ನಿಮ್ಮ ರಕ್ತದ ಗುಂಪು ನಿಮ್ಮ ಭವಿಷ್ಯ ಹೇಳುತ್ತೆ ಗೊತ್ತಾ ?

ನಿಮಗೆ ಈ ವಿಷ್ಯ ಗೊತ್ತಾ? ನಿಮ್ಮ ಬ್ಲಡ್ ಗ್ರೂಪ್ ಕೂಡಾ ಭವಿಷ್ಯ ನುಡಿಯುತ್ತದೆಯಂತೆ. ನಿಮ್ಮ ಬ್ಲಡ್ ಗ್ರೂಪ್‌ನ ಮೂಲಕ ನಿಮ್ಮ ಸ್ವಭಾವವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗೇ ನಿಮ್ಮ ಸ್ವಭಾವಗಳು ನಿಮ್ಮ ಸಂಗಾತಿಯ ಸ್ವಭಾವದ ಜತೆಗೆ ಎಷ್ಟರ ಮಟ್ಟಿಗೆ ಹೊಂದಿಕೊಳ್ಳುತ್ತವೆಯೋ ಇಲ್ಲವೋ ಎಂಬುದನ್ನೂ ಕಂಡುಕೊಳ್ಳಬಹುದು. ಈ ಬ್ಲಡ್ ಭವಿಷ್ಯ ಜಪಾನಿನಲ್ಲಿ ಜನಿಸಿ, ಇದೀಗ ಬೇರೆ ಹಲವೆಡೆ ಪ್ರಚಾರಕ್ಕೆ ಬರುತ್ತಿದೆ.

ನಿಮ್ಮ ರಕ್ತದ ಗುಂಪು ಯಾವುದು ಅನ್ನೋದು ಗೊತ್ತಿಲ್ಲದೆ ಇರೋರು ಅಪರೂಪ. ಮೊದಲು ಮದುವೆಯಾಗುವ ಮುನ್ನ ಗಂಡು ಹೆಣ್ಣಿನ ಜಾತಕ ಪರೀಕ್ಷಿಸುತ್ತಿದ್ದರು. ಈಗ ಬಹಳ ಮಂದಿ ಮದುವೆಯಾಗುವ ಮುನ್ನ, ಬ್ಲಡ್ ಗ್ರೂಪ್ ನೋಡುತ್ತಾರೆ. ಕಾಯಿಲೆ ಇರಬಹುದೆಂದಲ್ಲ. ಮದುವೆಗಿಂತ ಮೊದಲು ಕಾಯಿಲೆ ಉಂಟಾ ಇಲ್ವಾ ಅಂತ ನೋಡಲು ಹೆಚ್ ಐ ವಿ ಟೆಸ್ಟ್ ಮಾಡಿಸಿಕೊಳ್ಳುವ ಅಭ್ಯಾಸ ಕೂಡಾ ಈಗ ಶುರುವಾಗಿದೆ, ಅದು ಬೇರೆ ವಿಷಯ 

ಒಂದೇ ರಕ್ತದ ಪಂಗಡದ ಹೆಣ್ಣು- ಗಂಡು ಮದುವೆಯಾದರೆ ಹುಟ್ಟುವ ಮಗುವಿಗೆ ಬುದ್ಧಿಮಾಂದ್ಯದಂಥ ಕಾಯಿಲೆ ಬರುವ ಸಾಧ್ಯತೆ ಹೆಚ್ಚು ಎಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಷಯ. ಹೀಗಾಗಿ ಭಿನ್ನ ರಕ್ತದ ಅರ್ ಹೆಚ್ ಗುಂಪಿಗೆ ಆಯ್ಕೆಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದೆ. 
ಆದರೆ ಇಲ್ಲಿ ನಾವು ಹೇಳುತ್ತಿರುವುದು ಬೇರೆಯದೇ ವಿಷ್ಯ. ನಿಮ್ಮ ಬ್ಲಡ್ ಗ್ರೂಪ್‌ನ ಮೂಲಕ ನಿಮ್ಮ ಸ್ವಭಾವವನ್ನೂ ತಿಳಿದುಕೊಳ್ಳಬಹುದು! ಈ ಪದ್ಧತಿಯನ್ನು ಲಕ್ಷಾಂತರ ಮಂದಿ ಜಪಾನೀಯರು ಮತ್ತು ಪೂರ್ವ ಏಷ್ಯನ್ನರು ನಂಬುತ್ತಾರೆ. ಈವರೆಗೆ ಇದರ ಮೇಲೆ ಅನೇಕ ಅಧ್ಯಯನಗಳು ನಡೆದು ಹೋಗಿವೆ. ಇದರಲ್ಲಿ ಹೆಚ್ಚಿನ ನಿಜವಿರುವುದು ಕೂಡ ಗೊತ್ತಾಗಿದೆ.  

