ಈ ಊರಿಗೆ ಬಂದರೆ ಖಂಡಿತಾ ನಿಮಗೆ ಸೊಳ್ಳೆಗಳು ಕಚ್ಚುವುದೇ ಇಲ್ಲ | ಡೆಂಗ್ಯೂ, ಮಲೇರಿಯಾ ಹಾಗೆಂದರೇನು ಎಂದೇ ಇಲ್ಲಿನ ಜನರಿಗೆ ತಿಳಿದೇ ಇಲ್ಲ

ಕೆಲ ಒಂದೆರಡು ವರ್ಷ ಗಳಿಂದ ಕೊರೋನ ಮಹಾಮಾರಿ ಯಿಂದ ಬೇಸತ್ತು ಒಮ್ಮೆ ಇದರಿಂದ ಮುಕ್ತಿ ಸಿಕ್ಕರೇ ಸಾಕು ಎಂದು ಅಂದು ಕೊಳ್ಳದ ದಿನ ಇರಲಿಕ್ಕಿಲ್ಲ. ಹಾಗೆಯೇ ಸೊಳ್ಳೆಯೇ ಇಲ್ಲದ ಊರಿಗೆ ಹೋಗಿ ಬಿಡುವ ಅಂದುಕೊಂಡರೂ ಆಶ್ಚರ್ಯವಿಲ್ಲ.


Ad Widget

ಪ್ರಪಂಚದಾದ್ಯಂತ ಸೊಳ್ಳೆಯಿಂದ ಹರಡುವ ರೋಗಗಳಿಂದ ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ. ವಿಶ್ವದಾದ್ಯಂತ 3 ಸಾವಿರ ಜಾತಿಯ ಸೊಳ್ಳೆಗಳು ಇತರ ಪ್ರಾಣಿಗಳಿಗಿಂತ ಹೆಚ್ಚು ರೋಗಗಳನ್ನು ಹರಡುತ್ತವೆ. ಆದರೆ ನಿಮಗೆ ಗೊತ್ತೇ ? ಸೊಳ್ಳೆಯೇ ಇರದ ಊರೊಂದಿದೆ. ಹೌದು, ಸೊಳ್ಳೆಯೇ ಇಲ್ಲದ ಊರನ್ನು ನೋಡಬೇಕು ಎಂದುಕೊಂಡರೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಐಸ್ಲ್ಯಾಂಡ್ ಗೆ ನೀವು ಬೇಟಿ ನೀಡಬೇಕು. ಇಲ್ಲಿ ಎಲ್ಲಿಯೂ ಕೂಡ ನಿಮಗೆ ಸೊಳ್ಳೆಗಳನ್ನು ಕಾಣಲು ಸಿಗುವುದಿಲ್ಲ.

ಐಸ್ಲ್ಯಾಂಡ್ ಪ್ರಪಂಚದಲ್ಲಿ ಸೊಳ್ಳೆಗಳೇ ಕಾಣದ ದೇಶ ವಾಗಿದ್ದು, ಜೊತೆಗೆ ಅಂಟಾರ್ಟಿಕಾ ಕೂಡ ಸೊಳ್ಳೆ ಮುಕ್ತವಾಗಿರುವ ಪ್ರದೇಶವಾಗಿದೆ. ಕೇವಲ ಸೊಳ್ಳೆ ಮಾತ್ರವಲ್ಲದೆ ಹಾವುಗಳು, ತೆವಳುವ ಜೀವಿಗಳನ್ನು ಸಹ ಇಲ್ಲಿ ಕಾಣಸಿಗದು. ಕೆಲ ಜಾತಿಯ ಜೇಡಗಳು ಇಲ್ಲಿ ಕಂಡುಬಂದರೂ, ಅವುಗಳಲ್ಲಿ ಯಾವುದೂ ಮನುಷ್ಯರಿಗೆ ಮಾರಕವಾಗುವುದಿಲ್ಲ.


Ad Widget

ಅತಿ ಹಿಮಾ ಮತ್ತು ಚಳಿಯಿಂದ ಕೂಡಿದ ಪ್ರದೇಶವಾಗಿರುವ ಐಸ್ಲ್ಯಾಂಡ್ ನ ವಾತಾವರಣದಿಂದಾಗಿ ಸೊಳ್ಳೆಗಳು ಬದುಕಲಾರವು ಎನ್ನಲಾಗುತ್ತದೆ. ಐಸ್ ಲ್ಯಾಂಡ್ ಅತ್ಯಂತ ಕಡಿಮೆ ತಾಪಮಾನವನ್ನು ಹೊಂದಿದೆ. ಇದು -38 °C ತಲುಪಬಹುದು. ಜೊತೆಗೆ ಇಲ್ಲಿ ನೀರು ಬಹಳ ಸುಲಭವಾಗಿ ಹೆಪ್ಪುಗಟ್ಟುತ್ತದೆ.


Ad Widget

ಐಸ್ಲ್ಯಾಂಡ್ ವೆಬ್ ಆಫ್ ಸೈನ್ಸ್ ವೆಬ್ಸೈಟ್ ಪ್ರಕಾರ, ಸೊಳ್ಳೆಗಳು ಐಸ್ಲ್ಯಾಂಡ್ನಲ್ಲಿ ಕಂಡುಬರದಿದ್ದರೂ ,ಅದರ ನೆರೆಯ ದೇಶಗಳಲ್ಲಿ ಕಂಡುಬರುತ್ತವೆ. ಅತಿ ಬೇಗ ಬದಲಾಗುವ ಹವಾಮಾನದಿಂದ ಸೊಳ್ಳೆಗಳು ತಮ್ಮ ಜೀವನ ಚಕ್ರವನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ತಾಪಮಾನ ಕಡಿಮೆಯಾದಾಗ, ನೀರು ಹೆಪ್ಪುಗಟ್ಟಿದಾಗ, ಸೊಳ್ಳೆ ಪ್ಯೂಪಾ ಸಂಪೂರ್ಣವಾಗಿ ಬೆಳೆಯುವುದಿಲ್ಲ. ಈ ಕಾರಣದಿಂದ ಐಸ್ಲ್ಯಾಂಡ್ ನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದಿಲ್ಲ.

ಅಲ್ಲಿನ ಪರಿಸರ, ವಾತಾವರಣ, ನೀರು, ಹವಾಗುಣಗಳು ಸೊಳ್ಳೆಗೆ ಪೂರಕವಾಗಿರದೆ ಇರುವುದರಿಂದ ಸೊಳ್ಳೆಗಳಿಗೆ ನೆಲೆಸಲು ಸಾದ್ಯವಿಲ್ಲ. ಪ್ರತಿ ಹವಾಗುಣ ಪರಿಸರಕ್ಕೆ ತಕ್ಕಂತೆ ಬದಲಾಗುವುದರಿಂದ ಕೆಲ ಜೀವಿಗಳಿಗೆ ಜೀವಿಸಲು ಸಾದ್ಯವಿಲ್ಲ. ಅದಕ್ಕೆ ಪೂರಕವಾದ ವಾತಾವರಣದಲ್ಲಿ ನೆಲೆಸುವುದೇ ಅದರ ಬೆಳವಣಿಗೆಗೆ ಕಾರಣವಾಗುತ್ತದೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: