PM Modi ಗೆ ಬಂದ ಉಡುಗೊರೆಗಳ ಹರಾಜು ಸೆ.17 ರಿಂದ | 1200 ಉಡುಗೊರೆಗಳ ಏಲಂ

ದೇಶ-ವಿದೇಶಗಳ ಅನೇಕ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ಸುಮಾರು 1200 ಉಡುಗೊರೆಗಳನ್ನು, ಮೋದಿ ಅವರ ಜನ್ಮದಿನವಾದ (Birthday) ಸೆಪ್ಟೆಂಬರ್‌ 17ರಿಂದ ಹರಾಜು (Auction) ಹಾಕಲಾಗುವುದು. pmmementos. gov.in ವೆಬ್‌ಸೈಟ್ ಮೂಲಕ ಈ ವಸ್ತುಗಳನ್ನು ಹರಾಜು ಹಾಕಲಾಗುವುದು. ಅಕ್ಟೋಬರ್ 2ರವರೆಗೂ ಸಾರ್ವಜನರಿಗೆ ಬಿಡ್ ಮಾಡುವ ಮೂಲಕ ತಾವು ಬಯಸಿದ ವಸ್ತುಗಳನ್ನು ಖರೀದಿಸಬಹುದು.

ಈ ವಸ್ತುಗಳಲ್ಲಿ ಕೆಲವಕ್ಕೆ ಕನಿಷ್ಠ 100 ರೂ. ದರ ನಿಗದಿ ಮಾಡಿದ್ದರೆ, ಇನ್ನು ಕೆಲವಕ್ಕೆ 10 ಲಕ್ಷ ರೂ. ಬೆಲೆ ನಿಗದಿ ಮಾಡಲಾಗಿದೆ.

ಇದರಲ್ಲಿ, ಅಯೋಧ್ಯೆಯ ಪವಿತ್ರ ಮಣ್ಣನ್ನು ಹೊಂದಿರುವ ಅಮೃತ ಕಲಶ ಮುಖ್ಯವಾದ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ ಎಂದೇ ಹೇಳಬಹುದು.
ಅಷ್ಟು ಮಾತ್ರವಲ್ಲದೇ, ಮಧ್ಯಪ್ರದೇಶ ಮುಖ್ಯಮಂತ್ರಿ ನೀಡಿರುವ ರಾಣಿ ಕಮಲಾಪತಿ (Rani Kamalapati), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ನೀಡಿರುವ ಹನುಮಾನ್ (Hanuman), ಹಿಮಾಚಲ ಸಿಎಂ ನೀಡಿರುವ ತ್ರಿಶೂಲ, ಅಜಿತ್ ಪವಾರ್ ನೀಡಿರುವ ಕೊಲ್ಲಾಪುರದ ಮಹಾಲಕ್ಷ್ಮೀ ವಿಗ್ರಹ, ಆಂಧ್ರ ಸಿಎಂ ನೀಡಿರುವ ವೆಂಕಟೇಶ, ಕಾಶಿ ವಿಶ್ವನಾಥ, ಅಯೋಧ್ಯೆಯ ರಾಮಮಂದಿರದ ಮಾದರಿ, ವಿವಿಧ ಕ್ರೀಡಾಪಟುಗಳ ನೀಡಿರುವ ಟೀ ಶರ್ಚ್, ಬಾಕ್ಸಿಂಗ್ ಗೌಸ್, ಜಾವೆಲಿನ್, ಬ್ಯಾಟ್ ಮೊದಲಾದವುಗಳು ಈ ಬಾರಿ ಹರಾಜಿಗಿಡಲಾಗಿದೆ ಎಂದು ತಿಳಿದುಬಂದಿದೆ. ಅಯೋಧ್ಯೆಯ ಪವಿತ್ರ ಮಣ್ಣನ್ನು ಹೊಂದಿರುವ ಅಮೃತ ಕಲಶ ಸಹ ಮತ್ತೊಂದು ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.

ಉಡುಗೊರೆಗಳು ಮತ್ತು ಸ್ಮರಣಿಕೆಗಳ ಮಾರಾಟದಿಂದ ಬಂದ ಹಣವನ್ನು ಪ್ರಧಾನಿ ಸಾರ್ವಜನಿಕ ಉದ್ದೇಶಕ್ಕೆ ಬಳಸಲಾಗುತ್ತದೆ. ಪ್ರಧಾನಮಂತ್ರಿಯವರು ಈ ಹಿಂದೆ 1800 ಉಡುಗೊರೆಗಳನ್ನು ಹರಾಜು ಹಾಕಿದ್ದು, ನಂತರ  ಅದರಿಂದ ಬಂದ ಆದಾಯವನ್ನು ನಮಾಮಿ ಗಂಗೆ ಯೋಜನೆಗೆ ಖರ್ಚು ಮಾಡಲಾಗಿತ್ತು. ಹಾಗಾಗಿ ಈ  ಬಾರಿಯೂ ಹರಾಜಿನಿಂದ ಸಂಗ್ರಹವಾದ ಹಣವನ್ನು ನಮಾಮಿ ಗಂಗಾ ಯೋಜನೆ (Namami Gange Project) ಬಳಸಲಾಗುವುದು.

Leave A Reply

Your email address will not be published.