕು. ಇದರಿಂದ ಬುದ್ಧನ ಪ್ರತಿಮೆ ಹೊರಗಿನಿಂದ ಬರುವ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ.
ಧ್ಯಾನ ಮಾಡುತ್ತಿರುವ ಬುದ್ಧನ ಪ್ರತಿಮೆಯನ್ನು ಲಿವಿಂಗ್‌ ಹಾಲ್‌ನ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮವಾಗಿದ್ದು, ಕ್ಲೀನ್ ಟೇಬಲ್ ಅಥವಾ ಶೆಲ್ಫ್ ಮೇಲೆ ಇರಿಸುವುದರಿಂದ ಶಾಂತಿ ನೆಲೆಸುತ್ತದೆ. ಪ್ರತಿ ಮನೆಯ ಹೊರಾಂಗಣ ವನ್ನು ಅಲಂಕರಿಸುವ ಹೂತೋಟ ಮನೆ ಮುಂದಿದ್ದರೆ ಅಲ್ಲಿ ಕೂಡ ಪ್ರತಿಷ್ಠಾಪಿಸಬಹುದು.
ಮಕ್ಕಳಿಗೆ ಓದಿನಲ್ಲಿ ನಿರಾಸಕ್ತಿ ತೋರಿದಾಗ , ಮಕ್ಕಳ ಕೋಣೆಯಲ್ಲಿ ಬುದ್ಧನ ಮೂರ್ತಿ ಇರಿಸಿದರೆ ಓದಿನಲ್ಲಿ ಆಸಕ್ತಿ ಮೂಡಿ ಏಕಾಗ್ರತೆ ಹೆಚ್ಚುತ್ತದೆ. ಅದೇ ರೀತಿ ಬುದ್ಧನ ಪ್ರತಿಮೆಯನ್ನು ಧ್ಯಾನದ ಸ್ಥಳದಲ್ಲಿ ಇರಿಸಿದರೂ ಕೂಡ ಏಕಾಗ್ರತೆ ಹೆಚ್ಚುತ್ತದೆ. ಹೆಚ್ಚಿನವರು ಬುದ್ಧನನ್ನು ಪೂಜಾ ಕೋಣೆಯಲ್ಲಿರಿಸಿದರೆ, ಧನಾತ್ಮಕ ಶಕ್ತಿ ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ.
ಜ್ಯೋತಿಷ್ಯದ ಜನ್ಮ ರಾಶಿಯ ಪ್ರಕಾರ, ಕೆಲವು ಹರಳಿನ ಸರ ಮತ್ತು ಉಂಗುರಗಳನ್ನು ಆರೋಗ್ಯ ವೃದ್ಧಿಗೆ ತೊಡುವ ಪರಿಪಾಠವು ಹೆಚ್ಚಿನವರಿಗೆ ಯಿದೆ. ಅಷ್ಟೆ ಅಲ್ಲ ಪುರಾತನ ಕಾಲದ ಮನೆಗಳಲ್ಲಿ ದುಷ್ಠ ಶಕ್ತಿಯು ನೆಲೆಸುತ್ತದೆ ಎಂದು ಮನೆಯ ನವೀಕರಣ ಮಾಡುವ ಕ್ರಮವು ಇದೆ. ಮನೆಯಲ್ಲಿ, ಕೆಲಸ ಮಾಡುವ ಅಂಗಡಿ, ಹೋಟೆಲ್ ನಲ್ಲಿಯೂ ಲಕ್ಷ್ಮಿ, ಶಾಂತಿ ನೆಲೆಸಲು ವಾಸ್ತು ಗಿಡ, ಬುದ್ಧನ ಮೂರ್ತಿ ಪ್ರತಿಷ್ಠಾಪಿಸುತ್ತಾರೆ.

̇

Leave A Reply

Your email address will not be published.