ಬರೋಬ್ಬರಿ 47,000 ರೂ.ಗೆ ಮಾರಾಟವಾಯ್ತು ಒಂದು ಕುಂಬಳಕಾಯಿ | ಅಷ್ಟಕ್ಕೂ ಇದರ ವಿಶೇಷತೆ ಏನು ಗೊತ್ತಾ?

ಒಂದು ಅಂದಾಜು 1ಕೆಜಿ ಇರುವ ಕುಂಬಳಕಾಯಿಗೆ 40 ರಿಂದ 50 ರೂಪಾಯಿವರೆಗೆ ಇರಬಹುದು. ಆದ್ರೆ, ಇಲ್ಲೊಂದು ಕಡೆ ಕುಂಬಳಕಾಯಿಯೊಂದು ಬರೋಬ್ಬರಿ 47,000 ರೂ.ಗೆ ಮಾರಾಟವಾಗಿದೆ. ಅಷ್ಟಕ್ಕೂ ಈ ಕುಂಬಳಕಾಯಿಗೆ ಇಷ್ಟು ಡಿಮ್ಯಾಂಡ್ ಬರಲು ಕಾರಣ ಏನೆಂದು ಮುಂದೆ ಓದಿ..

ಇಂತಹ ವಿಸ್ಮಯಕಾರಿ ಘಟನೆ ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್‌ನಲ್ಲಿ ನಡೆದಿದೆ. ಈ ಕುಂಬಳಕಾಯಿ ಇಷ್ಟು ಬೆಲೆಗೆ ಮಾರಾಟವಾಗಲು ಕಾರಣ ಸಾರ್ವಜನಿಕವಾಗಿ ನಡೆದ ಹರಾಜು. ಈ ವರ್ಷ ಚೆಮ್ಮನ್ನಾರ್‌ನಲ್ಲಿ ಓಣಂ ಆಚರಣೆಯ ಹಿನ್ನೆಲೆಯಲ್ಲಿ ಕುಂಬಳಕಾಯಿ ಹರಾಜಿನಲ್ಲಿ ಇಟ್ಟಿದ್ದರು. ಓಣಂ ಹಬ್ಬದಂದು ಖರೀದಿ ಮಾಡುವ ಯಾವುದೇ ವಸ್ತುಗಳು ಶುಭದ ಸಂಕೇತ ಎಂದುಕೊಳ್ಳುವ ಕಾರಣ, ಹೀಗೆ ದುಬಾರಿ ಬೆಲೆಗೆ ಹರಾಜಾಗುತ್ತದೆ.

ಕುಂಬಳಕಾಯಿಯು ಭಾರೀ ಮೊತ್ತಕ್ಕೆ ಮಾರಾಟವಾಗಿ ಇತಿಹಾಸವನ್ನು ನಿರ್ಮಿಸಿದೆ. ಹರಾಜು ವೇಳೆ ಸಂಘಟಕರಿಗೆ ಈ ಕುಂಬಳಕಾಯಿಯನ್ನು ಅಲ್ಲಿನ ಸ್ಥಳೀಯರೊಬ್ಬರು ಉಚಿತವಾಗಿ ನೀಡಿದ್ದರು. ಇದನ್ನೇ ಹರಾಜಿನಲ್ಲಿ ಇಟ್ಟಾಗ 47 ಸಾವಿರ ರೂ.ಗೆ ಮಾರಾಟವಾಯಿತು. ಸಾಮಾನ್ಯವಾಗಿ ಇಲ್ಲಿ ನಡೆಯುವ ಹರಾಜಿನಲ್ಲಿ ಟಗರು, ಹುಂಜ ಮುಂತಾದವು 10 ಸಾವಿರ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತವೆ. ಆದರೆ ಇದಕ್ಕಿಂತಲೂ ಹೆಚ್ಚಿನ ಬೆಲೆಗೆ ಕುಂಬಳಕಾಯಿ ಮಾರಾಟವಾಗಿದ್ದು ಒಂದು ದಾಖಲೆಯಾಗಿದೆ.

ಈ ವೇಳೆ ಹರಾಜಿನಲ್ಲಿ ಕುಂಬಳಕಾಯಿಯನ್ನು ಪಡೆದುಕೊಂಡವರು ಸಂಭ್ರಮದಿಂದ ಅದನ್ನು ಹಿಡಿದುಕೊಂಡು ಅಲ್ಲೇ ಕುಣಿದಾಡಿದ್ದರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದ್ದು, ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.

Leave A Reply

Your email address will not be published.