ಬೆಳ್ಳಾರೆ : ಹಿಂದೂ ಯುವಕನಿಗೆ ಬೆದರಿಕೆ ಪ್ರಕರಣ , ಆರೋಪಿಗೆ ಜಾಮೀನು

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿರುವ ಶಫೀಕ್ ಎಂಬಾತನ ಸಹೋದರ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಿನ್ನೆ ಸಂಜೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದು, ಇದೀಗ ಜಾಮೀನು ಮೂಲಕ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ.

ಘಟನೆ ಹಿನ್ನೆಲೆ : ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್ ನ ಮ್ಯಾನೇಜರ್ ಪ್ರಶಾಂತ್ ರೈ ಎಂಬವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಶಫೀಕ್ ಸಹೋದರ, ಸಫೀದ್ ಜೀವ ಬೆದರಿಕೆ ಒಡ್ಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶನಿವಾರ ಸಂಜೆ ಪ್ರಶಾಂತ್ ರೈಯವರಿಗೆ ಕರೆ ಮಾಡಿರುವ ಸಫ್ರಿದ್ ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದಾಗಿಯೂ , ಕೊಲ್ಲುವುದಾಗಿ ಬೆದರಿಸಿರುವುದಾಗಿಯೂ ಆರೋಪಿಸಲಾಗಿದೆ.
ಪ್ರಶಾಂತ್ ಅವರು ಠಾಣೆಗೆ ದೂರು ನೀಡಿದ್ದರು.

ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್ ನ ಮ್ಯಾನೇಜರ್ ಪ್ರಶಾಂತ್ ಪೂಂಜ ಅವರಿಗೆ, ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿ ಶಫೀಕ್ ತಮ್ಮ ಅಬ್ದುಲ್ ಸಫ್ರಿಜ್ ಜೀವ ಬೆದರಿಕೆ ಒಡ್ಡಿರುವುದಾಗಿ ನಿನ್ನೆ ಪೊಲೀಸ್ ದೂರು ನೀಡಿದ ಮಾಹಿತಿ ತಿಳಿಯುತ್ತಲೇ ನೂರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿದರು. ಸಫ್ರೀಜ್‌ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಬಂದ್ ಕರೆಯ ಎಚ್ಚರಿಕೆಯನ್ನೂ ನೀಡಲಾಯಿತು. ಪೊಲೀಸ್ ಅಧಿಕಾರಿಗಳಿಂದ ಬಂಧನದ ಭರವಸೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಾಪಾಸು ತೆರಳಿದರು. ಇದೊಂದು ಅಸಂಜ್ಞೆಯ ಅಪರಾಧವಾಗಿರುವುದರಿಂದ ಪ್ರಕರಣ ದಾಖಲಿಸುವ ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಕೋರಿಕೆ ಪತ್ರ ಸಲ್ಲಿಸಿದರು.

ನ್ಯಾಯಾಲಯದ ಅನುಮತಿಯಂತೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಬಳಿಕ ಪೊಲೀಸರು ಬಜ್ಜೆಯಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದರು. ಇಂದು ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.

Leave A Reply

Your email address will not be published.