ನಶೆಯಲ್ಲಿ ತೇಲಾಡುತ್ತಾ ಹಿಂದಕ್ಕೆ ಮುಂದಕ್ಕೆ ವಾಲುತ್ತಿರುವ ಯುವತಿ-ವೀಡಿಯೊ ವೈರಲ್

ಮಾದಕ ವ್ಯಸನಕ್ಕೆ ಬರೀ ಗಂಡು ಮಕ್ಕಳೇ ದಾಸರಾಗುತ್ತಾರೆ ಎಂದು ನೀವು ಅಂದುಕೊಂಡರೆ ಅದು ಶುದ್ಧ ಸುಳ್ಳು. ಯಾಕೆಂದರೆ, ಹುಡುಗರಿಕ್ಕಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಪೈಪೋಟಿ ಕೊಡುತ್ತಿದ್ದಾರೆ ಯಂಗ್ ಲೇಡಿಸ್. ಹೌದು. ಇಂದು ಪ್ರತಿಯೊಂದು ಕೆಲಸವೂ ಹುಡುಗರಂತೆ ಹುಡುಗಿಯೂ ಮಾಡಬಲ್ಲಳು ಎಂಬುದಕ್ಕೆ ಮತ್ತೊಂದು ಉದಾಹರಣೆ ಇದೇ ಎಂದು ಹೇಳಬೇಕಷ್ಟೆ.

ಯಾಕೆಂದರೆ ಇಲ್ಲೊಂದು ಯುವತಿಯನ್ನು ನೋಡಿದಾಗ ನಾವು ಹೇಳಿದ್ದು ‘ಹೌದು’ ಎಂದೆನಿಸಬಹುದು. ಪಂಜಾಬ್‌ನ ಅಮೃತಸರದಲ್ಲಿ ಯುವತಿಯೊಬ್ಬಳು ಡ್ರಗ್ಸ್‌ ಸೇವಿಸಿ ನಡೆಯಲಾಗದೆ ಪರದಾಡುವ ವೀಡಿಯೊ ವೈರಲ್ ಆಗಿದೆ.

ಅಮೃತಸರ ಪೂರ್ವ ಕ್ಷೇತ್ರದ ಮಕ್ಬೂಲ್‌ಪುರ ಪ್ರದೇಶದಲ್ಲಿ ಸೆರೆಹಿಡಿಯಲಾದ ವಿಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯ ಮೇಲೆ ನಿಂತಿದ್ದು, ಹಿಂದಕ್ಕೂ ಹೋಗಲಾರದೇ ಮುಂದಕ್ಕೂ ಹೋಗಲಾರದೇ ಪರದಾಡುತ್ತಿದ್ದಾಳೆ. ಮಹಿಳೆಯನ್ನು ವೈರಲ್ ವಿಡಿಯೋ ಬಳಿಕ‌ ಪತ್ತೆ ಹಚ್ಚಿ ವ್ಯಸನಮುಕ್ತ ಕೇಂದ್ರಕ್ಕೆ ದಾಖಲಿಸಲಾಗಿದೆ.

ವೀಡಿಯೊ ವೈರಲ್ ಆದ ನಂತರ, ಮಕ್ಬೂಲ್‌ಪುರ ಪೊಲೀಸರು ಭಾನುವಾರ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಮೂವರನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಅನುಮಾನಾಸ್ಪದ ಚಟುವಟಿಕೆಗಳಿಂದಾಗಿ 12 ಮಂದಿಯನ್ನು ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

Leave A Reply