ರೈಲಿನಲ್ಲಿ ದಿಢೀರನೆ ಹೆರಿಗೆ ನೋವು | ಸ್ಥಳದಲ್ಲೇ ಇದ್ದ ವೈದ್ಯಕೀಯ ವಿದ್ಯಾರ್ಥಿನಿಯಿಂದ ಸುಲಲಿತ ಹೆರಿಗೆ – ತಾಯಿ ಮಗು ಕ್ಷೇಮ

ರೈಲು ಪ್ರಯಾಣವನ್ನೂ ಇಷ್ಟಪಡದವರು ವಿರಳ. ಗರ್ಭಿಣಿಯರು ಸಾಮಾನ್ಯವಾಗಿ ಪ್ರೆಗ್ನೆಂಟ್ ಸಮಯದಲ್ಲಿ ವಾಹನಗಳಲ್ಲಿ ಜಾಸ್ತಿ ಸಂಚರಿಸಬಾರದು ಎಂದು ವೈದ್ಯರು ಸಲಹೆ ನೀಡುವುದು ಹೆಚ್ಚಿನವರಿಗೆ ತಿಳಿದಿರುತ್ತದೆ. ವಾಹನಗಳಲ್ಲಿ ಸಂಚರಿಸುವಾಗ ಏನಾದರೂ ಹೆರಿಗೆ ನೋವು ಕಾಣಿಸಿಕೊಂಡರೆ ಆಂಬುಲೆನ್ಸ್ ಮೂಲಕ ಕೂಡಲೇ ಆಸ್ಪತ್ರೆ ಸೇರಿಸಬಹುದು.

ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡರೆ ಬದಲಿ ವ್ಯವಸ್ಥೆ ಮಾಡಲು ಬಹಳ ಕಷ್ಟ. ರೈಲಿನಲ್ಲಿ ವೈದ್ಯರು ಇಲ್ಲವೇ ಹೆರಿಗೆ ಮಾಡಲು ನುರಿತವರು ಇದ್ದರೆ ಸಮಸ್ಯೆ ಇಲ್ಲ. ಇಲ್ಲದೇ ಹೋದರೆ,ತಾಯಿ – ಮಗುವಿನ ಜೀವಕ್ಕೆ ಅಪಾಯ ವಾಗುವ ಸಾಧ್ಯತೆ ಇದೆ.

ಆಂಧ್ರಪ್ರದೇಶದ ಸಿಕಂದರಾಬಾದ್ ದುರಂತೋ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಶ್ರೀಕಾಕುಳಂ ಮೂಲದ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಗಮಿನಿಸಿದ ಅದೇ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ತಕ್ಷಣ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಹೆರಿಗೆಯ ಬಳಿಕ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು, ಗರ್ಭಿಣಿ ಮಹಿಳೆಯ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಯಾಣದ ವೇಳೆ ತಾಯಿ – ಮಗು ಇಬ್ಬರನ್ನೂ ರಕ್ಷಿಸಿದ ವಿದ್ಯಾರ್ಥಿನಿಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

Leave A Reply

Your email address will not be published.