ಭಾರತೀಯ ನವ ದಂಪತಿಗಳು First Night ನಲ್ಲಿ ಏನು ಮಾಡುತ್ತಾರೆ? ಸಮೀಕ್ಷೆ

ಮದುವೆ ಎನ್ನುವುದು ಭಾರತದಲ್ಲಿ ಎರಡು ಕುಟುಂಬಗಳನ್ನು ಬೆಸೆಯುವ ಸಂಬಂಧ ಎಂದೇ ಕರೆಯಲಾಗುತ್ತದೆ. ಹಾಗೆನೇ ಯಾರು ಮದುವೆಯಾಗುತ್ತಾರೋ ಅವರ ಜೀವನ ಸುಖಮಯವಾಗಿರಲೆಂದೇ ಹಾರೈಸುವವರ ಜೊತೆಗೇ, ಅದಕ್ಕಾಗಿಯೇ ಇವರ ದಾಂಪತ್ಯ ಚೆನ್ನಾಗಿರಲೆಂದು ಮದುವೆಗೆ ಮೊದಲೇ ಜಾತಕ ಹೊಂದಿಸಿ, ಸಂಪ್ರದಾಯದ ರೀತಿಯಲ್ಲಿ ಮದುವೆ ಮಾಡುವ ಪದ್ಧತಿ ಅನೇಕ ಕಡೆಗಳಲ್ಲಿ ಇದೆ. ಇತ್ತೀಚೆಗೆ ಭಾರತದಲ್ಲಿ ಬಹುತೇಕ ಯುವ ಜನತೆ ಆರೆಂಜ್ ಮ್ಯಾರೇಜ್ ಕಡೆ ಒಲವು ತೋರಿಸುತ್ತಿದ್ದಾರೆ. ಅದು ಬೇರೆಯ ವಿಷಯ.

ಹಾಗೆಯೇ ಈ ಮದುವೆ ( Marriage) ಸಂಪ್ರದಾಯ ಮುಗಿದ ನಂತರ ಇರುವ ದೊಡ್ಡ ಸಂಭ್ರಮವೇ ಮೊದಲ ರಾತ್ರಿ ( First Night) ನದ್ದು. ಪ್ರಸ್ಥ, ಶೋಭನ ಎಂದು ಕೂಡಾ ಕರೆಯಲ್ಪಡುವ, ಫಸ್ಟ್ ನೈಟ್ ಎಂದೇ ಜನಪ್ರಿಯವಾಗಿ ಗುರುತಿಸಿಕೊಳ್ಳುವ ಗಂಡು ಹೆಣ್ಣಿನ ಮೊದಲ ಸಮಾಗಮಕ್ಕೆ ಮುಹೂರ್ತ ನೋಡುವವರಿದ್ದಾರೆ. ಒಳ್ಳೆಯ ಕಾಲ ನೋಡಿ, ದಂಪತಿಯನ್ನು ಸಿಂಗರಿಸಿ ಶೃಂಗಾರಕ್ಕೆ ರೆಡಿ ಮಾಡಿ ಕಳಿಸಲಾಗುತ್ತದೆ. ಆ ಮೂಲಕ ದಂಪತಿ ಜೀವನ ಹಸನಾಗಿರಲಿ ಎನ್ನುವ ಕಾರಣಕ್ಕೆ ಮುಹೂರ್ತ ನೋಡಿ, ದಂಪತಿಯನ್ನು ಕೋಣೆಗೆ ಕಳಿಸ್ತಾರೆ.

