ಪಾರ್ಸೆಲ್ ಎಂದು ಮನೆ ಬಾಗಿಲು ತೆರೆಸಿದ ವ್ಯಕ್ತಿ ಮಾಡಿದ್ದು ಮಾತ್ರ ಈ ಕೆಲಸ!

ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ವಿಧವಿಧವಾದ ಯೋಚನೆಗಳೊಂದಿಗೆ ವಂಚನೆಗೆ ಇಳಿಯುತ್ತಿದ್ದಾರೆ ಅದಷ್ಟೇ ಜಾಗೃತ ವಹಿಸಿದರು ವಂಚನೆಗೊಳಗಾಗುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ ಅದರಂತೆ ಇಲ್ಲೊಂದು ಕಡೆ ಪಾರ್ಸಲ್ ಎಂದು ಮನೆಯೊಳಗೆ ನುಗ್ಗಿದ ಹವಾ ಮಾಡಿದ್ದು ಕಳ್ಳತನದ ಕೆಲಸ.

ಇಂತಹದೊಂದು ಘಟನೆ ನಂಜನಗೂಡಿನ ರಾಮಸ್ವಾಮಿ ಬಡಾವಣೆಯ ಒಂದನೇ ಬ್ಲಾಕ್​ನಲ್ಲಿ ನಡೆದಿದೆ. ಪಾರ್ಸೆಲ್ ಬಂದಿದೆ ಎಂದು ಹೇಳಿ ಮನೆಯೊಳಗೆ ನುಗ್ಗಿದ ಕಳ್ಳರು ಮಹಿಳೆಯನ್ನು ಕಟ್ಟಿಹಾಕಿ ಚಿನ್ನ ದೋಚಿದ್ದಾರೆ. ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಒಬ್ಬರೇ ಮನೆಯಲ್ಲಿದ್ದ ಸಂದರ್ಭ ಈ ಘಟನೆ ನಡೆದಿದೆ. ಈ ಘಟನೆ ಪಾರ್ಸೆಲ್ ತರಿಸುವವರಿಗೆ ಮುನ್ನೆಚ್ಚರಿಕೆಯ ಗಂಟೆಯಾಗಿದೆ.

ಕಳ್ಳರು ಡೂಪ್ಲಿಕೇಟ್ ಪಾರ್ಸೆಲ್ ಬಾಕ್ಸ್ ತೋರಿಸಿ ಮನೆಯ ಬಾಗಿಲು ತೆಗೆಯಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಬಾಗಿಲು ತೆಗೆಯುತ್ತಿದ್ದಂತೆ ಒಳ ನುಗ್ಗಿದ ಕಳ್ಳರು ಬೆದರಿಸಿ ಕೈಕಾಲು ಕಟ್ಟಿ ಹಾಕಿದ್ದಾರೆ. ಕಿರುಚದಂತೆ ಬಾಯಿಗೆ ಪ್ಲಾಸ್ಟರ್ ಅಂಟಿಸಿದ್ದಾರೆ. ನಂತರ ಮಹಿಳೆಯ ಮೈಮೇಲಿದ್ದ ಚಿನ್ನದ ಮಾಂಗಲ್ಯ ಸರ, ಕೈ ಬಳೆ, ಉಂಗುರ ಪಡೆದುಕೊಂಡಿದ್ದಾರೆ. ನಂತರ ಮನೆಯ ಬೀರುವಿನಿಂದ ಮತ್ತೊಂದು ಜೊತೆ ಕೈಬಳೆ, ನೆಕ್ಲೆಸ್, ಕಿವಿಯೋಲೆ, ತಲೆಬೊಟ್ಟು ಸೇರಿ 175 ಗ್ರಾಂ.ಗೂ ಹೆಚ್ಚು ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾರೆ. ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply