Bigg Boss Kannada OTT : ಎಲ್ಲಾ ಆಯಿತು ಇದೊಂದು ಬಾಕಿ ಇತ್ತು | ಬಿಗ್ ಬಾಸ್ ಮನೆಯಲ್ಲಿ ಕೇಳಿತು ‘Kiss’ ಶಬ್ದ

ಬಿಗ್ ಬಾಸ್ ಕನ್ನಡ ಒಟಿಟಿ ( Bigg Boss Kannada OTT) ಈಗ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ಆಟದಲ್ಲಿ ಗಮನಿಸಲೇಬೇಕಾದ ಒಂದು ಅಂಶವೆಂದರೆ, ರಾಕೇಶ್ ಅಡಿಗ (Rakesh Adiga) ಹಾಗೂ ಸೋನು ಶ್ರೀನಿವಾಸ್ ಗೌಡ ( Sonu Srinivas Howda) ಅವರ ಸ್ನೇಹ. ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಕ್ಲೋಸ್ ಆಗಿದ್ದಾರೆ. ಹಾಗೆನೇ ಇಬ್ಬರೂ ಪದೇ ಪದೇ ತಮ್ಮ ಮಧ್ಯೆ ಪ್ರೀತಿ ಇಲ್ಲ ಎಂಬುದನ್ನು ಕೂಡಾ ಸ್ಪಷ್ಟ ಕೂಡಾ ಮಾಡಿದ್ದಾರೆ.

ಆದರೆ ಇತ್ತೀಚೆಗೆ ಸೋನು ಅವರು ಗೆಳೆಯ ರಾಕೇಶ್ ನ್ನು ಅವಾಯ್ಡ್ ಮಾಡೋಕೆ ಆರಂಭಿಸಿದ್ದಾರೆ. ‘ನಾನು ಸೋನುನ 100 ಪರ್ಸೆಂಟ್ ಲವ್ ಮಾಡ್ತೀನಿ’ ಎಂಬ ವಿಚಾರವನ್ನು ರಾಕೇಶ್ ಹೇಳಿಕೊಂಡಿದ್ದಾರೆ. ಆದರೆ ಇದರ ಜೊತೆಗೇನೇ ರಾಕೇಶ್ ಅವರು ನಾನು ಮನೆಯ ಎಲ್ಲಾ ಸದಸ್ಯರನ್ನು ಕೂಡಾ ಪ್ರೀತಿಸ್ತೀನಿ ಎಂಬ ಮಾತನ್ನು ಕೂಡಾ ಒತ್ತಿ ಹೇಳಿದ್ದಾರೆ.

ಆದರೆ ಈ ಅವಾಯ್ಡ್ ಮಾಡೋ ಮಧ್ಯೆ‌ ಕಿಸ್ ಎಂಬ ಶಬ್ದ ಕೇಳಿಸಿಕೊಂಡಿದೆ! ಸೆಪ್ಟೆಂಬರ್ 15ರ ಎಪಿಸೋಡ್‌ನಲ್ಲಿ ಈ ವಿಚಾರ ಹೈಲೈಟ್ ಆಗಿದೆ.

