ಅನುಮೋದಿತವಾಗದ ಆ್ಯಂಟಿಬಯೋಟಿಕ್ ಔಷಧಿಗಳನ್ನೇ ಹೆಚ್ಚು ಬಳಸುತ್ತಿದ್ದಾರೆ ಭಾರತೀಯರು | ಅಧ್ಯಯನದಲ್ಲಿ ಶಾಕಿಂಗ್ ನ್ಯೂಸ್ ಬಹಿರಂಗ!

ನವದೆಹಲಿ: ಆ್ಯಂಟಿಬಯೋಟಿಕ್ ​ಗಳ ನಿಗಾ ಪಟ್ಟಿಯಲ್ಲಿ ಶೇ 72.7 ರಷ್ಟು ಅನುಮೋದಿತವಾಗದ ಮತ್ತು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಶೇ 48.7 ರಷ್ಟು ಔಷಧಿಗಳಿವೆ. ಆದರೂ ಭಾರತೀಯರು ಅತೀ ಹೆಚ್ಚು ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್ ಗಳನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನವೊಂದು ದೃಢಪಡಿಸಿದೆ.

ಅತಿಯಾದ ಆ್ಯಂಟಿಬಯೋಟಿಕ್ ಔಷಧಗಳ ( antibiotic drugs ) ಸೇವನೆಯು ದೀರ್ಘಕಾಲಿಕ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂಬುದಾಗಿ ವೈದ್ಯರ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಲ್ಯಾನ್ಸೆಟ್ ರೀಜನಲ್ ಹೆಲ್ತ್-ಸೌತ್ ಈಸ್ಟ್ ಏಷ್ಯಾದಿಂದ ತನ್ನ ಅಧ್ಯಯನ ವರದಿಯನ್ನು ಪ್ರಕಟಿಸಿದ್ದು, ಭಾರತೀಯರು ಅತಿಯಾದ ಪ್ರತಿಜೀವಕಗಳನ್ನು ಸೇವಿಸುತ್ತಿದ್ದು, ಆ ಪೈಕಿ ಅಜಿಧ್ರೋಮೈಸಿನ್ ಅಗ್ರಸ್ಥಾನದಲ್ಲಿದೆ ಎಂದು ಹೇಳಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಇನ್ನೂ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ನಿಯಂತ್ರಣಾಧಿಕಾರಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಆ್ಯಂಟಿಬಯೋಟಿಕ್ ಲಭ್ಯತೆ ಸಮಸ್ಯೆ ಸಂಕೀರ್ಣಗೊಳ್ಳುತ್ತಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಇದಷ್ಟೇ ಅಲ್ಲದೇ ಕೋವಿಡ್ ಸಾಂಕ್ರಾಮಿಕತೆ ವೇಳೆ ಹಾಗೂ ಅದಕ್ಕಿಂತ ಮುನ್ನವೂ ಅಜಿಥ್ರೋಮೈಸಿನ್ ಸಹಿತ ಆ್ಯಂಟಿಬಯೋಟಿಕ್ ಗಳನ್ನು ಭಾರತೀಯರು ಅತಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದ್ದಾರೆ ಎಂಬ ಅಂಶವನ್ನು ಸಂಶೋಧನೆಯಿಂದ ಎತ್ತಿ ತೋರಿಸಲಾಗಿದೆ.

