ಮಹಿಳೆಯರೇ ಗಮನಿಸಿ | ನಿಮ್ಮ ‘ಖಾಸಗಿ ಕ್ಷಣ’ ಗಳನ್ನು ಸೆರೆ ಹಿಡಿಯುತ್ತೆ ಈ ಬಲ್ಬ್ | ಎಚ್ಚರ

ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ ಹೊಸ ಹೊಸ ಅನ್ವೇಷಣೆಗಳ ಪ್ರತಿಫಲವಾಗಿ ಆವಿಷ್ಕಾರ ಗಳು ಹೆಚ್ಚಾಗಿ ಜನರ ಮುಂದೆ ನವೀನ ಮಾದರಿಗಳ ದಿನಉಪಯೋಗಿ ವಸ್ತುಗಳಿಂದ ಹಿಡಿದು, ಮೊಬೈಲ್, ಗ್ಯಾಜೆಟ್ ಎಲ್ಲದರಲ್ಲೂ ಮಾರ್ಪಾಡು ಹೊಂದುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಸೆಕ್ಯುರಿಟಿ ಕ್ಯಾಮೆರಾಗಳು ಸಾಕಷ್ಟು ಅಪ್‌ಡೇಟ್‌ ಫೀಚರ್ಸ್‌ಗಳಲ್ಲಿ ಲಭ್ಯವಾಗಿ, ಸ್ಮಾರ್ಟ್‌ ಟಚ್‌ ಪಡೆದುಕೊಂಡಿವೆ. ಹಾಗೆಯೇ ಗ್ರಾಹಕರಿಗೆ ಕೈಗೆಟುಕುವ ಬೆಲೆಯನ್ನು ನೀಡುತ್ತಿದೆ.

‘ಸಿಸಿಟಿವಿ ಬಲ್ಬ್’ ಗಳು ಆನ್ಲೈನ್ ಮತ್ತು ಅಫ್ ಲೈನ್ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ. ಸುರಕ್ಷತೆಯ ದೃಷ್ಟಿ ಯಿಂದ ಹೊಟೇಲ್, ಆಫೀಸ್, ಹಾಸ್ಪಿಟಲ್, ಮಾಲ್, ಎಲ್ಲ ಸ್ಥಳಗಳಲ್ಲಿ ಸುಭದ್ರವಾಗಿ ನೆಲೆಸಿರುವ ಸಿಸಿಟಿವಿ ಬಲ್ಬ್ ಗಳು ರಕ್ಷಣಾ ಕಾರ್ಯಕ್ಕಿಂತ ಹೆಚ್ಚು ಖಾಸಗಿ ಫೋಟೋಗಳನ್ನು ಸೆರೆಹಿಡಿದು ದುರುಪಯೋಗ ಮಾಡಿಕೊಳ್ಳುವ ಪ್ರಕರಣಗಳು ಏರಿಕೆಯಾಗುತ್ತಿರುವುದು ವಿಪರ್ಯಾಸ.

ಹೋಟೆಲ್, ಶಾಪಿಂಗ್ ಮಾಲ್ ಗಳಲ್ಲಿ ಮಹಿಳೆಯರ ಡ್ರೆಸಿಂಗ್ ರೂಮ್ ಗಳಲ್ಲಿ ಮಹಿಳೆಯರ ಖಾಸಗಿ ಫೋಟೊ, ವೀಡಿಯೋ ತುಣುಕುಗಳನ್ನು ಸೆರೆ ಹಿಡಿದು, ಹಣ ಲಪಟಾಯಿಸುವ ತಂತ್ರ, ಇಲ್ಲವೇ ವೈರಲ್ ಮಾಡುವ ಬೆದರಿಕೆ ಪ್ರಕರಣಗಳು ಹೆಚ್ಚಾಗಿದೆ. ಮಹಿಳೆಯರನ್ನೇ ಕೇಂದ್ರೀಕರಿಸಿ, ಅವರು ಓಡಾಡುವ ಸ್ಥಳಗಳಲ್ಲಿ ವೀಡಿಯೋ ಮಾಡಿ , ವೈರಲ್ ಮಾಡಿ ಸಲೀಸಾಗಿ ಕುಳಿತಲ್ಲೇ ಕಾಂಚಾಣ ಎಣಿಸುವ ಕಸುಬು ಕೂಡ ಕೆಲವರಿಗಿದೆ.

ಹೋಟೆಲ್ ಕೋಣೆಯಲ್ಲಿ ಯಾವುದೇ ಸ್ಪೈ ಕ್ಯಾಮೆರಾ ಇಲ್ಲವೇ ಸಿಸಿಟಿವಿ ಬಲ್ಬ್ ಅಳವಡಿಸಿದ್ದರೆ ನಿಮಗೆ ತಿಳಿಯಲು ಕೆಲವು ಸುಲಭ ಮಾರ್ಗಗಳಿವೆ. ಅವುಗಳು ಯಾವುದೆಂದು ಈ ಕೆಳಗೆ ನೀಡಲಾಗಿದೆ.