ಸೋನು ಅವರನ್ನು ಕಂಡರೆ ರಾಕೇಶ್‌ಗೆ ಒಳ್ಳೆಯ ಭಾವನೆ ಇದೆ. ಫ್ರೆಂಡ್ ಆಗಿ ಸೋನು ಅವರನ್ನು ರಾಕೇಶ್ ತುಂಬಾನೇ ಕೇರ್ ಮಾಡುತ್ತಾರೆ. ಅವರೇ ಹೇಳಿದ ಹಾಗೇ ತಾಯಿ ಮಗೂನ ಕೇರ್ ಮಾಡುವ ಹಾಗೇ ಕೇರ್ ಮಾಡ್ತೀನಿ ಎಂದು. ಆದರೆ, ಸೋನು ಕೆಲವೊಮ್ಮೆ ಯಾಕೋ ಪೊಸೆಸಿವ್ ಆಗುತ್ತಾರೆ ರಾಕೇಶ್ ಮೇಲೆ. ರಾಕೇಶ್ ಬೇರೆಯವರ ಜತೆ ಮಾತನಾಡಿದರೆ ಸೋನು ಸಿಟ್ಟು ಮಾಡಿಕೊಳ್ಳುತ್ತಾರೆ. ಅವರು ಜಲಸ್ ಮಾಡಿಕೊಳ್ಳುವುದು ಎದ್ದು ಕಾಣುತ್ತದೆ. ಇಂತಹ ಸಂದರ್ಭದಲ್ಲಿ ರಾಕೇಶ್ ಅವರು ಸೋನು ಜತೆ ಹಾರ್ಷ್ ಆಗಿ ಪ್ರತಿಕ್ರಿಯಿಸುತ್ತಾರೆ.

ಬಿಗ್ ಬಾಸ್ ಒಟಿಟಿ ಕೊನೆಯ ಹಂತಕ್ಕೆ ಬರುತ್ತಿರುವ ಸಂದರ್ಭದಲ್ಲಿ ರಾಕೇಶ್ ಮೇಲೆ ಸೋನುಗೆ ಪ್ರೀತಿ ಹೆಚ್ಚುತ್ತಿದೆ. ಈ ಕಾರಣದಿಂದ ರಾಕೇಶ್ ಅವರು ಸೋನು ಅವರನ್ನು ಅವಾಯ್ಡ್ ಮಾಡುತ್ತಿದ್ದಾರೆ. ಇದು ಸೋನುಗೆ ಬೇಸರ ಮೂಡಿಸಿದೆ. ‘ರಾಕೇಶ್ ಹಾಗೂ ನನ್ನ ಮಧ್ಯೆ ಫ್ರೆಂಡ್‌ಶಿಪ್ ಇದೆ. ಪ್ರೀತಿ ಇಲ್ಲ. ಅವನ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ. ಆದರೂ ರಾಕೇಶ್ ಬೇರೆಯವರ ಜೊತೆ ಮಾತನಾಡಿದರೆ ನನಗೆ ಜಲಸ್ ಆಗುತ್ತದೆ. ಯಾಕೆ ಎಂಬುದು ಗೊತ್ತಿಲ್ಲ’ ಎಂದಿದ್ದಾರೆ ಸೋನು.

ಈ ಜಲಸ್ ಮಾಡೋ ಪ್ರಕ್ರಿಯೆಯಲ್ಲಿ ರಾಕೇಶ್ ಅವರು
ಜಯಶ್ರೀಗೆ ಕಿಸ್ ಮಾಡಿದ್ದಾರೆ. ಇದನ್ನು ನೋಡಿ ಸೋನು ಸಾಕಷ್ಟು ಉರಿದುಕೊಂಡಿದ್ದಾರೆ. ಆ ಬಳಿಕ ನಾನು ಅವಳಿಗೆ ಕಿಸ್ ಮಾಡಿದ ರೀತಿ ನಟಿಸಿದ್ದೇನೆ ಎಂದು ರಾಕೇಶ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಅನಂತರ ಸೋನು ನೀವಿಬ್ಬರೂ ಏನು ಬೇಕಿದ್ದರೂ ಮಾಡಿ ಎಂದು ಹೇಳುತ್ತಾರೆ. ಕಿಸ್ ಕೊಡುವುದು ಒಂದು ಫೀಲಿಂಗ್. ನನಗೆ ಹಾಗೇ ಯಾರ್ಯಾರಿಗೋ ಕಿಸ್ ಕೊಡೋಕೆ ಆಗಲ್ಲ ಎಂಬ ಮಾತನ್ನು ಹೇಳಿದ್ದಾರೆ.

Leave A Reply

Your email address will not be published.