ಸರಕಾರಿ ಹಾಸ್ಟೆಲ್ ಟಾಯ್ಲೆಟ್ ನ ಕಿಟಕಿ ಮುರಿದು ಆರು ಅಪ್ರಾಪ್ತ ಬಾಲಕಿಯರು ಎಸ್ಕೇಪ್!

ಸರಕಾರಿ ಹಾಸ್ಟೆಲ್ ಟಾಯ್ಲೆಟ್ ನ ಗ್ರಿಲ್ ಮುರಿದು ಕಿಟಕಿ ಮೂಲಕ ಆರು ಬಾಲಕಿಯರು ಪರಾರಿಯಾಗಿರುವಂತಹ ಶಾಕಿಂಗ್ ನ್ಯೂಸ್ ವರದಿಯಾಗಿದೆ.


Ad Widget

Ad Widget

ಮುಂಬೈ ಗೋವಂದಿಯಲಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯರು ಬೆಳಗಿನ ಜಾವ 3-4 ರ ಮಧ್ಯೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಎಸ್ಕೇಪ್ ಆಗುವುದಕ್ಕೂ ಮುನ್ನ ಬಾಲಕಿಯರು ಹಾಸ್ಟೆಲ್ ಕಾನ್ ಸ್ಟೇಬಲ್ ರೂಂ ಅನ್ನು ಲಾಕ್ ಮಾಡಿ ಹೋಗಿರುವ ಮಾಹಿತಿ ಲಭ್ಯವಾಗಿದೆ.


Ad Widget

ಆರು ಬಾಲಕಿಯರು ಅಪ್ರಾಪ್ತರಾಗಿದ್ದು, ಸ್ಥಳೀಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.ಆದರೆ ಬಾಲಕಿಯರು ಈ ರೀತಿ ಹಾಸ್ಟೆಲ್ ನಿಂದ ಪರಾರಿಯಾಗಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಈ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆದರೆ, ಬಾಲಕಿಯರಿಗೆ ಪರಾರಿಯಾಗಲು ಯಾರೋ ಸಹಾಯ ಮಾಡಿರುವ ಶಂಕೆ ಇದ್ದು, ಈ ಕುರಿತು ಅಪರಿಚಿತ ವ್ಯಕ್ತಿಗಳ‌ ಮೇಲೆ ಕೇಸ್ ದಾಖಲಾಗಿದೆ. ಅಷ್ಟಕ್ಕೂ ವಿದ್ಯಾರ್ಥಿನಿಯರು ಹೋಗಿದ್ದೆಲ್ಲಿಗೆ ಎಂಬ ನೂರಾರು ಪ್ರಶ್ನೆಗಳಿಗೆ ತನಿಖೆಯೇ ಉತ್ತರ ನೀಡಬೇಕಿದೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: