SMS‌ Charges : ಎಸ್ ಎಂಎಸ್ ಶುಲ್ಕ ಕ್ಯಾನ್ಸಲ್ ಮಾಡಿದ SBI

ಭಾರತೀಯ ಸ್ಟೇಟ್ ಬ್ಯಾಂಕ್ (State Bank of India – SBI) ಮೊಬೈಲ್ ಮೂಲಕ ಹಣ ವರ್ಗಾವಣೆ ವಿಧಿಸುತ್ತಿದ್ದ ಎಸ್ಎಂಎಸ್ ( SMS) ಸಂದೇಶದ ಶುಲ್ಕವನ್ನು ಮನ್ನಾ ಮಾಡುವುದಾಗಿ ಎಂಬ ಮಾಹಿತಿಯನ್ನು ಟ್ವೀಟ್ ಮಾಡುವ ಮೂಲಕ ಘೋಷಿಸಿದೆ. ಬಳಕೆದಾರರು ಈಗ ಯುಎಸ್ಎಸ್ (Unstructured Supplementary Service Data – USSED) ಸೇವೆಗಳ ಮೂಲಕ ಯಾ ಹೆಚ್ಚುವರಿ ಶುಲ್ಕವಿಲ್ಲದೆ ವಹಿವಾಟು ಮೂಲಕ ನಗದು ವರ್ಗಾವಣೆ-ವಹಿವಾಟು ನಡೆಸಬಹುದು ಎಂದು ಎಸ್‌ಬಿಐ (SBI) ಮಾಹಿತಿ ನೀಡಿದೆ.

ಎಸ್ ಬಿಐ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದು, ಈ ರೀತಿ ಬರೆದಿದೆ, ‘ಮೊಬೈಲ್ ಮೇಲಿನ ಎಸ್ಎಂಎಸ್ ಶುಲ್ಕಗಳನ್ನು ಈಗ ಮನ್ನಾ ಮಾಡಲಾಗಿದೆ. ಬಳಕೆದಾರರು ಈಗ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ವಹಿವಾಟು ನಡೆಸಬಹುದು’ ಎಂದು ಹೇಳಿದೆ. ಬಳಕೆದಾರರು ಹಣ ಕಳುಹಿಸಲು, ಹಣ ವಿನಂತಿಸಲು, ಖಾತೆಯಲ್ಲಿರುವ ಬಾಕಿ ಮೊತ್ತ ತಿಳಿಯಲು, ಮಿನಿ ಸ್ಟೇಟ್‌ಮೆಂಟ್ ಪಡೆಯಲು ಹಾಗೂ ಯುಪಿಐ ಪಿನ್ ಬದಲಾವಣೆ ಸೇರಿದಂತೆ ಹಲವು ಸೇವೆಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯಬಹುದು ಎಂದು ಎಸ್‌ಬಿ ಹೇಳಿದೆ.

Leave A Reply

Your email address will not be published.