ಈ ವಿದ್ಯೆಯನ್ನು ಕೆಟ್ಸುಕಿ ಗಾಟಾ (Ketsueki-gata) ಎಂದು ಕರೆಯಲಾಗುತ್ತಿದೆ. ಜಪಾನಿನ ಸಮಾಜ ವಿಜ್ಞಾನ ಪ್ರಾಧ್ಯಾಪಕ ಟೋಕೆಜಿ ಫುರುಕಾವಾ ಎಂಬವರು ಸಾಮಾಜಿಕ ಮನೋವಿಜ್ಞಾನದ ನಿಯತಕಾಲಿಕೆ “ಎ ಸ್ಟಡಿ ಆಫ್ ಟೆಂಪರಮೆಂಟ್ ಮತ್ತು ಬ್ಲಡ್-ಗ್ರೂಪ್ಸ್” ಎಂಬ ಅಧ್ಯಯನ ವರದಿಯನ್ನು ಪ್ರಕಟಿಸಿದರು. 1930ರಲ್ಲಿ ಪ್ರಕಟವಾದ ಈ ಲೇಖನದಲ್ಲಿ, ವ್ಯಕ್ತಿತ್ವ ಮತ್ತು ರಕ್ತದ ಗುಂಪಿನ ನಡುವಿನ ಸಂಪರ್ಕವಿದೆ, ಮತ್ತು ರಕ್ತಗುಂಪಿಗೂ (Blood Group) ವ್ಯಕ್ತಿಯ ಮನೋಧರ್ಮಕ್ಕೂ (Psychology) ನಂಟು ಇದೆ,  ಎಂದು ಅವರು ತಮ್ಮ ಅಂಕಿ ಅಂಶಗಳ ಮೂಲಕ ವಾದಿಸಿದರು.

ಯಾವ ರಕ್ತದ ಗುಂಪಿನವರಿಗೆ ಯಾವ ಗುಣ? 

ರಕ್ತದ ಗುಂಪುಗಳು ಸಾಮಾನ್ಯವಾಗಿ ನಾಲ್ಕು- A, B, O ಹಾಗೂ AB. ಇದರಲ್ಲಿ ಪಾಸಿಟಿವ್ (Positive) ಹಾಗೂ ನೆಗೆಟಿವ್ (Negative)  koodaa ಸೇರಿಸಿದರೆ ಒಟ್ಟು ಎಂಟು ವಿಧ. 
ಕೆಟ್ಸುಕಿ ಗಾಟಾ ಥಿಯರಿ ಪ್ರಕಾರ, A ರಕ್ತ ಪ್ರಕಾರವನ್ನು ಹೊಂದಿರುವ ಜನರು ಸೃಜನಶೀಲತೆ (Creative), ಬುದ್ಧಿವಂತಿಕೆ (Intelligent) ಮತ್ತು ಸಹಕಾರದಂತಹ (Co-operation) ಸಕಾರಾತ್ಮಕ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅಷ್ಟೇ ಅಲ್ಲದೆ. ಅವರು  ಮೊಂಡುತನ ಮತ್ತು ಬಿಗಿ ಪಟ್ಟಿನಂತಹ ನಕಾರಾತ್ಮಕ ಗುಣಲಕ್ಷಣಗಳನ್ನೂ ಹೊಂದಿರುತ್ತಾರೆ. ಇತರ ರಕ್ತ ಗುಂಪುಗಳನ್ನು ಹೊಂದಿರುವ ಜನರಿಗಿಂತ ಟೈಪ್ A ವ್ಯಕ್ತಿಗಳು ಜಪಾನ್‌ನಲ್ಲಿ ಹೆಚ್ಚು ಸಾಮಾನ್ಯವೆಂದು ವರದಿಯಾಗಿದೆ.