2019 ರಲ್ಲಿ ಭಾರತದ ಖಾಸಗಿ ವಲಯದಲ್ಲಿ ಬಳಸಲಾದ ಶೇಕಡಾ 47 ಕ್ಕಿಂತ ಹೆಚ್ಚು ಆ್ಯಂಟಿಬಯೋಟಿಕ್ ಸೂತ್ರೀಕರಣಗಳನ್ನು ಕೇಂದ್ರ ಔಷಧ ನಿಯಂತ್ರಕ ಅನುಮೋದಿಸಿಲ್ಲ ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್-ಆಗ್ನೇಯ ಏಷ್ಯಾದಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ. 2019ರಲ್ಲಿ ಅಜಿಥ್ರೊಮೈಸಿನ್ 500mg ಟ್ಯಾಬ್ಲೆಟ್ ಭಾರತದಲ್ಲಿ ಹೆಚ್ಚು ಸೇವಿಸಿದ ಆ್ಯಂಟಿಬಯೋಟಿಕ್ ಔಷಧಿಯಾಗಿದ್ದು (ಶೇ. 7.6), ನಂತರದ ಸ್ಥಾನದಲ್ಲಿ ಸೆಫಿಕ್ಸೈಮ್ (cefixime) 200 mg ಟ್ಯಾಬ್ಲೆಟ್ (6.5 ಪ್ರತಿಶತ) ಇದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಬೋಸ್ಟನ್ ವಿಶ್ವವಿದ್ಯಾಲಯ, ದೆಹಲಿಯ ಅಮೆರಿಕ ಅಂಡ್ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಸಂಸ್ಥೆಗಳ ಸಂಶೋಧಕರು ಖಾಸಗಿ ವಲಯದ ಆ್ಯಂಟಿಬಯೋಟಿಕ್ ಬಳಕೆಯನ್ನು ಪರಿಶೀಲಿಸಿದ್ದು, ಇದು ಭಾರತದಲ್ಲಿ ಒಟ್ಟು ಆ್ಯಂಟಿಬಯೋಟಿಕ್ ಬಳಕೆಯ ಶೇಕಡಾ 8590 ರಷ್ಟಾಗುತ್ತದೆ. ಅಂದಾಜು 5,000 ಔಷಧ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವ 9,000 ಸ್ಟಾಕಿಸ್ಟ್‌ಗಳಿಂದ ಡೇಟಾವನ್ನು ಸಂಗ್ರಹಿಸಲಾಗಿದೆ. ಆದಾಗ್ಯೂ, ಈ ಡೇಟಾವು ಸಾರ್ವಜನಿಕ ಸೌಲಭ್ಯಗಳ ಮೂಲಕ ವಿತರಿಸಲಾದ ಔಷಧಿಗಳನ್ನು ಒಳಗೊಂಡಿಲ್ಲ.

ಅನುಮೋದಿತವಾಗದ ಫಾರ್ಮುಲೇಶನ್​ಗಳ ಪೈಕಿ ಸೆಫಾಲೊಸ್ಪೊರಿನ್ಸ್​, ಮ್ಯಾಕ್ರೊಲೈಡ್ಸ್ ಮತ್ತು ಪೆನಿಸಿಲಿನ್​ಗಳು ಉನ್ನತ ಮೂರು ಸ್ಥಾನಗಳಲ್ಲಿವೆ. ಆ್ಯಂಟಿಬಯೋಟಿಕ್​ಗಳ ನಿಗಾ ಪಟ್ಟಿಯಲ್ಲಿ ಶೇ 72.7 ರಷ್ಟು ಅನುಮೋದಿತವಾಗದ ಮತ್ತು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಶೇ 48.7 ರಷ್ಟು ಔಷಧಿಗಳಿವೆ.

ನಿಗಾ ಪಟ್ಟಿಯು ನಿರ್ದಿಷ್ಟ ಲಕ್ಷಣಗಳಿಗೆ ಮಾತ್ರ ಉಪಯೋಗಿಸುವಂಥ ಹೆಚ್ಚಿನ ಸಾಧ್ಯತೆಗಳಿರುವ ಬ್ರಾಡ್ ಸ್ಪೆಕ್ಟ್ರಮ್ ಆ್ಯಂಟಿಬಯೋಟಿಕ್ ​ಗಳನ್ನು ಒಳಗೊಂಡಿದೆ. ಭಾರತದಲ್ಲಿ ಆ್ಯಂಟಿಬಯೋಟಿಕ್ ನಿರೋಧಕ ಗುಣ ಉತ್ಪತ್ತಿಯಾಗಲು ಅವುಗಳ ಬೇಕಾಬಿಟ್ಟಿ ಉಪಯೋಗವೇ ಕಾರಣವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಔಷಧ ಅಂಗಡಿಗಳಲ್ಲಿ ಆ್ಯಂಟಿಬಯೋಟಿಕ್ ​ಗಳನ್ನು ನೇರವಾಗಿ ಮಾರಾಟ ಮಾಡುವುದು, ಅವುಗಳ ತಯಾರಿಕೆ ಮತ್ತು ಮಾರಾಟ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಧ್ಯದ ನಿಯಂತ್ರಕ ಮಾರ್ಗಸೂಚಿಗಳ ಸಮಸ್ಯೆಯಿಂದ ಆ್ಯಂಟಿಬಯೋಟಿಕ್ ​ಗಳ ಲಭ್ಯತೆ, ಮಾರಾಟ ಮತ್ತು ಬಳಕೆಯನ್ನು ಕ್ಲಿಷ್ಟಕರವಾಗಿಸಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

error: Content is protected !!
Scroll to Top
%d bloggers like this: