ಕನ್ನಡ ಹೋರಾಟಗಾರನ ಥ್ರಿಲ್ಲಿಂಗ್ ಕಥೆ | ಪ್ರೇಕ್ಷಕರ ಮನ ಗೆದ್ದ ಸಿನಿಮಾ

ಕನ್ನಡ ಭಾಷೆಯ ಉಳಿವಿಗಾಗಿ ಹಲವರು ಹೋರಾಟ ಮಾಡುತ್ತಿರುತ್ತಾರೆ. ಈ ಹೋರಾಟಗಾರರಿಗೆ ಜೀವ ಬೆದರಿಕೆಯೂ ಸೇರಿದಂತೆ ಹಲವು ಸಮಸ್ಯೆಗಳು ಬರುತ್ತವೆ. ಇಂತಹ ಒಬ್ಬ ಹೋರಾಟಗಾರನ ಕಥೆ ಈ ವಾರ ಬಿಡುಗಡೆಯಾಗಿರುವ ‘. ಪಂಪ ಎಂದಾಕ್ಷಣ ಇದು ಆದಿಕವಿ ಪಂಪನ ಕಥೆ ಇರಬಹುದು ಎಂದುಕೊಳ್ಳುತ್ತಾರೆ ಆದರೆ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ.

ಪಂಚಹಳ್ಳಿ ಪರಶಿವಮೂರ್ತಿಯನ್ನು ಜನ ಚಿಕ್ಕದಾಗಿ ಪಂಪ ಎಂದು ಕರೆಯುತ್ತಿರುತ್ತಾರೆ. ಇಡೀ ಸಿನಿಮಾ ಈ ಪಂಪ ಅವರ ಸುತ್ತವೇ ಸುತ್ತುತ್ತದೆ. ಪಂಪ ಒಂದು ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ತ್ರೀ ಜಾನರ್ ಸಿನಿಮ, ಪಂಪ ಎಂಬ ಕನ್ನಡದ ಲೇಖಕ ಪ್ರಾಧ್ಯಾಪಕ ಕೊಲೆ ಪ್ರಯತ್ನವಾಗುತ್ತದೆ. ಈ ಕೊಲೆಯನ್ನು ಯಾರು ಮಾಡಿದರು ಅದರ ಹಿಂದಿನ ಉದ್ದೇಶವೇನು ಎಂಬುದೇ ಸಿನಿಮಾದ ಕಥೆ.

ಅದೆಲ್ಲವೂ ಕ್ಲೈಮ್ಯಾಕ್ಸ್ ನಲ್ಲಿ ರಿವಿಲ್ ಆಗುತ್ತೆ. ಅಲ್ಲಿಯವರೆಗೂ ಒಂದಷ್ಟು ಸಂಗೀತ ಮತ್ತು ಪ್ರೇಕ್ಷಕರ ಊಹೆ ಮಾಡಬಹುದಾದಂತಹ ದೃಶ್ಯಗಳ ಮೂಲಕ ಸಿನಿಮಾವನ್ನು ಕಟ್ಟಿದ್ದಾರೆ ನಿರ್ದೇಶಕ ಎಸ್ ಮಹೇಂದರ್. ವ್ಯಾಮೋಹ, ಆಕರ್ಷಣೆ ಎಂಬುದು ಇಂದಿನ ಯವ ಜನರಲ್ಲಿ ಹೇಗೆ ಮನೆ ಮಾಡಿದೆ ಅದರಿಂದ ಉಂಟಾಗುವ ತೊಂದರೆಗಳೇನು ಎಂಬುದನ್ನು ಸಹ ಸೂಚಕವಾಗಿ ನಿರ್ದೇಶಕರು ತೋರಿಸಿದ್ದಾರೆ.

ಮೊದಲೇ ಹೇಳಿದಂತೆ ಪಂಪ ಒಂದು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಸಿನಿಮಾ. ಹಾಗಾಗಿ ಸಿನಿಮಾದ ಬಗ್ಗೆ ಹೆಚ್ಚಿನ ವಿಷಯಗಳನ್ನು ಹೇಳಿದರೆ ಅದರಲ್ಲಿ ಥ್ರಿಲ್ಲಿಂಗ್ ಕಡಿಮೆಯಾಗುತ್ತದೆ. ವಿಶೇಷ ಎಂದರೆ ಕನ್ನಡದಲ್ಲಿ ಎಲ್ಲಾ ಜನ ಭಾಷೆಯ ಬಗೆಗಿನ ತಮ್ಮ ಅಭಿಮಾನವನ್ನು ಕಥಾನಾಯಕನ ಮೂಲಕ ಚಂದವಾಗಿ ಪ್ರಸ್ತುತಪಡಿಸಿದ್ದಾರೆ.

ಕನ್ನಡ ಹೋರಾಟಗಾರರ ಕಷ್ಟ ಮತ್ತು ವ್ಯವಸ್ಥೆ ಎಂಬುದು ಹೋರಾಟಗಳ ಧ್ವನಿಯನ್ನು ಹೇಗೆ ಅಡಗಿಸುತ್ತದೆ ಎಂಬುದು ಸಹ ಈ ಸಿನಿಮಾದಲ್ಲಿದೆ. ಹಾಗಾಗಿ ಕನ್ನಡದ ಹೋರಾಟಗಾರರೆಲ್ಲ ಈ ಸಿನಿಮಾ ಒಮ್ಮೆ ನೋಡಬೇಕು. ಬಹಳ ದಿನಗಳ ನಂತರ ಸಂಗೀತ ನಿರ್ದೇಶನ ಮಾಡಿರುವ ಹಂಸಲೇಖ ಹಾಡುಗಳ ಮೂಲಕ ಇಷ್ಟವಾಗುತ್ತಾರೆ. ಆದರೆ ಹಿನ್ನೆಲೆ ಸಂಗೀತ ಕೊಂಚ ಹೆಚ್ಚಾಯಿತು ಎನಿಸುತ್ತದೆ. ಮರ್ಡರ್ಮಿಸ್ರಿ ಯನ್ನು ಇಷ್ಟಪಡುವವರು ಮತ್ತು ಕನ್ನಡ ಹೋರಾಟಗಾರರು ಈ ಸಿನಿಮಾವನ್ನು ಒಮ್ಮೆ ನೋಡಬಹುದು.

Leave A Reply

Your email address will not be published.