ಟೈಪ್ B ರಕ್ತ ಹೊಂದಿರುವ ವ್ಯಕ್ತಿಗಳು ಬಲವಾದ ವ್ಯಕ್ತಿತ್ವ ಉಳ್ಳವರು. ಅವರು ಭಾವೋದ್ರಿಕ್ತರು ಮತ್ತು ತೀರಾ ಸಹಾನುಭೂತಿ (Kind) ಮತ್ತು ನಿರ್ಣಾಯಕ ಸ್ವಭಾವದವರು ಕೂಡಾ. ಆದರೆ ಅವರಲ್ಲೂ ನೆಗೆಟಿವ್ ಪಾಯಿಂಟ್ ಉಂಟು. ಋಣಾತ್ಮಕವಾಗಿ ಇವರು ಸ್ವಾರ್ಥ ಮತ್ತು ಅನಿಯಮಿತ ನಡವಳಿಕೆಯನ್ನೂ ಹೊಂದಿದ್ದಾರೆ. ಈ ರಕ್ತದ ಗುಂಪನ್ನು ಹೊಂದಿರುವ ಜನರು A ರಕ್ತವನ್ನು ಹೊಂದಿರುವವರೊಂದಿಗೆ ಘರ್ಷಣೆ ಹೊಂದಬಹುದು ಎಂದು ಹೇಳಲಾಗುತ್ತದೆ.
AB ರಕ್ತ ಪ್ರಕಾರದವರ ಸಾಮರ್ಥ್ಯಗಳು ಸಾಮಾನ್ಯವಾಗಿ ತರ್ಕಬದ್ಧತೆ ಮತ್ತು ಹೊಂದಾಣಿಕೆ. ಆದರೆ ನಿರ್ಣಯಿಸಲು ಹಿಂಜರಿಯುವುದು, ಅತಿ ವಿಮರ್ಶಾತ್ಮಕತೆ ಮತ್ತು ಮರೆವು ಅವರ ದೌರ್ಬಲ್ಯಗಳು ಎಂದು ಹೇಳಲಾಗುತ್ತದೆ. ಈ ರಕ್ತದ ಪ್ರಕಾರವನ್ನು ಹೆಚ್ಚಾಗಿ A ಮತ್ತು B ಎರಡರ ಗುಣಲಕ್ಷಣಗಳನ್ನು ಹೊಂದಿರುವಂತೆ ನೋಡಲಾಗುತ್ತದೆ. ಈ ರಕ್ತದ ಗುಂಪು ಅಪರೂಪದ ಕಾರಣ, ಇದನ್ನು ಹೊಂದಿರುವ ಜನರು ಜಪಾನ್‌ನಲ್ಲಿ ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ.

” O ” ಪ್ರಕಾರದ ಬ್ಲಡ್ ಗ್ರೂಪ್ ಜನರು ಆತ್ಮವಿಶ್ವಾಸ, ದೃಢನಿರ್ಣಯ ಉಳ್ಳವರು., ಸ್ಥಿತಿಸ್ಥಾಪಕತ್ವ ಮತ್ತು ಅಂತಃಕರಣದಂತಹ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಆದರೆ ಇವರ ಋಣಾತ್ಮಕ ಗುಣಗಳೆಂದರೆ ಸ್ವಯಂ-ಕೇಂದ್ರಿತ ವ್ಯಕ್ತಿತ್ವ, ಅಸ್ಥಿರತೆ. ಟೈಪ್ ಎ ರಕ್ತ ಹೊಂದಿರುವ ವ್ಯಕ್ತಿಗಳಿಗೆ ಇವರು ವಿಶೇಷವಾಗಿ ಸ್ವಾರ್ಥಿಗಳಂತೆ ಕಾಣಿಸಿಕೊಳ್ಳುತ್ತಾರೆ.

ಯಾವ ರಕ್ತದ ಗುಂಪು ಗುಂಪು ಒಳ್ಳೆಯ ಹೊಂದಾಣಿಕೆ ?
ಮೇಲೆ ಹೇಳಿದ ಗುಂಪುಗಳ ಗುಣಲಕ್ಷಣಗಳ ಆಧಾರದ ಮೇಲೆ, ಯಾವ ರಕ್ತದ ಗುಂಪುಗಳು ಜೊತೆ ಸೇರಿದರೆ ಸಂತೋಷದ ಗೆಳೆತನ, ಉಲ್ಲಾಸದ ದಾಂಪತ್ಯಕ್ಕೆ ಕಾರಣವಾಗಬಹುದು ಎಂದು ಈ ಬ್ಲಡ್ ಗ್ರೂಪ್ ಸಿದ್ಧಾಂತವು ಸೂಚಿಸುತ್ತದೆ.

ಅತ್ಯುತ್ತಮ ಜೋಡಿಗಳ ಪಟ್ಟಿ : 
O ಗಂಡು- A ಹೆಣ್ಣು
A ಗಂಡು × A ಹೆಣ್ಣು
O ಗಂಡು × B ಹೆಣ್ಣು
O ಗಂಡು × O ಹೆಣ್ಣು

ಈ ರಕ್ತ ವಿಂಗಡನೆ  ಹಾಗೂ ಸ್ವಭಾವ ಹೊಂದಾಣಿಕೆಗೆ ಯಾವುದಾದರೂ ವೈಜ್ಞಾನಿಕ ಆಧಾರವಿದೆಯೇ ಎಂದು ವಿಜ್ಞಾನಿಗಳು ಹುಡುಕಾಡಿದ್ದಾರೆ. ಆದರೆ ಅಂಥ ಯಾವುದೂ ವಿಶೇಷವಾಗಿ ಕಂಡುಬಂದಿಲ್ಲ. ಆದರೆ ಇಂತದೊಂದು ರೂಢಿ ಬಹಳ ಮಂದಿ ಜಪಾನೀಯರಲ್ಲಿ ಬೆಳೆದುಬಂದಿದೆ. ಅಲ್ಲಿ ಬ್ಲಡ್ ಗ್ರೂಪ್ ಹಾರೋಸ್ಕೊಪ್ ಅನ್ನು ನಂಬಿಕೊಂಡು ಬಂದಿದ್ದಾರೆ.

Leave A Reply

Your email address will not be published.