Veg ಊಟದಲ್ಲಿ ‘ಇಲಿ ತಲೆ’ | ಹೋಟೆಲ್ ಉಡಾಫೆ ಉತ್ತರ, ದೂರು ದಾಖಲು

ನೀವೇನಾದ್ರೂ ವೆಜಿಟೇರಿಯನ್ ಆಗಿದ್ದು, ಹೊಟೇಲ್‌ನಿಂದ ತಂದ ವೆಜ್ ಊಟದಲ್ಲಿ ನಿಮಗೆ ಇಲಿಯ ತಲೆ ಸಿಕ್ಕಿದ್ರೆ, ಹೇಗನ್ನಿಸುತ್ತೆ..? ವ್ಯಾಕ್. ಇದೇ ರೀತಿಯ ಘಟನೆಯೊಂದು ನಡೆದಿದೆ.

ಸಸ್ಯಾಹಾರಿಗಳು ಹೋಟೆಲ್ ನಿಂದ ಪಾರ್ಸೆಲ್ ತರುವಾಗ ಹೋಟೆಲ್ ವೆಜಿಟೇರಿಯನ್ ಎಂಬುದನ್ನು ಖಚಿತ ಪಡಿಸಿಕೊಂಡು ಆಹಾರ ತರುವುದು ವಾಡಿಕೆ. ಆದರೆ ಪಾರ್ಸೆಲ್ ತಂದ ಆಹಾರದಲ್ಲಿ ಇಲಿಯ ತಲೆ ಸಿಕ್ಕರೆ, ತಿಂದದ್ದೆಲ್ಲ ವಾಪಸ್ ಹೊರಬರುವುದು ಗ್ಯಾರಂಟಿ. ಮತ್ತೆ ಅವರು ಹೋಟೆಲ್ ನ ಸಹವಾಸಕ್ಕೆ ಹೋಗದಿರುವುದು ಖಚಿತ ಎಂದು ಅಂದ್ಕೋತ್ತಾರೆ.

ತಮಿಳುನಾಡಿನ ತಿರುವನ್ನಾಮಲೇನ, ಅರ್ನಿ ಎಂಬ ಊರಿನ ವೆಜ್ ಹೊಟೇಲ್‌ನಲ್ಲಿ ಈ ರೀತಿಯ ಘಟನೆಯೊಂದು ಜರುಗಿದೆ. ಮುರುಳಿ ಎಂಬ ವ್ಯಕ್ತಿ ತಮ್ಮ ಮನೆಯ ಕಾರ್ಯಕ್ರಮಕ್ಕಾಗಿ ಬಾಲಾಜಿ ಭವನ್ ಎಂಬ ಹೊಟೇಲ್‌ ನಿಂದ 30 ಮಂದಿಗೆ ಆಗುವಷ್ಟು ಊಟ ಆರ್ಡರ್ ಮಾಡಿದ್ದಾರೆ. ವೆಜ್ ಥಾಲಿ ಪಾರ್ಸೆಲ್ ಕೊಂಡೊಯ್ದು ಕಾರ್ಯಕ್ರಮದಲ್ಲಿ ಒಬ್ಬರಿಗೆ ಬಡಿಸಿದ್ದರಲ್ಲಿ, ಬೀಟ್ ರೂಟ್ ಪಲ್ಯದಲ್ಲಿ ಇಲಿಯ ತಲೆ ಬುರುಡೆ ಸಿಕ್ಕಿದೆ. ಇದನ್ನು ಕಂಡು ಮನೆಯವರೆಲ್ಲ ಶಾಕ್ ಆಗಿದ್ದು, ಎಲ್ಲರೂ ವಾಂತಿ ಮಾಡುವುದೊಂದೇ ಬಾಕಿ.

ಕೊನೆಗೆ ಮುರುಳಿ ಅವರು ತಂದಿದ್ದ ಪಾರ್ಸೆಲನ್ನು ಮರಳಿ ಅದೇ ಹೊಟೇಲಿಗೆ ತಂದು, ಓನರ್ ಬಳಿ ವಿಚಾರಿಸಿದಾಗ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗೂ ಊಟ ಪಾರ್ಸೆಲ್ ಕೊಟ್ಟು 6 ಗಂಟೆ ಕಳೆದಿದೆ. ಹಾಗಾಗಿ ದೂರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಪ್ಪನ್ನು ಒಪ್ಪಿಕೊಳ್ಳದೆ, ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ.

ಹೀಗಾಗಿ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಮುರುಳಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ ನಂತರ, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೊಟೇಲ್‌ಗೆ ಬಂದು ಪರಿಶೀಲಿಸಿದಾಗ ಸ್ವಚತೆಯ ಕೊರತೆ ಎದ್ದು ಕಾಣುತ್ತಿತ್ತು. ಈ ಹೊಟೇಲ್‌ನಲ್ಲಿ ಬಳಸುವ ರಾ ಮೆಟಿರಿಯಲ್‌ಗಳ ಸ್ಯಾಪಂಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಅಲ್ಲದೇ ಹೋಟೆಲ್ ನಲ್ಲಿ ಅಲ್ಲಲ್ಲಿ ಹೋಲ್‌ಗಳಿರುವುದರಿಂದ ಇಲಿಗಳು ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹೋಟೆಲ್ ಗಳಲ್ಲಿ ಸ್ವಚ್ಛತೆ ಹಾಗೂ ಆಹಾರ ಪದಾರ್ಥಗಳ ಗುಣಮಟ್ಟ ಉತ್ತಮವಾಗಿದ್ದರೆ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ ಎನ್ನುವುದು ಎಲ್ಲರಿಗೂ ಮನದಟ್ಟಾಗಬೇಕು.

Leave A Reply

Your email address will not be published.