ಫಸ್ಟ್ ನೈಟ್ ನ ಬಗ್ಗೆ ಕನಸು, ಕಲ್ಪನೆ ಕಟ್ಟಿಕೊಳ್ಳದ ಹುಡುಗ ಹುಡುಗಿಯರು ಸಿಗಲಿಕ್ಕಿಲ್ಲ. ನವ ದಂಪತಿಗಳಂತೂ ಮೊದಲ ರಾತ್ರಿ ಬಗ್ಗೆ ಕನಸು ಕಾಣ್ತಾನೆ ಇರ್ತಾರೆ. ಸಿನಿಮಾ, ಟಿವಿ ಧಾರಾವಾಹಿಗಳಲ್ಲಿ ನೀವು ಗಮನಿಸಿದ ಹಾಗೆ ಫಸ್ಟ್ ನೈಟನ್ನು ಬಹಳ ವಿಜೃಂಭಣೆಯಿಂದ ವಿಶೇಷವಾಗಿ ತೋರಿಸುತ್ತಾರೆ. ಈಗೀಗ ಒಂದಿಡೀ ತಿಂಗಳು ಧಾರಾವಾಹಿಗಳಲ್ಲಿ ಫಸ್ಟ್ ನೈಟ್ ಸಂಬಂಧಿತ ಕಥೆಯನ್ನು ಓಡಿಸುತ್ತಾರೆ. ಆದರೆ ಅದು ಪರದೆಯ ಕಥೆ, ಅಂದರೆ ರೀಲ್ ! ಆದರೆ ಒಳಗೆ, ಮುಚ್ಚಿದ ಬಾಗಿಲುಗಳ ಹಿಂದೆ ಏನು ನಡೆಯುತ್ತೆ ? ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರ ನೋಡಿ ‘ಪಳಗಿದ ‘ ವೀಕ್ಷಕರು, ಮೊದಲ ರಾತ್ರಿಯ ದಿನ ಆಕೆಯ ಏರು ದಿನ್ನೆಗಳ ದೇಹದ ಮೇಲೆ ಉರುಳಿ ಬಿಡಲು ಕಾಶ್ಮೀರಿ ಸೇಬು, ಆಕೆಯ ಗುಳಿಯ ಹೊಕ್ಕುಳಿಗೆ ಗುರಿ ಇಟ್ಟು ಹೊಡೆಯಲು ದ್ರಾಕ್ಷಿ ಹಣ್ಣು, ಟನ್ ಗಟ್ಟಲೆ ಗುಲಾಬಿ ಪಕಳೆಗಳು…..ಇತ್ಯಾದಿ ಪರಿಕರಗಳನ್ನು ಬಳಸಿಕೊಂಡು ವಿಭಿನ್ನವಾಗಿ ಹಾಡು ಡ್ಯಾನ್ಸು ಮಾಡುತ್ತಾ ಮೊದಲ ಮಿಲನದ ಸಂಭ್ರಮ ಆಚರಿಸುವ ಹುನ್ನಾರದಲ್ಲಿ ಇರುತ್ತಾರೆ. ಆದರೆ…..!!

ಆದರೆ ರಿಯಲ್ ಲೈಫ್ ನಲ್ಲಿ ನೀವು ಅಂದುಕೊಂಡ ಹಾಗೆ ಏನೂ ನಡೆಯುವುದಿಲ್ಲ ಎಂಬುದು ಕೆಲ ಸಮೀಕ್ಷೆಗಳಿಂದ ಈಗ ತಿಳಿದು ಬಂದಿದೆ. ವಾಸ್ತವವಾಗಿ ಹೆಚ್ಚಿನ ದಂಪತಿ (Couple) ತಮ್ಮ ಮೊದಲ ರಾತ್ರಿ (First Night) ಏನು ಮಾಡುತ್ತಾರೆ ಎಂದು ರಸಿಕ ಸಮೀಕ್ಷಾ ತಂಡವೊಂದು ಸಮೀಕ್ಷೆಯೊಂದನ್ನು ಬಹಿರಂಗಪಡಿಸಿದೆ.

