Health tips : ಕಣ್ಣಲ್ಲಿ ನೀರು ತರಿಸುವ ‘ಈರುಳ್ಳಿ’ ಯ ಉಪಯೋಗ | ಹುರಿದ ಈರುಳ್ಳಿಯ ಮಹಿಮೆ ಅನೇಕ

ಹೆಂಗೆಳೆಯರ ಕಣ್ಣಲ್ಲಿ ನೀರು ತರಿಸುವ, ಸರ್ವ ಖಾದ್ಯಗಳಲ್ಲಿ ಯೂ ಬಳಕೆಯಾಗುವ ಈರುಳ್ಳಿ ಅನೇಕ ರೋಗಗಳ ನಿವಾರಣೆಗೆ ಮನೆಮದ್ದಾಗಿ ಬಳಕೆಯಾಗುತ್ತದೆ.

ಅಡುಗೆಯ ರುಚಿಯನ್ನು ಹೆಚ್ಚಿಸಿ, ಈರುಳ್ಳಿ ಇಲ್ಲಿದೆ ಅಡುಗೆಯೇ ಅಪೂರ್ಣ ಎಂಬ ಭಾವನೆ ಸೃಷ್ಟಿಸುವ ಅಡುಗೆಗೆ ಮಾತ್ರವಲ್ಲದೆ ಬಹುಪಯೋಗಿ ಔಷಧಿಯ ಗುಣಗಳನ್ನು ಹೊಂದಿದೆ. ಈರುಳ್ಳಿಯಲ್ಲಿರುವ ಅಧಿಕ ಸಲ್ಫರ್ ಅಂಶ ದೇಹದಲ್ಲಿ ನೈಸರ್ಗಿಕ ಡಿಟಾಕ್ಸ್ ನಂತೆ ಕೆಲಸ ಮಾಡಿ ರಕ್ತದಲ್ಲಿರುವ ಕಲುಷಿತ ಅಂಶಗಳನ್ನು ಹೊರಹಾಕುವುದರ ಜೊತೆಗೆ ವಿವಿಧ ಹಾರ್ಮೋನ್ ಗಳು, ಕಿಣ್ವಗಳು, ನರ ಮತ್ತು ಕೆಂಪು ರಕ್ತ ಕಣಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಕ್ಯಾನ್ಸರ್ಗೆ ಕಾರಣವಾಗುವ ಕಾರ್ಸಿನೊಜೆನ್ಸ್ ಶೇಖರಗೊಳ್ಳುವುದನ್ನು ತಡೆಯುತ್ತದೆ.

ಅಷ್ಟೇ ಅಲ್ಲದೇ ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿರೋಧಕ, ಫಂಗಸ್ ನಿರೋಧಕ ಮತ್ತು ವೈರಸ್ ನಿರೋಧಕ ಗುಣಗಳು ಕೂಡ ಇದ್ದು, ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಸಿ ಈರುಳ್ಳಿ ರಸವು ನಮ್ಮ ಕೂದಲಿಗೆ ಉಪಕಾರಿಯಾಗಿದೆ.

ಇಷ್ಟೇ ಅಲ್ಲದೆ, ಹುರಿದ ಈರುಳ್ಳಿಯಿಂದಲೂ ಸಾಕಷ್ಟು ಅನುಕೂಲಗಳಿವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ವಿಟಮಿನ್ ಗಳ ಜೊತೆಗೆ ಕ್ಯಾಲ್ಸಿಯಂ ಮತ್ತು ಫೋಲೇಟ್ನಂತಹ ಅನೇಕ ಪೋಷಕಾಂಶಗಳು ಹುರಿದ ಈರುಳ್ಳಿಯಲ್ಲಿ ಕಂಡುಬರುತ್ತವೆ. ಹುರಿದ ಈರುಳ್ಳಿ ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.

ಹುರಿದ ಈರುಳ್ಳಿಯನ್ನು ತಿನ್ನುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ ಹಾಗೂ ಹುರಿದ ಈರುಳ್ಳಿಯನ್ನು ತಿನ್ನುವುದರಿಂದ ಕ್ಯಾಲ್ಸಿಯಂ ನಮ್ಮ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಉಳಿಯುತ್ತದೆ. ಅಲ್ಲದೆ ಹುರಿದ ಈರುಳ್ಳಿಯ ಸೇವನೆ ಮಾಡುವುದರಿಂದ ಮೂಳೆಗಳು ಬಲಗೊಳ್ಳುವುದರ ಜೊತೆಗೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ಹುರಿದ ಈರುಳ್ಳಿ ಸೇವಿಸುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ ಅಲ್ಲದೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದು ಹಾಕಬಹುದು. ಇದು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ನೆರವಾಗುತ್ತದೆ.

ಹಸಿ ಈರುಳ್ಳಿಯಿಂದಲೂ ಅನೇಕ ಪ್ರಯೋಜನಗಳಿವೆ.
ಸಾಮಾನ್ಯ ಕಾಯಿಲೆಗಳಾದ ತಂಡಿ, ಕೆಮ್ಮು, ಸೋಂಕುಗಳು ಮತ್ತು ಗಂಟಲು ಊತ, ಉಸಿರಾಟದ ತೊಂದರೆ, ಅಸ್ತಮ ಇವುಗಳನ್ನು ಗುಣಪಡಿಸಿಕೊಳ್ಳಬಹುದು. ಈರುಳ್ಳಿ ರಕ್ತಹೀರುವ ಕೀಟಗಳನ್ನು ಕೊಲ್ಲುವ ಗುಣವನ್ನು ಹೊಂದಿದೆ.

ಈರುಳ್ಳಿ ಕಿಡ್ನಿ ಕಲ್ಲುಗಳನ್ನು ತೆಗೆಯುವುದಲ್ಲದೆ, ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಕಲ್ಲುಗಳನ್ನು ತೆಗೆದುಹಾಕಲು, ಈರುಳ್ಳಿ ರಸವನ್ನು ಸಕ್ಕರೆಯೊಂದಿಗೆ ಬೆರೆಸಿ ಕುಡಿಯಬಹುದು. ಈರುಳ್ಳಿಯಲ್ಲಿ ವಿಟಮಿನ್ ಸಿ ಇದ್ದು ಇದು ಹಲ್ಲಿನ ಆರೋಗ್ಯಕ್ಕೆ ಅಗತ್ಯವಾಗಿದೆ. ಇದು ಮಾತ್ರವಲ್ಲ ಬಾಯಿಯ ಕ್ಯಾನ್ಸರ್ ಬೆಳೆಯುವುದನ್ನು ತಡೆಯಲು ಈರುಳ್ಳಿ ಸಹಾಯ ಮಾಡುತ್ತದೆ.
ಬಹುಪಯೋಗಿ ಈರುಳ್ಳಿ ಬಳಸಿ ಸಲಾಡ್, ಆಹಾರ ಪದಾರ್ಥಗಳಲ್ಲಿ ಅವಿಭಾಜ್ಯವಾಗಿದ್ದು , ಔಷದೀಯ ಗುಣಗಳು ಹೇರಳವಾಗಿವೆ. ದಿನನಿತ್ಯದ ದಿನಚರಿಯಲ್ಲಿ ಅಳವಡಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Leave A Reply

Your email address will not be published.