Queen Elizabeth : ರಾಣಿ ಬರೆದ ರಹಸ್ಯ ಪತ್ರ | 63 ವರ್ಷಗಳ ಬಳಿಕ ಹೊರತೆಗೆಯಲಾಗುವುದು | ಗೌಪ್ಯ ಪತ್ರದಲ್ಲಿ ಬರೆದಿರುವುದಾದರೂ ಏನು?

ಜಗತ್ತು ಕಂಡ ಅಪ್ರತಿಮ ಆಡಳಿತಗಾರ್ತಿಯಾದ ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಅತ್ಯಂತ ಸುದೀರ್ಘ ಕಾಲ ಆಡಳಿತ ನಡೆಸಿದ ರಾಣಿ ಎಲಿಜಬೆತ್‌ ರ ಜೀವನದುದ್ದಕ್ಕೂ ಜನರ ಏಳಿಗೆಗೆ ಚಿತ್ತ ವಹಿಸುತ್ತಿದ್ದರು. ಅವಿಸ್ಮರಣೀಯ ಸಾಧನೆಗಳ ಮೂಲಕ ಬ್ರಿಟನ್ ಜನತೆಯ ಮನಗೆದ್ದಿರುವ ಎಲಿಜಬೆತ್ ಸಾವಿನ ಬಳಿಕ ಅನೇಕ ಕೂತುಹಲಕಾರಿ ವಿಷಯಗಳು ಹೊರಬಿದ್ದಿದ್ದು , ಜನಮಾನಸದಲ್ಲಿ ಕೌತುಕ ಸೃಷ್ಟಿಸಿರುವುದಂತೂ ಸುಳ್ಳಲ್ಲ.

ಹಿಂದಿನ ತಲೆಮಾರಿನವರು ಪ್ರೇಮ ಪತ್ರಗಳನ್ನು ಬರೆದು ಪ್ರೀತಿ ಪಾತ್ರರಿಗೆ ರವಾನಿಸುತ್ತಾ ಸವಿ ನೆನಪನ್ನು ಮೆಲುಕು ಹಾಕುತ್ತಾ ಪ್ರೇಮ ಸಂದೇಶ ಸಾರುತ್ತಿದ್ದುದು ಎಲ್ಲರೂ ಕೇಳಿರಬಹುದು. ಆದರೆ ಈಗ ಕಾಲ ಬದಲಾಗಿದೆ, ಮೊಬೈಲ್ ನಲ್ಲಿಯೇ ಎಲ್ಲ ಸಂದೇಶಗಳು ರವಾನೆಯಾಗುತ್ತಿದೆ. ಅರೇ!! ರಾಣಿ ಎಲಿಜಬೆತ್ ಗೂ ಪತ್ರಕ್ಕೂ ಏನು ಸಂಬಂಧ ?? ಎಂದು ನೀವು ಚಿಂತಿಸುತ್ತಿದ್ದರೆ, ರಾಣಿ ಎಲಿಜಬೆತ್‌ ಬರೆದಿರುವ ರಹಸ್ಯ ಪತ್ರ ಅವರ ನಿಧನದ ಬೆನ್ನಲ್ಲೇ ಭಾರಿ ಸದ್ದು ಮಾಡುತ್ತಿದೆ.

ಆಸ್ಟ್ರೇಲಿಯಾ ರಾಜಧಾನಿ ಸಿಡ್ನಿಯ ಜನತೆಗಾಗಿ ರಹಸ್ಯ ಪತ್ರವೊಂದು ಸಿಡ್ನಿಯ ಐತಿಹಾಸಿಕ ಕಟ್ಟಡವೊಂದರ ಕಮಾನಿನ ಛಾವಣಿಯೊಂದರಲ್ಲಿ ಇಡಲಾಗಿದೆ. 1986ರ ನವೆಂಬರ್‌ನಲ್ಲಿ ಕ್ವೀನ್‌ ಎಲಿಜಬೆತ್‌ ಬರೆದಿರುವ ಈ ನಿಗೂಢ ಪತ್ರ ಬರೆದು 36ವರ್ಷ ಗಳಾಗಿದ್ದರೂ ಕೂಡ ಪತ್ರದಲ್ಲಿ ಏನು ರಹಸ್ಯ ಅಡಗಿದೆ ಎಂಬುದು ಬಹಿರಂಗವಾಗಿಲ್ಲ. ಅಲ್ಲದೇ ಮತ್ತೊಂದು ಕುತೂಹಲಕಾರಿ ವಿಚಾರ ಆ ಪತ್ರವನ್ನು ಇನ್ನೂ ಒಂದಲ್ಲ – ಎರಡಲ್ಲ ಬರೋಬ್ಬರಿ 63 ವರ್ಷಗಳ ಕಾಲ ಹೊರತೆಗೆಯಲಾಗದು.