ಬಲ್ಬ್ ಗಳು ಮತ್ತು ಹೋಲ್ಡರ್ ಗಳ ಬಗ್ಗೆ ಗಮನ ಹರಿಸಬೇಕು. ಹೊಟೇಲ್ ನಲ್ಲಿ ತಂಗುವ ಕೋಣೆಯ ಬಲ್ಬ್ ಮತ್ತು ಹೋಲ್ಡರ್‌ನ್ನು ಎಚ್ಚರಿಕೆಯಿಂದ ಗಮನಿಸಿದಾಗ ಅದರಲ್ಲಿ ರಂಧ್ರಗಳಿದ್ದರೆ ಪರಿಶೀಲನೆ ನಡೆಸಬೇಕು. ರೂಮಿನಲ್ಲಿ ಎಷ್ಟೋ ಬಾರಿ ಸಾಮಾನ್ಯ ಬಲ್ಬ್ ನಂತೆ ಕಾಣುವ ಸಿಸಿಟಿವಿ ಬಲ್ಬ್ ಅಳವಡಿಕೆ ಆಗಿದ್ದರೂ ಗೊತ್ತಾಗದು. ಹಾಗಾಗಿ
ಮಹಿಳೆಯರು ವಿಶೇಷವಾಗಿ ಎಚ್ಚರ ವಹಿಸಬೇಕು.

ಡ್ರೆಸ್ಸಿಂಗ್ ರೂಮ್ ಇಲ್ಲವೇ ಹೊಟೇಲ್ ನ ರೂಮಿನಲ್ಲಿ ಎಲ್ಲಾದರೂ ಸಿಸಿಟಿವಿ ಕ್ಯಾಮರಾ ಇದ್ದರೆ ಲೈಟ್ ಆಫ್ ಮಾಡಿ ಪರಿಶೀಲಿಸಬೇಕು. ಕ್ಯಾಮೆರಾ ಕಣ್ಣು ಮಿಟುಕಿಸುತ್ತಲೇ ಇರುವುದರಿಂದ, ಲೈಟ್ ಆಫ್ ಮಾಡಿದ ಬಳಿಕ ಕೋಣೆಯಲ್ಲಿ ಲೈಟ್ ಮಿನುಗುವುದು ಕಂಡರೆ, ತಕ್ಷಣವೇ ಸ್ಥಳವನ್ನು ಪರಿಶೀಲಿಸಬೇಕು.

ಗಾಜಿನ ಮೇಲೆ ಫೋನ್ ಫ್ಲ್ಯಾಶ್ ನಿಂದ ಹೊಳೆಯುವ ಪ್ರತಿಫಲವನ್ನು ಸಹ ಪರಿಶೀಲಿಸಬಹುದು. ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳ ಸಹಾಯ ಪಡೆದು ಅಧಿಕೃತ ಅಪ್ಲಿಕೇಶನ್ ಸ್ಟೋರ್‌ನ ನೆರವಿನಿಂದ ಕ್ಯಾಮೆರಾದ ಬಗ್ಗೆ ಕಂಡುಹಿಡಿಯಬಹುದು.

ಫೋನ್ ‘ನ ಸಂವೇದಕಗಳ ಸಹಾಯದಿಂದ ಹಿಡನ್ ಕ್ಯಾಮೆರಾವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತದೆ. ಹಿಡನ್ ಕ್ಯಾಮೆರಾಗಳು ರೇಡಿಯೋ ಆವರ್ತನವನ್ನ ಉತ್ಪಾದಿಸುತ್ತವೆ. ಈ ಕಾರಣದಿಂದಾಗಿ ಅನುಮಾನಾಸ್ಪದ ಸ್ಥಳಗಳಲ್ಲಿ ಫೋನ್ ಕರೆಗಳನ್ನು ಮಾಡಿದಾಗ ಸಮಸ್ಯೆ ಕಂಡರೆ ಆ ಸ್ಥಳವನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ.
ಸಿಸಿಟಿವಿ ಕ್ಯಾಮರಾವನ್ನು ಗೋಡೆಗೆ, ರಂದ್ರಗಳಲ್ಲಿ ಮಾತ್ರವಲ್ಲದೆ, ಸಣ್ಣ ಪುಟ್ಟ ವಸ್ತುಗಳು, ಪುಸ್ತಕ, ಏರ್ ಫಿಲ್ಟರ್, ಟಿವಿ, ಪೆನ್, ವಾಲ್ ಕ್ಲಾಕ್, ಟಿಶ್ಯೂ ಬಾಕ್ಸ್ ಗಳಲ್ಲಿ ಕೂಡ ಇರಿಸಬಹುದು. ಹಾಗಾಗಿ ಮಹಿಳೆಯರು ಓಡಾಡುವ ಸ್ಥಳ ಗಳಲ್ಲಿ ಗಮನ ಹರಿಸಿ, ಜಾಗರೂಕರಾಗಿರಬೇಕು.

Leave A Reply

Your email address will not be published.