ಚಾಕೊಲೇಟ್ ಎಂದು ‘ಇಲಿ ಪಾಶಾಣ’ ತಿಂದ ಬಾಲಕಿ | ದಾರುಣ ಸಾವು

ಮಕ್ಕಳ ವಿಷಯದಲ್ಲಿ ಪೋಷಕರು ಎಷ್ಟು ಎಚ್ಚರ ವಹಿಸಿದರೂ ಸಾಲದು. ಮಕ್ಕಳನ್ನು ಆಟ ಆಡಲು ಬಿಟ್ಟು ಪೋಷಕರು ತಮ್ಮ ಕೆಲಸದಲ್ಲಿ ತೊಡಗಿರುವಾಗ ಮಕ್ಕಳು ಅರಿವಿಲ್ಲದೆ ಕೆಲವೊಂದು ಅನಾಹುತಕ್ಕೆ ತುತ್ತಾಗುವ ಸಂಭವವಿದೆ. ಕಾಯಿನ್ ಅನ್ನು ಆಟ ಆಡುತ್ತಾ ಬಾಯಿಗೆ ಹಾಕಿಕೊಂಡು ಒದ್ದಾಡುವ, ಬೆಂಕಿಯ ಸಮೀಪ ಓಡಾಡುವ ಅನೇಕ ಪ್ರಸಂಗಗಳನ್ನು ಕೇಳಿರಬಹುದು.

ಯಾವುದೇ ಕಾರಣಕ್ಕೂ ವಿಷಯುಕ್ತ ವಸ್ತುಗಳನ್ನು ಮಕ್ಕಳ ಎದುರಿನಲ್ಲಿ ಇಡಬೇಡಿ. ಮಕ್ಕಳು ಮುಗ್ಧತೆಯಿಂದ ವಿಷಕಾರಿ ವಸ್ತು ಎಂಬುದನ್ನು ಅರಿಯದೆ ಸಿಕ್ಕಿದನ್ನು ಬಾಯಿಗೆ ಹಾಕಿ ಎಡವಟ್ಟು ಮಾಡಿಕೊಳ್ಳುವುದು ಸಹಜ. ಹಾಗಾಗಿ ಪ್ರತಿ ಪೋಷಕರು ಮನೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಗಮನ ವಹಿಸುವ ಅವಶ್ಯಕತೆಯಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಎಲ್ಲರ ಬಾಯಲ್ಲೂ ನೀರೂರಿಸುವ ಚಾಕೋಲೇಟ್ ಎಂದರೆ ಚಿಕ್ಕವರಿಗಂತು ಅತಿ ಪ್ರಿಯಕರ ಸಾಧನ.
ಪುದುಚೇರಿಯಲ್ಲಿ ಚಾಕೋಲೇಟ್ ಕೇಕ್ ಎಂದು ಭಾವಿಸಿ ‘ಇಲಿ ಪಾಶಾಣ ʼ ತಿಂದು ಬಾಲಕಿ ಮೃತ ಪಟ್ಟಿರುವ ಘಟನೆಯೊಂದು ನಡೆದಿದೆ.

ಮನೆಯಲ್ಲಿ ಇಲಿಗಳ ಕಾಟ ತಾಳಲಾರದೆ ಇಲಿ ಓಡಿಸಲು ಇಲಿ ಪಾಷಾಣವನ್ನು ಮನೆಯ ಕಿಟಕಿಯಲ್ಲಿ ಇರಿಸಿದ್ದು,ಆ ಇಲಿ ಪಾಷಾಣವನ್ನು ಮಗಳು ಚಾಕೋಲೇಟ್ ಕೇಕ್ ಎಂದು ಸೇವಿಸಿದ್ದಾಳೆ. ಇದನ್ನು ಸೇವಿಸಿದ ಬಳಿಕ ಬಾಲಕಿ ವಾಂತಿ ಮಾಡಿಕೊಳ್ಳುವುದನ್ನು ಗಮನಿಸಿ ತಾಯಿ, ನೋಡಿದಾಗ ಕಿಟಕಿಯ ಬಳಿಯಿದ್ದ ಪಾಶಣವನ್ನು ತಿಂದಿರುವುದು ಅರಿವಿಗೆ ಬಂದು, ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿಯೂ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರೈಕಲ್‌ನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.

ಈ ಬಗ್ಗೆ ಸೆಕ್ಷನ್ 174ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೋಷಕರೇ, ವಿಷಕಾರಿ ವಸ್ತುಗಳನ್ನು ಮಕ್ಕಳ ಎದುರು ಇಡದೆ ಆದಷ್ಟು ಎತ್ತರದ ಸ್ಥಳದಲ್ಲಿ ಮಕ್ಕಳ ಕೈ ಗೆ ಸಿಗದಂತೆ ಎಚ್ಚರ ವಹಿಸುವುದು ಅವಶ್ಯ. ಇಲ್ಲದೇ ಹೋದರೆ ನಮ್ಮ ಉದಾಸೀನದ ನಡೆಯಿಂದ ಜೀವಕ್ಕೆ ಕುತ್ತು ಬಂದರೂ ಅಚ್ಚರಿಯಿಲ್ಲ.

error: Content is protected !!
Scroll to Top
%d bloggers like this: