ಡ್ರೈವಿಂಗ್ ಮಾಡುವಾಗ ನಿದ್ದೆ ಬರುತ್ತಿದ್ದರೆ ನಿಮ್ಮನ್ನು ಎಚ್ಚರಿಸಲೆಂದೇ ಮಾರುಕಟ್ಟೆಗೆ ಬಂದಿದೆ ಈ ಸಾಧನ !!!

ನಿದ್ದೆ ಮನುಷ್ಯನಿಗೆ ಬಹಳ ಮುಖ್ಯವಾದದ್ದು. ನಿದ್ದೆ ಮನೆಯಲ್ಲಿ ಮಾಡಿದರೆನೇ ಚೆನ್ನ. ಆದರೆ ಟ್ರಾವೆಲ್ ಮಾಡುವಾಗ ನಿದ್ದೆ ಬಂದರೆ, ಅದರಲ್ಲೂ, ವಾಹನ ಚಾಲನೆ ಮಾಡುವಾಗ ನಿದ್ದೆ ಬಂದರೆ ಏನು ಮಾಡೋಣ…ಡ್ರೈವ್ ಮಾಡುವಾಗ ಸ್ವಲ್ಪ ತೂಕಡಿಸಿದರೂ ಆಗುವ ಅನಾಹುತ ಅಷ್ಟಿಷ್ಟಲ್ಲ.

ಅಷ್ಟು ಮಾತ್ರವಲ್ಲದೇ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಆಗುತ್ತಿದೆ. ಇದಕ್ಕೆ ಅವಸರದಲ್ಲಿ ವಾಹನ ಚಾಲನೆ ಮಾಡುವುದು ಕೂಡ ಒಂದು ಕಾರಣವಾಗಿರುತ್ತದೆ.

ರಾತ್ರಿ ಹೊತ್ತಿನಲ್ಲಿ ಕಾರು ಚಲಾಯಿಸುವಾಗ ತೊಂದರೆ ಯಾಗದಂತೆ ಡ್ರೈವ್ ಮಾಡಲು ಅಲರಾಂ ರೆಡಿಯಾಗಿದೆ. ಹೌದು, ಗೌರವ್ ಸಾವಲಾಖೆಯವರು ಆಂಟಿ ಸ್ಲೀಪ್ ಅಲಾರಂ ಸಿಸ್ಟಮ್ ಒಂದನ್ನು ಕಂಡುಹಿಡಿದಿದ್ದಾರೆ.
ಕಾರು ಚಲಾಯಿಸುವಾಗ ನಿದ್ದೆ ಬರುವಂತಿದ್ದರೆ, ಆಂಟಿ ಸ್ಲೀಪ್ ಉಪಕರಣ ಬಹಳ ಉಪಕಾರಿಯಾಗಿದ್ದು, ಈ ಸಾಧನವು ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕನು ನಿದ್ದೆ ಮಾಡುವಾಗ ಎಚ್ಚರಿಸುವಲ್ಲಿ ಸಹಾಯ ಮಾಡುತ್ತದೆ.

ಈ ಡಿವೈಸ್ ಅನ್ನು ಚಾಲಕರು ಕಿವಿಯ ಮೇಲೆ ಧರಿಸಬೇಕು, ಇದು ನಿದ್ದೆ ಮಾಡುವಾಗ ಚಾಲಕನನ್ನು ಎಚ್ಚರವಾಗಿರಿಸುತ್ತದೆ.

ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನವು ದಣಿದ ತಕ್ಷಣ ಅದನ್ನು ಧರಿಸುವವರಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನಿರ್ದಿಷ್ಟ ಕೋನದಲ್ಲಿ, ತಲೆ ಓರೆಯಾದ ತಕ್ಷಣ ಈ ಸಾಧನವು ಚಾಲಕರನ್ನು ಎಚ್ಚರಗೊಳಿಸುತ್ತದೆ. ಹಾಗೆಯೇ ಇದು ಸ್ವಿಚ್ ಆಫ್ ಮಾಡಲು ಬಟನ್ ಕೂಡಾ ಇದೆ. ತಮ್ಮ ಸ್ವಂತ ಅನುಭವದಿಂದ ವಾಹನ ಚಾಲನೆ ಮಾಡುವಾಗ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ಆವಿಷ್ಕಾರಕ್ಕೆ ಗೌರವ್ ಸಾವಲಾಖೆ ತೊಡಗಿದ್ದು ವಿಶೇಷ.

ತಮ್ಮ ಹೊಸ ಹೊಸ ಪ್ರಯೋಗಗಳ ಮೂಲಕ ಹೆಸರು ಪಡೆದಿರುವ ಗೌರವ್ ರವರು 2017ರಲ್ಲಿ ಅವರ ಮೊಬೈಲ್ ನಲ್ಲಿ ಬಳಸುವ ರೇಡಿಯೇಷನ್ ಕಟರ್ ಚಿಪ್ ಅನ್ವೇಷಣೆಗೆ ದೇವೇಂದ್ರ ಫಡ್ನವೀಸ್ ಅವರಿಂದಲೂ ಕೂಡ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಈ ಸಾಧನದ ಮೂಲಕ ವಾಹನಗಳಲ್ಲಿ ನಿದ್ದೆ ಹೋದಾಗ ಆಗುವ ಅವಾಂತರ ತಡೆಯಲು ನೆರವಾಗುವುದಲ್ಲದೆ ಅಪಾಯಗಳು ಸಂಭವಿಸದಂತೆ ತಡೆಯಬಹುದು. ಈ ಡಿವೈಸ್‌ನ ಬೆಲೆ ಕೇವಲ 499 ರೂ. ಅಷ್ಟೇ. ಈ ಸಾಧನವನ್ನು ಅಮೆಜಾನ್ ಮತ್ತು ಫಿಫ್ ಕಾರ್ಟ್ ತಾಣಗಳಲ್ಲಿ ಕಾಣಬಹುದು. ಜನಪ್ರಿಯ ಇ-ಕಾರ್ಟ್ ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಖರೀದಿಗೆ ಲಭ್ಯವಿದೆ.

Leave A Reply