Healthy food : ನಿಮಗೆ ಈ ರೋಗ ಇದೆಯಾ ? ಹಾಗಿದ್ದರೆ ಟೊಮೆಟೊದಿಂದ ದೂರ ಇರಿ

ಬದಲಾಗುತ್ತಿರುವ ಕಾಲಮಾನದಲ್ಲಿ ಎಲ್ಲರೂ ಫಾಸ್ಟ್ ಫುಡ್ ಗೆ ಒಗ್ಗಿಕೊಂಡಿರುವಾಗ, ಆಹಾರ ಕ್ರಮದಲ್ಲಿ ಬದಲಾವಣೆಯಾಗಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಆಹಾರಕ್ರಮದ ಬಗ್ಗೆ ಗಮನ ಹರಿಸುವುದು ಅವಶ್ಯಕವಾಗಿದೆ.
ಟೊಮೆಟೊ ಬಹುಪಯೋಗಿ ತರಕಾರಿಯಾಗಿದ್ದು, ಆಹಾರ ಪದಾರ್ಥಗಳಲ್ಲಿ ಹೆಚ್ಚು ಬಳಸಲ್ಪಡುವ ತರಕಾರಿ ಎಂದರೂ ತಪ್ಪಾಗಲಾರದು. ಸಾಸ್, ಕೆಚಪ್, ಸೂಪ್, ಸಾಂಬಾರ್ ಸೇರಿದಂತೆ ಚ್ಯಾಟ್ಸ್ ನಲ್ಲಿಯೂ ತನ್ನ ಪಾರುಪತ್ಯ ಕಾಯ್ದುಕೊಳ್ಳುವ ಟೊಮೆಟೊ ಆಹಾರಕ್ಕೆ ವಿಶೇಷ ರುಚಿ ನೀಡುತ್ತದೆ.

ಟೊಮ್ಯಾಟೋ ತ್ವಚೆಯ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ. ಟೊಮೆಟೊ ವಿಟಮಿನ್ ಸಿ, ಲೈಕೋಪೀನ್, ವಿಟಮಿನ್ ಕೆ, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಟೊಮೆಟೊ ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ. ಟೊಮೇಟೊವನ್ನು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಬಳಸುತ್ತಾರೆ.
ಟೊಮೆಟೊಗಳು 95% ನೀರಿನಿಂದ ಕೂಡಿರುತ್ತವೆ ! ಬೇಸಿಗೆಯ ದಾಹ ತಣಿಸಲು ನೆರವಾಗುವುದಲ್ಲದೆ, ಟೊಮೆಟೊ ಬೀಜಗಳಲ್ಲಿ ಲಿಕೊಪೇನ್ ಮತ್ತು ಕ್ಲೋರೊಜೆನಿಕ್ ಆಸಿಡ್ ರಕ್ತದೊತ್ತಡದ ಮಟ್ಟವನ್ನು ಕಡಿಮೆಗೊಳಿಸಿ, ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತವೆ.
ಟೊಮ್ಯಾಟೋಸ್ ಕ್ರೋಮಿಯಂ ಎಂಬ ಖನಿಜವನ್ನು ಹೊಂದಿದ್ದು, ಕ್ರೋಮಿಯಂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕೆಲಸ ಮಾಡುತ್ತದೆ.

ಟೊಮೆಟೊವನ್ನು ಸೇವಿಸುವಾಗ ಸರಿಯಾದ ಪ್ರಮಾಣದಲ್ಲಿ ಇತಿಮಿತಿಯಲ್ಲಿ ಆಹಾರ ಕ್ರಮದಲ್ಲಿ ಅಳವಡಿಸದೇ ಹೋದರೆ, ಬೇರೆ ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ. ಟೊಮೊಟೊದಿಂದ ಏಷ್ಟು ಪ್ರಯೋಜನಗಳಿವೆಯೋ ಅಷ್ಟೇ ಅದರ ಅತಿಯಾದ ಸೇವನೆ ಕೂಡ ಆರೋಗ್ಯಕ್ಕೆ ತೊಂದರೆ ಮಾಡುವುದರಲ್ಲಿ ಸಂಶಯವಿಲ್ಲ.

ಟೊಮೆಟೊ ಹಣ್ಣುಗಳು ಹುಳಿ ಮತ್ತು ಸಿಹಿಯ ಮಿಶ್ರಣ ಹೊಂದಿದ್ದು, ‘ ಮ್ಯಾಲಿಕ್ ಆಸಿಡ್ ‘ ಮತ್ತು ‘ ಸಿಟ್ರಿಕ್ ಆಸಿಡ್ ‘ ಎಂಬ ಎರಡು ಆಮ್ಲೀಯ ಅಂಶಗಳು ಇದ್ದು, ಇವುಗಳು ನಮ್ಮ ಹೊಟ್ಟೆಯಲ್ಲಿ ವಿಪರೀತ ಗ್ಯಾಸ್ಟಿಕ್ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ದಟ್ಟವಾಗಿದೆ.

ಟೊಮೆಟೊದಲ್ಲಿ ‘ ಹಿಸ್ಟಮೈನ್ ‘ ಎಂಬ ಅಂಶ ಹೆಚ್ಚಾಗಿರುವ ಕಾರಣ ಇದು ಚರ್ಮದ ಮೇಲೆ ಅಲರ್ಜಿ ಮತ್ತು ಕಲೆಗಳನ್ನು ಉಂಟು ಮಾಡುತ್ತದೆ. ಟೊಮೆಟೋ ಹಣ್ಣುಗಳಿಗೆ ಅಲರ್ಜಿ ಎನ್ನುವವರು ಇವುಗಳ ಸೇವನೆಯಿಂದ ದೂರ ಉಳಿದರೆ ಒಳ್ಳೆಯದು.
ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವ ಸಂಭವ ಹೆಚ್ಚಾಗಿದೆ.

