DA Hike Date : ಸರಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ | ತುಟ್ಟಿ ಭತ್ಯೆ ಹೆಚ್ಚಳ ಈ ದಿನಾಂಕದಂದು ಸಾಧ್ಯತೆ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ಎಂದೇ ಹೇಳಬಹುದು. ಹೌದು, ಕಳೆದ ಮೂರು ತಿಂಗಳಿನ ಕೇಳಿ ಬರುತ್ತಿರುವ ಸುದ್ದಿ DA ಬಗ್ಗೆ. ಈಗ ಈ ಕಾಯುವಿಕೆ ಕೊನೆಗೊಳ್ಳಲಿದೆ. ಇಂದಿನಿಂದ 20 ದಿನಗಳ ನಂತರ ಕೇಂದ್ರ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಹಬ್ಬ ಹರಿದಿನಗಳಲ್ಲಿ ಭರ್ಜರಿ ಗಿಫ್ಟ್ ನೀಡಲು ಹೊರಟಿದೆ.

ಉದ್ಯೋಗಿಗಳು ಈ ಸಿಹಿ ಸುದ್ದಿಯನ್ನು ಯಾವಾಗ ಸ್ವೀಕರಿಸುತ್ತಾರೆ ಅನ್ನೋ ದಿನಾಂಕ ನಿಜಕ್ಕೂ ಕೊನೆಗೂ ಒಂದು ಹಂತಕ್ಕೆ ಬಂದಿದೆ. ಹೌದು, ಸೆಪ್ಟೆಂಬರ್ 28, 2022ರಂದು ನವರಾತ್ರಿ ಪ್ರಾರಂಭವಾದ ಎರಡು ದಿನಗಳ ನಂತರ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರವು ತನ್ನ ಖಜಾನೆಯನ್ನ ತೆರೆಯಲಿದೆ. ಸೆಪ್ಟೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಅವ್ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳದ ಘೋಷಣೆಯನ್ನು ಮಾಡಬಹುದಾಗಿದೆ.

ಅಧಿಕೃತವಾಗಿ ಕ್ಯಾಬಿನೆಟ್ ದಿನಾಂಕ ಮತ್ತು ಹಣದುಬ್ಬರ
ಹೆಚ್ಚಳವನ್ನು ಪ್ರಕಟಿಸಲಾಗುವುದು, ಆದ್ರೆ ಅದನ್ನು
ಘೋಷಿಸಲಾಗಿಲ್ಲ. ಆದರೆ ಸೆಪ್ಟೆಂಬರ್ 28 ರಂದು
ನವರಾತ್ರಿಯಲ್ಲಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈನಿಂದ ಡಿಸೆಂಬರ್ ವರೆಗೆ 2022ರ ಅರ್ಧ ವರ್ಷಕ್ಕೆ ತುಟ್ಟಿ ಭತ್ಯೆ ಹೆಚ್ಚಳವನ್ನ ಸರ್ಕಾರ ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ.

ಹೌದು ಹಾಗಾದರೆ ಸರಕಾರಿ ನೌಕರರಿಗೆ ನವರಾತ್ರಿ ಶುಭಫಲ ರಾತ್ರಿಗಳನ್ನೇ ತರುತ್ತದೆ. ನವರಾತ್ರಿಯ ಹಬ್ಬವು ಸೆಪ್ಟೆಂಬರ್ 26 ರಿಂದ ಪ್ರಾರಂಭ. ಅಕ್ಟೋಬರ್ 5ರಂದು ದಸರ ಸಮಯದಲ್ಲಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಈ ತಿಂಗಳು ಹೆಚ್ಚಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಈ ಮೊದಲು ತುಟ್ಟಿಭತ್ಯೆಯನ್ನು ಶೇಕಡಾ 4ರಷ್ಟು ಹೆಚ್ಚಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಹೆಚ್ಚುತ್ತಿರುವ ಹಣದುಬ್ಬರದ ದೃಷ್ಟಿಯಿಂದ ತುಟ್ಟಿಭತ್ಯೆಯನ್ನ ಶೇಕಡಾ 5ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗಿದೆ. ತುಟ್ಟಿ ಭತ್ಯೆಯನ್ನು ಪ್ರತಿ ವರ್ಷ ಸರ್ಕಾರವು ಎರಡು ಬಾರಿ ಹೆಚ್ಚಿಸುತ್ತಿದೆ. ಮೊದಲ ಹಂತದಲ್ಲಿ ತುಟ್ಟಿ ಭತ್ಯೆ ಹೆಚ್ಚಳವು ಜನವರಿಯಿಂದ ಮತ್ತು ಎರಡನೆಯದಾಗಿ ಜುಲೈ ತಿಂಗಳಿನಿಂದ ಅನ್ವಯವಾಗುತ್ತದೆ. ಚಿಲ್ಲರೆ ಹಣದುಬ್ಬರ ದತ್ತಾಂಶದ ಆಧಾರದ ಮೇಲೆ DA ಮತ್ತು DR ನಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ.

ಚಿಲ್ಲರೆ ಹಣದುಬ್ಬರವು ಆರ್‌ಬಿಐನ ಸಹಿಷ್ಣುತೆಯ ಮಟ್ಟವಾದ ಶೇಕಡಾ 6 ಕ್ಕಿಂತ ಹೆಚ್ಚುತ್ತಿದೆ ಮತ್ತು ಶೇಕಡಾ 6.71 ರಷ್ಟಿದೆ. ಸರ್ಕಾರವು 2022ರ ಮೊದಲಾರ್ಧದಲ್ಲಿ ಜನವರಿಯಿಂದ ಜೂನ್’ವರೆಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ. ಈಗ ಜುಲೈನಿಂದ ಡಿಸೆಂಬರ್ ತಿಂಗಳ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯಲಾಗುತ್ತಿದೆ. ಮತ್ತು ತುಟ್ಟಿಭತ್ಯೆ ಸೆಪ್ಟೆಂಬರ್‌ನಲ್ಲಿ ಹೆಚ್ಚಾಗಲಿದೆ.

ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ದತ್ತಾಂಶದ ದೃಷ್ಟಿಯಿಂದ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 39ರಷ್ಟು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ತುಟ್ಟಿಭತ್ಯೆ ಹೆಚ್ಚಳದಿಂದ ಕೇಂದ್ರ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಸಾಧ್ಯ. ಅಂಕಿಅಂಶಗಳ ಪ್ರಕಾರ, ಕೇಂದ್ರ ಸರ್ಕಾರದ ಈ ನಿರ್ಧಾರದ ಪರಿಣಾಮ 47 ಲಕ್ಷ ಉದ್ಯೋಗಿಗಳು ಮತ್ತು 68 ಲಕ್ಷ ಪಿಂಚಣಿದಾರರಿದ್ದಾರೆ.

Leave A Reply

Your email address will not be published.