ಯುಕೆ (UK) ಕಂಪನಿಯೊಂದು ನಡೆಸಿದ ಸಮೀಕ್ಷೆಯ (Survey) ಪ್ರಕಾರ ಶೇಕಡಾ 52 ರಷ್ಟು ದಂಪತಿ ಮದುವೆಯ ಮೊದಲ ರಾತ್ರಿ ಸಂಭೋಗ ಬೆಳೆಸುವುದಿಲ್ಲ. ಕಾರಣ ಗದ್ದಲ ಸಡಗರಭರಿತ ಮದುವೆಯ ಓಡಾಟದ ಕಾರಣ ಅವರು ಸಾಕಷ್ಟು ಒತ್ತಡದಲ್ಲಿರುತ್ತಾರೆಂದು ಸಮೀಕ್ಷೆ ಹೇಳಿದೆ. ಮದುವೆಯ ಮೊದಲ ರಾತ್ರಿಯೇ ಸಂಬಂಧ ಬೆಳೆಸಿದ ಅವಸರ ಜೋಡಿಗಳು ಶೇಕಡಾ 16 ರಷ್ಟು ಜನರು. ಹಾಗೆ ಮದುವೆಯ ದಿನವೇ, ಫಸ್ಟ್ ನೈಟ್ ನಲ್ಲಿ ಸಂಬಂಧ ಬೆಳೆಸಿ ತಾವು ನಿರಾಶೆಗೊಂಡಿರುವುದಾಗಿ ಅವರು ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 9 ರಷ್ಟು ಜನರು ಮದುವೆಯಾದ ನಂತರ ಕನಿಷ್ಠ ಎರಡು ದಿನಗಳ ಕಾಲ ಶಾರೀರಿಕ ಸಂಬಂಧ ಬೆಳೆಸುವುದಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಅಷ್ಟಕ್ಕೂ ಈ ಫಸ್ಟ್ ನೈಟ್ ಮಾಡದ ದಂಪತಿ ಏನು ಮಾಡ್ತಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುವುದು ಸಹಜ. ಇದಕ್ಕೆ ಸಮೀಕ್ಷೆಯಿಂದ ಬಂದ ಉತ್ತರ ಈ ಕೆಳಗೆ ನೀಡಲಾಗಿದೆ.

ಸಮೀಕ್ಷೆಯ ಪ್ರಕಾರ, ಅನೇಕ ದಂಪತಿ ಈ ಮದುವೆ ವಿಧಿವಿಧಾನಗಳಿಂದ ಸುಸ್ತಾಗಿ ನಿದ್ದೆಗೆ ಜಾರುತ್ತಾರೆ. ಸಾಧಾರಣ ಎಲ್ಲರೂ ಇದೇ ಉತ್ತರ ನೀಡಿದ್ದಾರೆ. ಮದುವೆ ವಿಧಿ ವಿಧಾನಗಳಿಂದ ದಂಪತಿಗೆ ಸುಸ್ತಾಗುತ್ತದೆ. ಇದ್ರಿಂದ ನಿದ್ರೆ ಅನಿವಾರ್ಯವಾಗುತ್ತದೆ. ಭಾರತದಲ್ಲಿ ಈ ಮದುವೆ ಕಾರ್ಯಕ್ರಮ ನಡೆದರೆ ನಿಜಕ್ಕೂ ಅನೇಕ ಶಾಸ್ತ್ರಗಳನ್ನು ನಿಭಾಯಿಸಬೇಕಾಗುತ್ತದೆ. ಮದುವೆಗೆ ಒಂದು ವಾರದ ಮೊದಲೇ ವರ ಮತ್ತು ವಧು ನಿದ್ರೆ ಬಿಟ್ಟಿರುತ್ತಾರೆ. ಹಾಗಾಗಿ ದಂಪತಿ ಮಲಗಲು ಪ್ರಯತ್ನಿಸುತ್ತಾರೆ. ಆಯಾಸದಿಂದ ಹೆಚ್ಚು ಮಾತನಾಡಲೂ ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಿದ್ರೆ ಮಾಡ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಇನ್ನೊಂದು ಇಂಟೆರೆಸ್ಟಿಂಗ್ ವಿಷಯ ಏನೆಂದರೆ, ಇತ್ತೀಚೆಗೆ ಮದುವೆಯ ನಂತರ ಹನಿಮೂನ್ ಗೆ ಹೋಗುವ ಟ್ರೆಂಡ್ ಹೆಚ್ಚಾಗಿರುವುದರಿಂದ, ಗಂಡ ಹೆಂಡತಿ ಮದುವೆ ಮೊದಲ ರಾತ್ರಿ ಹನಿಮೂನ್ ಬಗ್ಗೆ ಪ್ಲ್ಯಾನ್ ಮಾಡ್ತಾರೆ. ಎಲ್ಲಿಗೆ ಹೋಗುವುದು ಎಂಬುವುದರಿಂದ ಹಿಡಿದು, ಹೊಟೇಲ್ ಬುಕ್ಕಿಂಗ್ ವರೆಗೆ ಅನೇಕ ವಿಷ್ಯಗಳನ್ನು ಚರ್ಚಿಸ್ತಾರೆ ಎಂದು ಸಮೀಕ್ಷೆಯಲ್ಲಿ ಕಂಡು ಬಂದಿದೆ.