ವಾಸ್ತವವಾಗಿ, ಟೊಮೆಟೊದಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಸಮೃದ್ಧವಾಗಿದ್ದು, ದೇಹದಲ್ಲಿ ದೊಡ್ಡ ಪ್ರಮಾಣದಲ್ಲಿರುತ್ತದೆ. ಅವುಗಳಿಂದ ಚಯಾಪಚಯ ಪ್ರಕ್ರಿಯೆ ಗೆ ತೊಡಕು ಉಂಟಾಗುತ್ತದೆ. ಅಥವಾ ದೇಹದಿಂದ ಹೊರತೆಗೆಯಲಾಗುವುದಿಲ್ಲ. ಈ ಅಂಶಗಳು ದೇಹದಲ್ಲಿ ಸಂಗ್ರಹಗೊಳ್ಳಲು ಆರಂಭಿಸಿದಾಗ ಕಿಡ್ನಿಯಲ್ಲಿ ಸ್ಟೋನ್ ರೂಪುಗೊಳ್ಳುತ್ತದೆ.

ಟೊಮೆಟೊವನ್ನು ಹೆಚ್ಚು ಸೇವಿಸುವುದರಿಂದ ಕೀಲುಗಳ ಊತ ಮತ್ತು ನೋವು ಉಂಟಾಗುತ್ತದೆ. ಅದರಲ್ಲಿ ಸೋಲೆನಿನ್ ಎಂಬ ಕ್ಷಾರ ಕಂಡುಬರುತ್ತದೆ. ಈ ಸಂಯುಕ್ತವು ಅಂಗಾಂಶಗಳಲ್ಲಿ ಕ್ಯಾಲ್ಸಿಯಂ ಅನ್ನು ಉತ್ಪಾದಿಸುತ್ತದೆ, ಇದು ಕೀಲು ನೋವು ಮತ್ತು ಊತಕ್ಕೆ ಕಾರಣವಾಗುತ್ತದೆ.

ಟೊಮೆಟೊ ಹಣ್ಣುಗಳಲ್ಲಿ ‘ ಸಾಲ್ಮೋನೆಲ್ಲಾ ‘ ಎಂಬ ಬ್ಯಾಕ್ಟೀರಿಯ ಇರುವ ಕಾರಣ ಇದು ಮನುಷ್ಯರಲ್ಲಿ ಅತಿಸಾರ, ಆಮಶಂಕೆ ಮತ್ತು ಬೇಧಿಯ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಇದೆ. ಕೆಲವರಿಗೆ ಟೊಮೆಟೋ ಹಣ್ಣು ತಿಂದರೆ ಅಲರ್ಜಿ ಸಮಸ್ಯೆ ಕೂಡ ಆಗಬಹುದು.

ಟೊಮೆಟೊ ಸೇವನೆಯಿಂದಾಗುವ ಲಾಭಗಳು :
ಟೊಮೆಟೊದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಇದಲ್ಲದೆ ಆಂಟಿಆಕ್ಸಿಡೆಂಟ್ಗಳು, ಬೀಟಾ-ಕ್ಯಾರೋಟಿನ್ ಅಂಶವಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೆಗಡಿ, ಶೀತದಂತಹ ಸಮಸ್ಯೆಯಿರುವವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸವನ್ನು ಟೊಮೆಟೊ ಮಾಡುತ್ತದೆ.
ಮುಖದ ಟ್ಯಾನಿಂಗ್ ತೆಗೆದುಹಾಕಲು ಕೆಂಪು ಟೊಮ್ಯಾಟೊ ಬಳಸಬಹುದು. ಕೆಂಪು ಟೊಮೆಟೊದಲ್ಲಿ ಉತ್ಕರ್ಷಣ ನಿರೋಧಕಗಳು ಇರುವುದು ಕಂಡುಬರುತ್ತದೆ, ಇದು ಚರ್ಮವನ್ನು ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವ ನಾರನ್ನು ಹೊಂದಿರುತ್ತವೆ. ಇದರಲ್ಲಿರುವ ಪೊಟ್ಯಾಶಿಯಂ ಯಾವುದೇ ಹೃದಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.ಟೊಮೆಟೊದಲ್ಲಿ ಫೈಬರ್ ಅಂಶವಿದೆ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಟೊಮೆಟೊವನ್ನು ಸೂಪ್, ಜ್ಯೂಸ್ ಅಥವಾ ಸಲಾಡ್ ರೂಪದಲ್ಲಿ ಸೇವನೆ ಮಾಡುವುದರಿಂದ ತೂಕ ಇಳಿಯುತ್ತದೆ.

ಟೊಮೆಟೊದಲ್ಲಿರುವ ವಿಟಮಿನ್ ಸಿ ಅಂಶ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ರಕ್ತದ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಹೃದಯ ಕಾಯಿಲೆಯಿಂದಾಗಿ ಅನೇಕ ಸಾವುಗಳು ಸಂಭವಿಸಿರುವ ವರದಿಗಳಿವೆ. ಟೊಮೆಟೊ ಈ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
ನಾವು ಸೇವಿಸುವ ಆಹಾರದಲ್ಲಿ ಕ್ರಮ ಪ್ರಕಾರ ಸೇವನೆ ಮಾಡಿ ಇತಿ ಮಿತಿಯಲ್ಲಿ ಸೇವಿಸಿದರೆ ಅನೇಕ ರೋಗಗಳನ್ನು ಬಾರದಂತೆ ಎಚ್ಚರಿಕೆ ವಹಿಸಬಹುದು.

Leave A Reply

Your email address will not be published.