ಮನಃ ಶಾಂತಿಗಾಗಿ ಮತ್ತೆ ಮತ್ತೆ ಮದುವೆ, ಕಳೆದ 43 ವರ್ಷಗಳಲ್ಲಿ 53 ಮಹಿಳೆಯರೊಂದಿಗೆ ವಿವಾಹವಾದ ಭೂಪ !

ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕವಾಗಿ ಮತ್ತು ಕೌತುಂಬಿಕವಾಗಿ ಅಲ್ಲ, ಬದಲಾಗಿ ಮನಃಶಾಂತಿಗಾಗಿ 53 ಬಾರಿ ವಿವಾಹವಾಗಿ ಸುದ್ದಿಯಾಗಿದ್ದಾನೆ. 63 ವರ್ಷದ ಅಬು ಅಬ್ದುಲ್ಲಾ ಎಂಬ ಈ ವ್ಯಕ್ತಿಗೆ ಅದೇ ಕಾರಣಕ್ಕಾಗಿ “ಶತಮಾನದ ಬಹುಪತ್ನಿತ್ವವಾದಿ” ಎಂಬ ಅಡ್ಡ ಹೆಸರು ಇಡಲಾಗಿದೆ.

ಆತ ಕಳೆದ 43 ವರ್ಷಗಳಲ್ಲಿ ಒಟ್ಟು 53 ಮಹಿಳೆಯರನ್ನು ವಿವಾಹವಾಗಿದ್ದಾನೆ. ಆತ 20 ವರ್ಷ ವಯಸ್ಸಿನವನಾಗಿದ್ದಾಗ ಮೊದಲ ಬಾರಿಗೆ ತನಗಿಂತ ಆರು ವರ್ಷ ದೊಡ್ಡವಳನ್ನು ಮದುವೆಯಾಗಿದ್ದ. ಆತ ಮೊದಲ ಬಾರಿಗೆ ಮದುವೆಯಾದಾಗ, ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಬೇಕು ಎಂಬ ಯೋಚನೆ ಆತನಿಗೆ.ಇರಲಿಲ್ಲ. ಆಗ ಆತ ಆರಾಮವಾಗಿಯೆ ಇದ್ದ ಮತ್ತು ಆತನಿಗೆ ಮಕ್ಕಳು ಕೂಡಾ ಇದ್ದು ಸಂಸಾರ ನೆಮ್ಮದಿಯಾಗಿತ್ತು. ಆದರೆ ಕೆಲವು ವರ್ಷಗಳ ನಂತರ ಬರಬರುತ್ತಾ ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾದವು. ” ಹೀಗಾಗಿ ನೆಮ್ಮದಿ ಹುಡುಕುತ್ತಾ ಮದುವೆಯಾಗಲು ಹುಡುಗಿ ಹುಡುಕಲು ಪ್ರಾರಂಭಿಸಿದೆ. ಹೀಗಾಗಿ 23 ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗಲು ನಿರ್ಧರಿಸಿದೆ ” ಎಂದಿದ್ದಾನೆ ಅಬ್ದುಲ್ಲಾ. 

ಆತ ನೆಮ್ಮದಿ ಹುಡುಕುತ್ತಾ ಎರಡನೇ ಮದುವೆಯನ್ನೇನೋ ಆದ. ಆದರೆ ದಿನ ಕಳೆದಂತೆ ತನ್ನ ಮೊದಲ ಮತ್ತು ಎರಡನೇಯ ಪತ್ನಿ ಇಬ್ಬರೊಂದಿಗೂ ಸಮಸ್ಯೆ ತಲೆದೋರಿತು. ಹಾಗಾಗಿ, ಅಬ್ದುಲ್ಲಾ ಮತ್ತೆ ಮದುವೆಯಾಗಲು ನಿರ್ಧಾರ ಮಾಡಿದ. ಮೂರನೇ ಮತ್ತು ನಾಲ್ಕನೇ ಬಾರಿಗೆ ಮದುವೆಯಾಗಲು ನಿರ್ಧರಿಸಿದ. ಮೂರನೇ ಮತ್ತು ನಾಲ್ಕನೆಯ ಪತ್ನಿಯರು ಬರುತ್ತಿದ್ದಂತೆ ತನ್ನ ಮೊದಲ ಹಾಗೂ ಎರಡನೇಯ ಹೆಂಡತಿಯರಿಬ್ಬರಿಗೂ ವಿಚ್ಛೇದನ ನೀಡಿದ. ಅಲ್ಲಿಂದ ಆಚೆ ಆತ ತಿರುಗಿ ನೋಡಿದ್ದೇ ಇಲ್ಲ. ನಿರಂತರವಾಗಿ ಹೊಸ ನೆಮ್ಮದಿಯ ಹುಡುಕಾಟದಲ್ಲಿ ಮದುವೆಯಾಗುತ್ತಲೇ ಹೋದ. ಈ ರೀತಿ ವಿವಾಹವಾಗಲು ಆತನಿಗಿದ್ದ ಪ್ರಮುಖ ಕಾರಣ ಒಂದೇ; “ತನ್ನನ್ನು ಸಂತೋಷಪಡಿಸುವ ಮಹಿಳೆಗಾಗಿ ಹುಡುಕಾಟ”! ಆದರೆ ದುರದೃಷ್ಟದ ವಿಷ್ಯ ಏನೆಂದರೆ, ‘ ಮದುವೆಯಾದ ಒಂದು ರಾತ್ರಿ ಮಾತ್ರ ಹಾಗೇ ನೆಮ್ಮದಿಯಾಗಿ ಇರಲು ಸಾಧ್ಯವಾಯಿತು ಎಂದಿದ್ದಾನೆ ‘ ಆ ರಸಿಕ ಮಹಾಶಯ.

ಆ ವ್ಯಕ್ತಿ ಸೌದಿ ಹೆಚ್ಚಾಗಿ ಮಹಿಳೆಯರನ್ನೆ ಮದುವೆಯಾಗಿದ್ದಾನೆ. ಅಲ್ಲದೆ, ಸಾಗರೋತ್ತರ ವ್ಯಾಪಾರ ಪ್ರವಾಸಗಳ ಸಂದರ್ಭ ವಿದೇಶಿ ಮಹಿಳೆಯರನ್ನು ಕೂಡಾ ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾನೆ.
ಮದುವೆಯ ಸ್ಥಿರತೆಯು ಯುವತಿಯೊಂದಿಗೆ ನಿಲ್ಲಲ್ಲ. ಹೊಸ ಹೊಸ ಹುಡುಗಿ ಬೇಕು ಅನ್ನಿಸುತ್ತದೆ. ಈಗ ತಾನೇ ಆತ ಓರ್ವ ಹೊಸ ಮಹಿಳೆಯೊಂದಿಗೆ ಮದುವೆಯಾಗಿದ್ದು, ಮರು ಮದುವೆಯಾಗುವುದರ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲ ಎಂದು ಹೇಳಿದ್ದಾನೆ.

Leave A Reply