ಇನ್ನೊಂದು, ಇಂಪಾರ್ಟೆಂಟ್ ವಿಷಯ ಏನೆಂದರೆ, ಮೊದಲೇ ಹೇಳಿದಂತೆ ಭಾರತದಲ್ಲಿ ಅರೆಂಜ್ ಮ್ಯಾರೇಜ್ ಸಂಖ್ಯೆ ಹೆಚ್ಚಿದೆ. ಸಂಗಾತಿ ಬಗ್ಗೆ ತುಂಬಾ ವಿಷ್ಯಗಳನ್ನು ಮಾತನಾಡಲು ಅವಕಾಶ ಸಿಕ್ಕಿರುವುದಿಲ್ಲ. ಹಾಗಾಗಿ ಕೆಲ ದಂಪತಿ ಮೊದಲ ರಾತ್ರಿಯನ್ನು ಪರಸ್ಪರ ಅರ್ಥ ಮಾಡಿಕೊಳ್ಳುವುದಲ್ಲಿ ಕಳೆಯುತ್ತಾರೆ. ದಂಪತಿ ಪರಸ್ಪರ ಕುಟುಂಬ, ಅಭ್ಯಾಸ, ಹವ್ಯಾಸ, ಇಷ್ಟ-ಕಷ್ಟದ ಬಗ್ಗೆ ಮಾತನಾಡ್ತಾರೆ.

ಕೆಲ ಕುಟುಂಬಗಳಲ್ಲಿ ಮದುವೆಯ ಮೊದಲ ರಾತ್ರಿ ಕೆಲವೊಂದು ಆಟಗಳನ್ನು ಆಯೋಜನೆ ಮಾಡುವ ಸಂಪ್ರದಾಯವಿರುತ್ತದೆ.‌ ಹಾಗಾಗಿ ಈ ಕಾರ್ಯಕ್ರಮ ಮಧ್ಯರಾತ್ರಿಯವರೆಗೂ ಇರುವುದರಿಂದ, ಈ ಸಂದರ್ಭದಲ್ಲಿ ಪತಿ – ಪತ್ನಿಗೆ ಪರಸ್ಪರ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ಕುಟುಂಬದ ಜೊತೆ ಅವರು ಕಾಲ ಕಳೆಯುವಂತಹ ಅನಿವಾರ್ಯತೆ ಇರುತ್ತದೆ. ಹಾಗಾಗಿ ಫಸ್ಟ್ ನೈಟ್ ನ ದಿನ ಸ್ಲೀಪಿಂಗ್ ನೈಟ್ ಮಾಡುವುದು ಅನಿವಾರ್ಯವಾಗುತ್ತದೆ. ಇಲ್ಲಿಯತನಕ ಬೆರಗು ಮೂಡಿಸಿ ಕಾದಿರಿಸಿದ್ದ ಸಂಭೋಗ ಇನ್ನೊಂದು ದಿನಕ್ಕೆ ಶಿಫ್ಟ್ ಆಗುತ್ತದೆ. ಅಲ್ಲಿಯತನಕ ಕ್ಲೈಮ್ಯಾಕ್ಸ್ ತನ್ನ ಕುತೂಹಲವನ್ನು ಉಳಿಸಿಕೊಳ್ಳುತ್ತದೆ.

Leave A Reply

Your email address will not be published.