ಯುಪಿಐ ಪರಿಚಯಿಸಿದೆ ಮತ್ತೊಂದು ಹೊಸ ವೈಶಿಷ್ಟ್ಯ!

ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ ಕೂಡ ಆನ್‌ಲೈನ್‌ ಪಾವತಿಯನ್ನು ಸ್ವೀಕರಿಸುತ್ತಾರೆ. ಡಿಜಿಟಲ್ ಇಂಡಿಯಾದಲ್ಲಿ ಯುನಿಫೈಡ್‌ ಪೇಮೆಂಟ್‌ ಇಂಟರ್ಫೇಸ್(ಯುಪಿಐ) ತಂತ್ರಜ್ಞಾನದ ಹೊಸ ಯುಗ ಪ್ರಾರಂಭವಾಗಿದೆ. ಯುಪಿಐ ಮೂಲಕ ಎಲ್ಲ ರೀತಿಯ ಹಣಕಾಸು ವ್ಯವಹಾರ, ಬ್ಯಾಂಕಿನ ವ್ಯವಹಾರ ತುಂಬಾ ಸುಲಭವಾಗಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ಹಣ ವರ್ಗಾವಣೆ, ಬಿಲ್ ಪಾವತಿ ಮತ್ತು ಸ್ವೀಕೃತಿಯನ್ನು ಇದು ತುಂಬಾ ಸುಲಭಗೊಳಿಸಿದೆ.

ಇಷ್ಟೊಂದು ಸೇವೆಗಳು ಇದ್ದರೂ,ಯುಪಿಐ ಹೊಸ ಹೊಸ ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಗ್ರಾಹಕರಿಗೆ ಹತ್ತಿರವಾಗುತ್ತಲೇ ಇದೆ. ಇದೀಗ ಮತ್ತೆ  ಫೋನ್ ಬಳಕೆದಾರರಿಗಾಗಿ ಯುಪಿಐ ಪಾವತಿಗಳಲ್ಲಿ ಮತ್ತೊಂದು ಅದ್ಭುತ ವೈಶಿಷ್ಟ್ಯವನ್ನ ಪರಿಚಯಿಸಲಾಗಿದೆ. ಬಳಕೆದಾರರು ತಮ್ಮ ಆಯ್ಕೆಯ ಭಾಷೆಯಲ್ಲಿ ಮಾತನಾಡುವ ಮೂಲಕವೂ ಇನ್ನು ಮುಂದೆ ಯುಪಿಐ ಸೇವೆಗಳನ್ನ ಪಡೆಯಬಹುದು.


Ad Widget

Ad Widget

Ad Widget

Ad Widget

Ad Widget

Ad Widget

ಹೌದು. ಟೋನ್ ಟ್ಯಾಗ್ ಎಂಬ ಕಂಪನಿಯು ಹೊಸ ಸೇವೆಯನ್ನ ಪ್ರಾರಂಭಿಸಿದೆ. ಈ ವರ್ಷದ ಆರಂಭದಲ್ಲಿ, ಟೊನೆಟ್ಯಾಗ್ ಕಂಪನಿಯು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕುಗಳ ಸಹಯೋಗದೊಂದಿಗೆ ಯುಪಿಐ 123 ಪೇ ಎಂಬ ಸೇವೆಗಳನ್ನ ಪ್ರಾರಂಭಿಸಿತು. ಈ ಸೇವೆಗಳನ್ನ ಈಗ ಟೋನ್ ಟ್ಯಾಗ್ ಫಸ್ಟ್ ವಾಯ್ಸ್ ಪರಿಹಾರದೊಂದಿಗೆ ಮತ್ತಷ್ಟು ವಿಸ್ತರಿಸಲಾಗುವುದು. ಈ ಹೊಸ ವೈಶಿಷ್ಟ್ಯದೊಂದಿಗೆ, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಂಗಾಳಿಯಂತಹ ಪ್ರಾದೇಶಿಕ ಭಾಷೆಗಳಲ್ಲಿ ಯುಪಿಐ ಪಾವತಿಗಳನ್ನ ಮಾಡಬಹುದು.

ಇದಕ್ಕಾಗಿ, ಬಳಕೆದಾರರು 6366 200 200 200 ಐವಿಆರ್ ಸಂಖ್ಯೆಗೆ ಕರೆ ಮಾಡಬಹುದು ಮತ್ತು ಯುಪಿಐ ಪಾವತಿಗಳನ್ನ ಮಾಡಲು ತಮ್ಮ ಆಯ್ಕೆಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನ ಆಯ್ಕೆ ಮಾಡಬಹುದು. ಆದಾಗ್ಯೂ, ಈ ಸೇವೆಗಳು ಪ್ರಸ್ತುತ ಯುಟಿಲಿಟಿ ಬಿಲ್, ಬ್ಯಾಲೆನ್ಸ್ ವಿಚಾರಣೆ, ಫಾಸ್ಟ್ಯಾಗ್ ಸಕ್ರಿಯಗೊಳಿಸುವಿಕೆ ಅಥವಾ ರೀಚಾರ್ಜ್‌ಗೆ ಮಾತ್ರ ಲಭ್ಯವಿದೆ. ನಂತರ ಈ ಸೇವೆಗಳು ಗುಜರಾತಿ, ಮರಾಠಿ ಮತ್ತು ಪಂಜಾಬಿ ಭಾಷೆಗಳಲ್ಲಿ ಲಭ್ಯವಿರುತ್ತವೆ.

error: Content is protected !!
Scroll to Top
%d bloggers like this: