ಇನ್ನು ಮುಂದೆ ಪೆಟ್ರೋಲ್, ಡೀಸೆಲ್‌ಗಳ ವಾಹನಗಳು ಇರಲ್ಲ- ಕೇಂದ್ರ ಸಚಿವ ನಿತಿನ್ ಗಡ್ಕರಿ

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಂ) ನ 62 ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತ ನಿತಿನ್ ಗಡ್ಕರಿ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. “ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ಕಡಿಮೆ ಮಾಡಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಪರ್ಯಾಯ ಇಂಧನಗಳಿಗೆ ಆದ್ಯತೆ ನೀಡಬೇಕು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಎಲೆಕ್ಟ್ರಿಕ್ ವೆಹಿಕಲ್ (ಇವಿ) ವ್ಯವಹಾರವನ್ನು ಬೆಳೆಸಲು ಮತ್ತು ಬಸ್ಸುಗಳು ಮತ್ತು ದ್ವಿಚಕ್ರ, ಮೂರು ಮತ್ತು ನಾಲ್ಕು ಚಕ್ರದ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಇದು ಸಕಾಲ ಎಂದು ಸಚಿವರು ಹೇಳಿದರು. ಭಾರತವನ್ನು ಪರ್ಯಾಯ ಇಂಧನ ವಾಹನಗಳ ಅಗ್ರ ಉತ್ಪಾದಕನನ್ನಾಗಿ ಮಾಡಲು ಬಯಸುವುದಾಗಿ ಹೇಳಿದ ಅವರು, ವಿದ್ಯುತ್ ಹೆದ್ದಾರಿಯನ್ನು ಪ್ರಾರಂಭಿಸುವ ಕನಸು ಕಂಡಿದ್ದೇನೆ ಎಂದು ಹೇಳಿದರು.

27 ಹಸಿರು ಎಕ್ಸ್ಪ್ರಸ್ವೇಗಳನ್ನು ನಿರ್ಮಿಸ ಬೇಕೆಂದು ಗಡ್ಕರಿ ಅವರು ಶಿಫಾರಸಿ ಮಾಡಿದ್ದಾಗಿ ಹೇಳಿದರು. ಹಾಗೂ ದೆಹಲಿಯಿಂದ ಮುಂಬೈಗೆ ಈಗ 52 ಗಂಟೆಗಳ ಪ್ರಯಾಣವು ಕೇವಲ 12 ಗಂಟೆಗಳ ಮಾತ್ರ ತೆಗೆದುಕೊಳ್ಳುವುದು. ಲಾಜಿಸ್ಟಿಕ್ ವೆಚ್ಚಗಳಲ್ಲಿ 10% ರಷ್ಟು ಕಡಿತ ಮಾಡಲು ಉದ್ದೇಶಿಸಿಲಾಗಿದೆ ಅಂತ ತಿಳಿಸಿದರು.

error: Content is protected !!
Scroll to Top
%d bloggers like this: