ದುಬಾರಿಯಾಗಲಿದೆ ಅಕ್ಕಿ ಬೆಲೆ | ಜನಸಾಮಾನ್ಯರಲ್ಲಿ ಆತಂಕ ರೈತರ ಮೊಗದಲ್ಲಿ ಸಂತಸ!

ದಿನ ನಿತ್ಯದ ದಿನಸಿ ವಸ್ತುಗಳಿಂದ ಹಿಡಿದು ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಕಾಣುತ್ತಲೇ ಇದೆ. ಒಂದೊತ್ತು ಊಟಕ್ಕೆ ಪರದಾಡುವ ಕುಟುಂಬಗಳಿಗೆ ಬೆಲೆ ಏರಿಕೆ ದೊಡ್ಡ ತಲೆ ಬಿಸಿಯಾಗಿದೆ. ಅನ್ನವಾದರೂ ಬೇಯಿಸಿ ತಿನ್ನಬಹುದು ಅಂದುಕೊಂಡವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು. ಅಕ್ಕಿ ಬೆಲೆ ಕೂಡ ಹೆಚ್ಚಳವಾಗಲಿದೆ ಎನ್ನುವ ಸೂಚನೆ ಹೊರಬಿದ್ದಿದೆ.

ಇಂಧನಗಳು ಮತ್ತು ಗೋಧಿಯ ಬೆಲೆಗಳು ಹೆಚ್ಚಾಗಿವೆ. ಇದರ ನಡುವೆ ಈಗ ಅಕ್ಕಿಯ ಬೆಲೆಯೂ ಏರಿಕೆಯಾಗಿದ್ದು ಜನಸಾಮಾನ್ಯರಿಗೆ ನಿರಾಸೆ ಉಂಟು ಮಾಡಿದೆ. ಇದಕ್ಕೆಲ್ಲ ಕಾರಣ ಇಂದು ನಶಿಸಿ ಹೋಗುತ್ತಿರುವ ರೈತವರ್ಗವೆಂದೇ ಹೇಳಬಹುದು. ಗದ್ದೆ, ತೋಟದ ಬದಲು ದೊಡ್ಡ ದೊಡ್ಡ ಕೈಗಾರಿಕೆಗಳು, ಉದ್ಯಮಗಳು ತಲೆ ಎತ್ತಿರೋದೇ ದೊಡ್ಡ ಸಮಸ್ಯೆಯಾಗಿದೆ.

ವಿದ್ಯಾವಂತರೆಲ್ಲರೂ ಕೃಷಿಗೆ ಅವಲಂಬಿತರಾಗದೆ ದೊಡ್ಡ ದೊಡ್ಡ ಕಂಪನಿ ಕೆಲಸದತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಅಕ್ಕಿ, ಧಾನ್ಯ, ತರಕಾರಿ ಬೆಳೆಯುವವರ ಸಂಖ್ಯೆ ಇಳಿಕೆಯಾಗಿದೆ. ಒಟ್ಟಿನಲ್ಲಿ ಉತ್ಪಾದನೆ ಕಮ್ಮಿ ಆಗುತ್ತಿದ್ದಂತೆ ಬೆಲೆ ಏರಿಕೆ ಆಗುವುದರಲ್ಲಿ ಸಂಶಯವೇನಿಲ್ಲ.

ಆದರೆ, ದೇಶದ ಬೆನ್ನೆಲುಬು ರೈತರಿಗೆ ಇದೊಂದು ಸಂತಸದ ಸುದ್ದಿಯಾಗಿದ್ದು, ಬೆಲೆ ಬೆಳೆಯಲು ಉತ್ತೇಜನ ಪಡೆದುಕೊಂಡಿದೆ. ನೆರೆಯ ಬಾಂಗ್ಲಾದೇಶವು ಅಕ್ಕಿಯ ಮೇಲಿನ ಆಮದು ಸುಂಕವನ್ನ ಕಡಿಮೆ ಮಾಡಿದ್ದರಿಂದ ಭಾರತದಲ್ಲಿ ಅಕ್ಕಿ ಬೆಲೆಗಳು ರೆಕ್ಕೆಗಳನ್ನ ಪಡೆದುಕೊಂಡವು. ನಮ್ಮ ದೇಶದಲ್ಲಿ, ಅಕ್ಕಿಯ ಬೆಲೆಗಳು ಒಂದು ವಾರದೊಳಗೆ ಶೇಕಡಾ 5ರಷ್ಟು ಹೆಚ್ಚಾಗಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಮತ್ತು ಭತ್ತದ ಕೃಷಿಯೂ ಕಡಿಮೆಯಾಗಿರುವುದರಿಂದ ಈ ವರ್ಷ ಭತ್ತದ ಬೆಲೆಗಳು ರೆಕ್ಕೆಗಳನ್ನು ಪಡೆದುಕೊಂಡಿವೆ.

ರೈಸ್ ವಿಲ್ಲಾ ಸಿಇಒ ಸೂರಜ್ ಅಗರ್ವಾಲ್ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದು, “ಬಾಂಗ್ಲಾದೇಶ ಸರ್ಕಾರವು ಅಕ್ಕಿಯ ಆಮದಿನ ಮೇಲಿನ ಸುಂಕವನ್ನ ಕಡಿತಗೊಳಿಸುವುದಾಗಿ ಘೋಷಿಸಿದ ನಂತ್ರ ಭಾರತದಲ್ಲಿ ಬೆಲೆಗಳು ಇದ್ದಕ್ಕಿದ್ದಂತೆ ಶೇಕಡಾ 4ರಷ್ಟು ಹೆಚ್ಚಾಗಿದೆ. ಬಾಂಗ್ಲಾದೇಶವು ಭಾರತದಿಂದ ಅಕ್ಕಿಯನ್ನ ಖರೀದಿಸುತ್ತದೆ ಮತ್ತು ಅದನ್ನು ವಿಯೆಟ್ನಾಂನಿಂದ ಖರೀದಿಸುತ್ತದೆ ಎಂದು ಹೇಳಿದ್ದಾರೆ.

Leave A Reply

Your email address will not be published.