ದ.ಕ. : ಮಕ್ಕಳಿಗೆ ಜ್ವರ ಬಾಧೆ ,ವಿಶೇಷ ಕಾಳಜಿಗೆ ಮುಖ್ಯ ಶಿಕ್ಷಕರಿಗೆ ಡಿಡಿಪಿಐ ಸೂಚನೆ

ದಕ್ಷಿಣ ಕನ್ನಡ : ಬಹುಶಃ ಭಾರೀ ಮಳೆಯ ಕಾರಣದಿಂ ಎಲ್ಲಾ ಕಡೆ ಮಕ್ಕಳಿಗೆ ಜ್ವರ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಹಾಗಾಗಿ, ಜಿಲ್ಲಾ ವ್ಯಾಪ್ತಿಯ ಕೆಲವು ವಲಯಗಳ ಶಾಲಾ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ. ಇದರಿಂದ ಶಿಕ್ಷಣಾಧಿಕಾರಿಗಳು ಶಾಲಾ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸುವಿಕೆಯಲ್ಲಿ ನಿಗಾ ಇಟ್ಟಿದೆ.

ಈ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಂಡು ಹಾಗೂ ಈ ಮಕ್ಕಳಿಗೆ ಒಂದು ವಾರ ಕಾಲ ರಜೆ ಸಾರಲು ಎಲ್ಲಾ ಮುಖ್ಯ ಶಿಕ್ಷಕರು, ಸಿ.ಆರ್.ಪಿ, ಹಾಗೂ ಶಿಕ್ಷಣ ಸಂಯೋಜಕರು ಕ್ರಮ ವಹಿಸುವಂತೆ ಈ ಮೂಲಕ ತಿಳಿಸಿದೆ ಮತ್ತು ಎಲ್ಲಾ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸುವುದು. ಈ ಬಗ್ಗೆ ಜಿಲ್ಲೆಯ ಎಲ್ಲಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ವೈಯುಕ್ತಿಕ ಗಮನ ಹರಿಸುವಂತೆ ಸೂಚಿಸಿದೆ.

Leave A Reply

Your email address will not be published.