ಆಸ್ಟ್ರೇಲಿಯದ 7ನ್ಯೂಸ್ ವರದಿಯೊಂದರ ಪ್ರಕಾರ ಸದರಿ ಪತ್ರವನ್ನು ರಾಣಿಯು ಸಿಡ್ನಿ ನಿವಾಸಿಗಳನ್ನು ಉದ್ದೇಶಿಸಿ ಬರೆದಿದ್ದು, ರಾಣಿ ಬರೆದಿರುವ ಪತ್ರವನ್ನು ಒಂದು ಗುಟ್ಟಾದ ಸ್ಥಳದಲ್ಲಿ ಗ್ಲಾಸಿನ ಕೇಸೊಂದಲ್ಲಿ ಇಟ್ಟಿರುವುದರಿಂದ ಅದರ ಬಗ್ಗೆ ಮಾಹಿತಿ ರಾಣಿಯ ಖಾಸಗಿ ಸಿಬ್ಬಂದಿಗಳಿಗೂ ಕೂಡ ತಿಳಿದಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. ನಿಗೂಡ ರಹಸ್ಯ ಕಾಯ್ದುಕೊಂಡಿರುವ ಪತ್ರವನ್ನು ಸಿಡ್ನಿಯ ಮೇಯರ್ ಗೆ ರವಾನಿಸಲಾಗಿದ್ದು, ಕ್ರಿ.ಶ. 2085ರವರೆಗೆ ಪತ್ರದ ಗುಟ್ಟು ತಿಳಿಯಲು ಕಾತುರದಿಂದ ಕಾಯದೆ ಬೇರೆ ವಿಧಿಯಿಲ್ಲ.

ಅಷ್ಟೇ ಅಲ್ಲದೆ ಪತ್ರದ ಮೇಲೆ ಸಿಡ್ನಿಯ ಮೇಯರ್‌ ಗೆ ಒಂದು ಸಂದೇಶವಿದ್ದು, 2085 ರಲ್ಲಿ ಯಾವುದಾದರೂ ಒಂದು ದಿನ ಈ ಪತ್ರ ತೆರೆದು, ಸಿಡ್ನಿಯ ಜನರಿಗೆ ಈ ಪತ್ರದಲ್ಲಿ ಏನಿದೆ ಎಂಬುದನ್ನು ತಿಳಿಸಬೇಕು ಎಂಬುದಾಗಿ ಬರೆಯಲಾಗಿದೆ. ಅದರ ಕೆಳಗೆ ಎಲಿಜಬೆತ್‌ ಆರ್‌ ಎಂಬುದಾಗಿ ಸಹಿಯನ್ನು ಕೂಡ ಮಾಡಲಾಗಿದೆ.
ತಮ್ಮ ಮೊದಲ ಭೇಟಿಯಿಂದಲೂ ಮಹಾರಾಣಿಗೆ ಆಸ್ಟ್ರೇಲಿಯದ ಮೇಲೆ ವಿಶೇಷ ವ್ಯಾಮೋಹವಿತ್ತು. ಕ್ವೀನ್ ಎಲಿಜಬೆತ್ ತಮ್ಮ ನಡೆ ನುಡಿಯಿಂದ ಆಸ್ಟ್ರೇಲಿಯಾದ ಜನತೆಯನ್ನು ಹುರಿದುಂಬಿಸಿ, ಸ್ಪೂರ್ತಿ ತುಂಬುತ್ತಿದ್ದರು. ಬ್ರಿಟನ್ನಿನ ಮಹಾರಾಣಿಯಾಗಿದ್ದರೂ ಕೂಡ ಎಲಿಜಬೆತ್ ಆಸ್ಟ್ರೇಲಿಯಗೆ 16 ಬಾರಿ ಭೇಟಿ ನೀಡಿದ್ದಾರೆ. ಇದರಿಂದ ಅಲ್ಲಿನ ಜನರ ಮೇಲೆ ಅವರಿಗಿದ್ದ ವಿಶೇಷ ಆಸಕ್ತಿ, ಪ್ರೀತಿ ಎದ್ದು ಕಾಣುತ್ತದೆ.

ಸುದೀರ್ಘ ಆಡಳಿತ ನಡೆಸಿ, ಗತಿಸಿದ ಕ್ವೀನ್ ಎಲಿಜಬೆತ್ ಸಾವಿನ ನಂತರವೂ ರಹಸ್ಯ ಪತ್ರದ ಮೂಲಕ ಎಲ್ಲರ ಮನದಲ್ಲೂ ಕುತೂಹಲ ಕೆರಳಿಸಿದ್ದಂತು ಸತ್ಯ

Leave A Reply

Your email address will not be published.