ಉಡುಪಿ:ಮಗನನ್ನು ಶಾಲೆಗೆ ಸೇರಿಸುವ ತಂದೆಯ ಖುಷಿ ನಿಮಿಷರ್ದಾದಲ್ಲೇ ಚೂರು!!ಅಪರಿಚಿತ ವಾಹನ ಡಿಕ್ಕಿಯಾಗಿ ತಂದೆ ಸಾವು-ಮಗ ಗಂಭೀರ!!

ಉಡುಪಿ:ರಸ್ತೆ ಬದಿ ನಿಂತಿದ್ದ ತಂದೆ ಮಗನಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ತಂದೆ ಸ್ಥಳದಲ್ಲೇ ಮೃತಪಟ್ಟು, ಮಗ ಗಂಭೀರ ಗಾಯಗೊಂಡ ಘಟನೆಯೊಂದು ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ ರಾಷ್ಟೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಪ್ರಭಾಕರ್ ಎಂದು ಗುರುತಿಸಲಾಗಿದ್ದು, ಗಾಯಾಳು ಬಾಲಕನನ್ನು ಪ್ರಭಾಕರ್ ಪುತ್ರ ಸಮರ್ಥ್(14) ಎಂದು ಗುರುತಿಸಲಾಗಿದೆ.

ಘಟನಾ ವಿವರ:ಮೃತ ಪ್ರಭಾಕರ್ ಕಾಪು ಸಮೀಪದ ಕುತ್ಯಾರು ಎಂಬಲ್ಲಿನ ಶಾಲೆಯೊಂದಕ್ಕೆ ಮಗ ಸಮರ್ಥ್ ನನ್ನು ದಾಖಲಾತಿ ಮಾಡಲೆಂದು ಬರುತ್ತಿದ್ದರು ಎನ್ನಲಾಗಿದ್ದು, ಮಗ ಸಮರ್ಥ್ ಖುಷಿಯಿಂದಲೇ ತಂದೆಯೊಂದಿಗೆ ಹೆಜ್ಜೆ ಹಾಕುತ್ತ ಮನೆಯಿಂದ ಹೊರಟು ಬಂದಿದ್ದ.

ಬಳಿಕ ಉಚ್ಚಿಲದಲ್ಲಿ ಬಸ್ಸಿನಿಂದ ಉಳಿದ ತಂದೆ ಮಗ, ರಸ್ತೆ ಬದಿ ನಿಂತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ತಂದೆ ಪ್ರಭಾಕರ್ ಸ್ಥಳದಲ್ಲೇ ಅಸುನೀಗಿದ್ದಾರೆ.ಬಾಲಕ ಸಮರ್ಥ್ ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಬಳಿಕ ವಾಹನ ನಿಲ್ಲಿಸದೆ ಪರಾರಿಯಾದ ಚಾಲಕ ಸಹಿತ ವಾಹನ ವಶಕ್ಕೆ ಪಡೆಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.