Health tips : ದೇಹದಲ್ಲಿ ಕಾಣುವ ‘ ಊತ ಸಮಸ್ಯೆ’ ಗೆ ಇವುಗಳನ್ನು ಟ್ರೈ ಮಾಡಿ

ಉರಿಯೂತವು ದೇಹದ ಬಿಳಿ ರಕ್ತ ಕಣಗಳು ಮತ್ತು ಅವು ತಯಾರಿಸುವ ವಸ್ತುಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ರಕ್ಷಿಸುವ ಪ್ರಕ್ರಿಯೆಯಾಗಿದ್ದು, ಸಂಧಿವಾತದಂತಹ ಕೆಲವು ರೋಗಗಳಲ್ಲಿ, ದೇಹದ ರಕ್ಷಣಾ ವ್ಯವಸ್ಥೆ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ವಿರುದ್ಧ ಹೋರಾಡಲು ಯಾವುದೇ ಪ್ರತಿರೋಧ ಇಲ್ಲದಿದ್ದಾಗ ಉರಿಯೂತ ಹೆಚ್ಚಾಗುತ್ತದೆ. ದೇಹದಲ್ಲಿ ಊತ ಉಂಟಾದಾಗ ಕೈ ಕಾಲುಗಳ ಮೇಲೆ ಕಾಣಿಸಿಕೊಳ್ಳುತ್ತದೆ. ದೇಹದ ಮೇಲೆ ಕಾಣಿಸುವ ಊತಕ್ಕೆ ಅನೇಕ ಕಾರಣಗಳಿರಬಹುದು. ಈ ಉರಿಯೂತಕ್ಕೆ ನಾವು ದಿನನಿತ್ಯ ಬಳಸುವ ಪದಾರ್ಥಗಳ ಮುಲಕ ಪರಿಹಾರ ಪಡೆಯಬಹುದು.

ಔಷಧೀಯ ಗುಣ ಹೊಂದಿರುವ ತುಳಸಿ ಉರಿಯೂತಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಲ್ಲದೆ ತುಳಸಿ ಎಲೆಯ ಚಹಾದ ಸೇವನೆ ಕೂಡ ಉರಿಯೂತ ನಿವಾರಣೆಗೆ ಸಹಕಾರಿಯಾಗಿದೆ. ಹಳದಿ, ಕಿತ್ತಳೆ, ಕೆಂಪು ಮತ್ತು ಹಚ್ಚ ಹಸಿರು ಎಲೆ ತರಕಾರಿಗಳಲ್ಲಿ ಫೈಟೋ ಕೆಮಿಕಲ್ ಗಳಾದ ಕ್ಯಾರೊಟೆನೊಯ್ಡ್ ಮತ್ತು ಫ್ಲೇವನಾಯ್ಡ್ ಗಳು ಹೆಚ್ಚಿದ್ದು, ಒಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ. ಎಲೆಕೋಸು, ದಂಟಿನ ಸೊಪ್ಪು, ಬೀಟ್ರೋಟ್ ಎಲೆಗಳು ಆರೋಗ್ಯದ ದೃಷ್ಟಿಯಿಂದ ಅಲ್ಲದೆ ಒತ್ತಡ, ಉರಿಯೂತ ನಿವಾರಕ ಗುಣ ಹೊಂದಿದೆ.

ಅರಿಶಿಣವು ನಮ್ಮನ್ನು ಸೋಂಕಿನಿಂದ ರಕ್ಷಿಸುವುದು ಎಲ್ಲರಿಗು ತಿಳಿದಿದೆ. ಉರಿಯೂತ ಮತ್ತು ನೋವನ್ನು ನಿವಾರಿಸಲು ಅರಿಶಿಣವನ್ನು ಬಳಸಲಾಗುತ್ತದೆ. ದೇಹದಲ್ಲಿ ಊತವಿದ್ದಲ್ಲಿ ಎರಡು ಚಮಚ ಎಳ್ಳೆಣ್ಣೆಯಲ್ಲಿ ಅರಿಶಿಣ ಬೆರೆಸಿ ಪೇಸ್ಟ್ ತಯಾರಿಸಿದ ನಂತರ ಊದಿಕೊಂಡ ಜಾಗಕ್ಕೆ ಮಸಾಜ್ ಮಾಡಿದರೆ ನೋವು ಮತ್ತು ಉರಿಯೂತ ಕಡಿಮೆಯಾಗುತ್ತದೆ. ಗ್ರೀನ್ ಟೀಯಲ್ಲಿ ಮನುಷ್ಯನ ದೇಹದ ತೂಕವನ್ನು ಕಡಿಮೆ ಮಾಡುವ ಅದ್ಭುತ ಗುಣ ಲಕ್ಷಣಗಳು ಅಡಗಿವೆ. ಆದರೂ ಇಷ್ಟಕ್ಕೇ ಸೀಮಿತವಾಗದೆ ದೇಹದ ಉರಿಯೂತವನ್ನು ಕಡಿಮೆ ಮಾಡುವ ಲಕ್ಷಣ ಕೂಡ ಇದರಲ್ಲಿದೆ. ದ್ರಾಕ್ಷಿಗಳು ದೀರ್ಘ ಕಾಲದ ಸಮಸ್ಯೆಗಳಾದ ಕಣ್ಣಿನ ತೊಂದರೆ, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಕಡಿಮೆಯಾಗುವಲ್ಲಿ ನೆರವಾಗುತ್ತದೆ. ಅಷ್ಟೇ ಅಲ್ಲದೆ ದ್ರಾಕ್ಷಿ ಗಳಲ್ಲಿ ಆಂಥೋ ಸಯಾನಿನ್ ಎಂಬ ಅಂಶ ಉರಿಯೂತವನ್ನು ಶಮನ ಮಾಡಲು ಸಹಕರಿಸುತ್ತದೆ.

ಜಾಯಿಕಾಯಿ ಕೈ ಅಥವಾ ಕಾಲುಗಳ ಊತಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನೋವನ್ನು ದೂರ ಮಾಡುತ್ತವೆ. ಜಾಯಿಕಾಯಿಯನ್ನು ನೀರಿನಿಂದ ಪುಡಿ ಮಾಡಿ ಅದರ ರಸವನ್ನು ತೆಗೆದು ನೋವಿದ್ದಲ್ಲಿ ಮಸಾಜ್‍ ಮಾಡಿದರೆ ಸಾಕಷ್ಟು ಪ್ರಯೋಜನ ಪಡೆಯಹುದು. ಬೆಳ್ಳುಳ್ಳಿಯಲ್ಲಿ ಡಯಾಲಿಲ್ ಡೈಸಲ್ಫೈಡ್ ಸಮೃದ್ಧವಾಗಿದ್ದು, ಉರಿಯೂತ ನಿವಾರಣಾ ಗುಣಲಕ್ಷಣಗಳನ್ನು ಹೊಂದಿದೆ.

ಹೆಚ್ಚು ಹೊತ್ತು ನಿಂತುಕೊಂಡರೆ, ಹೆಚ್ಚು ಹೊತ್ತು ಕುಳಿತುಕೊಂಡರೆ, ದೀರ್ಘ ಕಾಲದಿಂದ ಕಾಡುವ ಮಧುಮೇಹ ಸಮಸ್ಯೆಯಿಂದ ಕಾಲುಗಳು ಇದ್ದಕ್ಕಿದ್ದಂತೆ ಊದಿಕೊಳ್ಳಬಹುದು. ಕಾಲುಗಳ ಭಾಗವನ್ನು ಸಾಸಿವೆ ಎಣ್ಣೆ ಉಪಯೋಗಿಸಿ ಪ್ರತಿದಿನವೂ ಮಸಾಜ್ ಮಾಡುವುದರಿಂದ ಕಾಲುಗಳಲ್ಲಿ ರಕ್ತ ಸಂಚಾರ ಹೆಚ್ಚಾಗಿ ಆಯಾಸ ಮತ್ತು ಸುಸ್ತು ದೂರವಾಗುತ್ತದೆ. ಕಾಲುಗಳ ಭಾಗದಲ್ಲಿ ಕಂಡುಬರುವ ರಕ್ತನಾಳಗಳಲ್ಲಿ ರಕ್ತ ಪೂರೈಕೆ ಸರಿಯಾಗದೆ ಇದ್ದಾಗಲೂ ಇರುವ ಕಾರಣದಿಂದ ಕಾಲುಗಳು ಆಗಾಗ ಊದಿಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಹಾಗಾಗಿ ದೇಹದಲ್ಲಿ ಮೆಗ್ನೀಷಿಯಂ ಅಂಶದ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಕಾಲುಗಳ ಊತವನ್ನು ಕಡಿಮೆ ಮಾಡಲು ಕಲ್ಲು ಉಪ್ಪನ್ನು ಬಳಕೆ ಮಾಡುವುದು ಉತ್ತಮ.

Leave A Reply

Your email address will not be published.