ಕಾಚ ಖರೀದಿಸಲು ದೆಹಲಿಗೆ ಹೋಗಿದ್ದೆ- ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಹೋದರ

ಮುಖ್ಯಮಂತ್ರಿ ಸಹೋದರ, ” ನಾನು ಕಾಚ ಖರೀದಿಸಲು ದೆಹಲಿಗೆ ಹೋಗಿದ್ದೆ ” ಎಂದು ನೀಡಿದ ಹೇಳಿಕೆ ಇದೀಗ ವೈರಲ್ ಆಗಿದೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಹೋದರ, ಶಾಸಕ ಬಸಂತ್ ಸೊರೆನ್  ಅವರು ನೀಡಿದ ಹೇಳಿಕೆಯೊಂದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

‘ ಈಗ ಜಾರ್ಖಂಡ್ ನಲ್ಲಿ ವಿಪರೀತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೂ ನೀವು ಯಾಕೆ ಯಾವುದರಲ್ಲಿ ಕೂಡಾ ಕಾಣಿಸಿಕೊಳ್ಳುತ್ತಿಲ್ಲ ? ‘ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಬಸಂತ್ ನೀಡಿರುವ ಉತ್ತರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪತ್ರಕರ್ತನ ಪ್ರಶ್ನೆಗೆ ಬಸಂತ್ ಉತ್ತರ ಕೇಳಿ ಪತ್ರಕರ್ತ ಬೆಚ್ಚಿ ಬಿದ್ದಿದ್ದ.

” ನೋಡಿ, ನನ್ನ ಒಳ ಉಡುಪುಗಳು ಖಾಲಿಯಾಗಿದ್ದವು. ಹೀಗಾಗಿ ಒಳ ಉಡುಪುಗಳನ್ನು ಖರೀದಿ ಮಾಡಲೆಂದೇ ದೆಹಲಿಗೆ ಹೋಗಿದ್ದೇನೆ ” ಎಂದು ತಿಳಿಸಿದ್ದರು ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಭಾರೀ ವೈರಲ್ ಅಲೆ ಎಬ್ಬಿಸುತ್ತಿವೆ.

ದೆಹಲಿ ಪ್ರವಾಸದಿಂದ ಹಿಂದಿರುಗಿದ್ದ ಬಳಿಕ ಶಾಸಕ ಬಸಂತ್ ಸೊರೆನ್ ಇತ್ತೀಚೆಗೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಯುವತಿಯರ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಬಸಂತ್ ಈ ಮಾತುಗಳನ್ನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಆತ ತಮಾಷೆಗೆ ಹೇಳಿದ್ದಾರ ಅಥವಾ ಸೀರಿಯಸ್ ಆಗಿ ಹೇಳಿದ್ದಾರೆಯಾ ಎಂಬ ಬಗ್ಗೆ ಸ್ಪಷ್ಟವಿಲ್ಲ

ಆದರೆ, ರಾಜಕೀಯ ಪ್ರಕ್ಷುಬ್ದ ಸನ್ನಿವೇಶದಲ್ಲಿರುವ ಜಾರ್ಖಂಡ್ ನಲ್ಲಿ ಉಂಟಾಗಿದ್ದ ರಾಜಕೀಯ ಅಶಾಂತಿಯ ಸನ್ನಿವೇಶದಲ್ಲಿ ಆತ ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇತ್ತೀಚೆಗೆ ಜಾರ್ಖಂಡ್‍ನಲ್ಲಿ ನಡೆದ ಭಾರೀ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಿದ್ದಾರೆ. 81 ಶಾಸಕರ ಪೈಕಿ ವಿಧಾನಸಭೆಯಲ್ಲಿ 48 ಶಾಸಕರು ಮುಖ್ಯಮಂತ್ರಿ ಪರ ಮತ ಚಲಾಯಿಸಿದ್ದಾರೆ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ 11ನೇತೃತ್ವದ ಒಕ್ಕೂಟವು ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪದ ನಡುವೆ ಈ ವಿಶ್ವಾಸಮತ ಯಾಚನೆ ನಡೆದಿತ್ತು. ಸೊರೇನ್ ಗೆದ್ದಿದ್ದರು.

Leave A Reply

Your email address will not be published.