SSLC ವಿದ್ಯಾರ್ಥಿಗಳೇ ಗಮನಿಸಿ : ಮುಖ್ಯ ಪರೀಕ್ಷೆಯ ಅಂಕಪಟ್ಟಿಯಲ್ಲಿನ ಹೆಸರು, ಜನ್ಮ ದಿನಾಂಕ ತಿದ್ದುಪಡಿಗೆ ಇಂದು ಕೊನೆಯ ದಿನ

2022 ರ ಏಪ್ರಿಲ್ ನಲ್ಲಿ ನಡೆದ `SSLC’ ಮುಖ್ಯ ಪರೀಕ್ಷೆಯ ಅಂಕಪಟ್ಟಿಯಲ್ಲಿನ ಹೆಸರು, ಜನ್ಮ ದಿನಾಂಕ ತಿದ್ದುಪಡಿಯಲ್ಲಿ ಬದಲಾವಣೆಗಳಿದ್ದಲ್ಲಿ ಕೋಡಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2022 ರ ಏಪ್ರಿಲ್ ನಲ್ಲಿ ನಡೆದ ಎಸ್ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ಅಂಕಪಟ್ಟಿಗಳನ್ನು ಸಂಬಂಧಪಟ್ಟ ಶಾಲೆಗಳಿಗೆ ರವಾನೆಯಲಿದೆ. ಹಾಗಾಗಿ ಸದರೀ ಅಂಕಪಟ್ಟಿಗಳಲ್ಲಿ ಹೆಸರು/ಜನ್ಮದಿನಾಂಕಗಳಲ್ಲಿ ಲೋಪ ದೋಷಗಳಿದ್ದರೆ, ತಿದ್ದುಪಡಿಗಳಿಗೆ ಶಾಲಾ ಮುಖ್ಯ ಶಿಕ್ಷಕರುಗಳಿಂದ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ಈ ಪ್ರಸ್ತಾವನೆ ಸಲ್ಲಿಸಲು 1 ಸಾವಿರ ರೂ.ಶುಲ್ಕ ಸಹಿತ 02-09-2022 ರ ಒಳಗೆ ದಿನಾಂಕ ನಿಗದಿಪಡಿಸಲಾಗಿತ್ತು.

ಆದರೆ ಇದೀಗ, ಪ್ರಸ್ತುತ ಅಂತಿಮ ದಿನಾಂಕದ ನಂತರವೂ ಸಹ ಕೆಲವು ಪ್ರಸ್ತಾವನೆಯನ್ನು ಮಂಡಳಿ ಸ್ವೀಕೃತಗೊಳಿಸಿ, ವಿದ್ಯಾರ್ಥಿಗಳು ಶೈಕ್ಷಣಿಕ ಹಿತದೃಷ್ಟಿಯಿಂದ ಅಂಕಪಟ್ಟಿಗಳಲ್ಲಿನ ತಿದ್ದುಪಡಿಗೆ ಮಂಡಳಿ ನಿಗದಿಪಡಿಸಿರುವ ದಾಖಲೆಗಳು ಮತ್ತು 1 ಸಾವಿರ ರೂ. ಶುಲ್ಕಗಳೊಂದಿಗೆ 17-09-2022 ರೊಳಗೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಈ ಮೂಲಕ ಸೂಚನೆ ನೀಡಿದೆ.

Leave A Reply

Your email address will not be published.